ಬೆಂಗಳೂರು:ಅಪ್ರಾಪ್ತರಿಗೆ ವಾಹನ ನೀಡಿ ಅಪಘಾತದ ಜೊತೆಗೆ ಅಪಾಯಕಾರಿ ವ್ಹೀಲಿಂಗ್ ಮಾಡಲು ಪರೋಕ್ಷವಾಗಿ ಕಾರಣವಾಗಿದ್ದ ಆರು ಮಂದಿ ಪೋಷಕರಿಗೆ ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 25 ಸಾವಿರ ದಂಡ ವಿಧಿಸಿ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯ ಆದೇಶಿಸಿದೆ. ಅಪಾಪ್ತರಿಗೆ ವಾಹನ ಚಲಾಯಿಸಲು ನೀಡದಂತೆ ಸಂಚಾರ ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ ಪೋಷಕರು ನಿರ್ಲಕ್ಷ್ಯ ತೋರಿ ಮಕ್ಕಳ ಕೈಗೆ ದ್ವಿಚಕ್ರ ವಾಹನಗಳನ್ನು ನೀಡಿದ್ದರು.
ಈ ಪೈಕಿ ಅಜಾಗರೂಕತೆಯ ಚಾಲನೆಯಿಂದ ಇಬ್ಬರು ಮೂರು ಅಪಘಾತವೆಸಗಲು ಕಾರಣರಾದರೆ, ಇನ್ನು ಮೂವರು ವಾಹನ ಸವಾರರು ಅಪಾಯಕಾರಿ ವ್ಹೀಲಿಂಗ್ ಮಾಡಿ ಸಂಚಾರ ನಿಯಮ ಉಲಂಘಿಸಿದ್ದರು. ಕಾಮಾಕ್ಷಿಪಾಳ್ಯ ಟ್ರಾಫಿಕ್ ಪೊಲೀಸರು ಕಳೆದ ವರ್ಷ ಪ್ರತ್ಯೇಕ ಆರು ಪ್ರಕರಣಗಳನ್ನು ದಾಖಲಿಸಿ ಬಾಲ ನ್ಯಾಯಮಂಡಳಿಗೆ ಅಪ್ರಾಪ್ತ ವಾಹನ ಸವಾರರ ಪೋಷಕರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 18 ವರ್ಷದೊಳಗಿನ ಮಕ್ಕಳಿಗೆ ದ್ವಿಚಕ್ರ ವಾಹನ ಸವಾರ ಮಾಡಲು ಅವಕಾಶ ನೀಡಿದ ಆರು ಮಂದಿ ಪೋಷಕರಿಗೆ ಜುಲ್ಮಾನೆ ವಿಧಿಸಿದೆ.