ಕರ್ನಾಟಕ

karnataka

ETV Bharat / state

ಸಿ.ಪಿ ಯೋಗೇಶ್ವರ್ ಈ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ ಅಂದರೆ ಪರೋಕ್ಷವಾಗಿ ನಮಗೆ ಸಹಾಯ ಮಾಡಿದಾಗೆ ಅಲ್ವಾ: ಡಿಕೆ ಬ್ರದರ್ಸ್​ ​

ಸಿ.ಪಿ ಯೋಗೇಶ್ವರ್​ ವಿರುದ್ಧ ರಾಮನಗರದಲ್ಲಿ ಡಿ.ಕೆ ಬ್ರದರ್ಸ್​ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

ಸಿ.ಪಿ ಯೋಗೇಶ್ವರ್ ಈ ಚುನಾವಣೆಗೂ ಸ್ಪರ್ಧೆ ಮಾಡಿಲ್ಲ ಅಂದರೆ ಪರೋಕ್ಷವಾಗಿ ನಮಗೆ ಸಹಾಯ ಮಾಡಿದಾಗೆ ಅಲ್ವಾ: ಡಿಕೆ ಬ್ರದರ್ಸ್​ ​
ಸಿ.ಪಿ ಯೋಗೇಶ್ವರ್ ಈ ಚುನಾವಣೆಗೂ ಸ್ಪರ್ಧೆ ಮಾಡಿಲ್ಲ ಅಂದರೆ ಪರೋಕ್ಷವಾಗಿ ನಮಗೆ ಸಹಾಯ ಮಾಡಿದಾಗೆ ಅಲ್ವಾ: ಡಿಕೆ ಬ್ರದರ್ಸ್​ ​

By ETV Bharat Karnataka Team

Published : Mar 16, 2024, 10:16 AM IST

ರಾಮನಗರ:ಕಳೆದ ಬಾರಿಯೂ ಚುನಾವಣೆಗೂ ಸಿ.ಪಿ ಯೋಗೇಶ್ವರ್ ಸಹಾಯ ಮಾಡಿದ್ದರು, ಈ ಬಾರಿಯೂ ಲೋಕಸಭೆಗೆ ಸ್ಪರ್ಧೆ ಮಾಡಿಲ್ಲ. ಹಾಗಾಗಿ ನಮಗೆ ಪರೋಕ್ಷವಾಗಿ ಸಹಾಯ ಮಾಡಿದಾಗೆಯೇ ಅಲ್ವಾ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸಿಪಿವೈಗೆ ಟಾಂಗ್ ಕೊಟ್ಟಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಸಹಾಯ ಮಾಡಿದ್ದರು. ಆದರೆ ಅವರು ಈ ಬಾರಿ ಸ್ಪರ್ಧೆ ಮಾಡಿಲ್ಲ. ಹಾಗಾಗಿ ನಮಗೆ ಸಹಾಯ ಮಾಡಿದಾಗೆಯೇ ಅಲ್ವ ಎಂದಿದ್ದಾರೆ.
ಸಿಪಿವೈ ಪುತ್ರಿ ನಿಶಾ ಯೋಗೇಶ್ವರ್ ಪಕ್ಷ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಚುನಾವಣೆ ಗೆಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ಕ್ಷೇತ್ರದ ಜನರು ನಿರ್ಧಾರ ಮಾಡುತ್ತಾರೆ‌ ಎಂದು ಹೇಳಿದರು.

ನಂತರ ಮೇಕೆದಾಟು ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್​, ಕೇಂದ್ರದಿಂದ ಈ ಯೋಜನೆಗೆ ಅನುಮತಿ ಕೊಟ್ಟರೆ 6 ತಿಂಗಳಲ್ಲಿ ಟೆಂಡರ್​ ಪ್ರಕ್ರಿಯೆ ಪೂರ್ಣಗೊಳಿಸಿ 3 ವರ್ಷದೊಳಗಡೆ ಯೋಜನೆಯನ್ನು ಸಂಪೂರ್ಣಗೊಳಿಸುತ್ತೇವೆ ಎಂದರು. ಇದೇ ವೇಳೆ ಮಾತನಾಡಿದ ಡಿಸಿಎಂ, ನಾನು ಜಲಸಂಪನ್ಮೂಲ ಖಾತೆ ವಹಿಸಿಕೊಂಡಿದ್ದೇ ಮೇಕೆದಾಟು ಯೋಜನೆಗಾಗಿ. ಇದಕ್ಕಾಗಿ ಈಗಾಗಲೇ ಲೆಕ್ಕ ಹಾಕಿದ್ದು, ಜಮೀನಗಳ ಬದಲಾವಣೆಗೂ ಸಹ ಯೋಜನೆ ರೂಪಿಸಿದ್ದೇವೆ ಎಂದೂ ತಿಳಿಸಿದರು.

ಇದನ್ನೂ ಓದಿ:ರಾಜ್ಯ ಬಿಜೆಪಿಯ ಅಂಕುಡೊಂಕು ಸರಿ ಪಡಿಸಲು ನನ್ನ ಸ್ಪರ್ಧೆ: ಕೆ.ಎಸ್. ಈಶ್ವರಪ್ಪ

ABOUT THE AUTHOR

...view details