ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಸರ್ಕಾರ ಪತನಕ್ಕೆ ಕ್ಷಣಗಣನೆ ಶುರುವಾಗಿದೆ: ಆರ್​ ಅಶೋಕ್ ಭವಿಷ್ಯ - Opposition Leader R Ashok

ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ನಿತ್ಯ ಟಾಕ್ ವಾರ್ ನಡೆಯುತ್ತಿದೆ. ಡಿ ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವಿನ ಕುಟುಂಬದ ವೈಯಕ್ತಿಕ ಜಗಳ ಇದು. ಇವರ ಜಗಳದಲ್ಲಿ ಬಿಜೆಪಿ ಎಂಟ್ರಿ ಆಗಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.

Leader of Opposition R Ashok
ಪ್ರತಿಪಕ್ಷ ನಾಯಕ ಆರ್ ಅಶೋಕ್ (Etv Bharat)

By ETV Bharat Karnataka Team

Published : May 10, 2024, 10:17 PM IST

ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಹಲವು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಮಹಾರಾಷ್ಟ್ರದಲ್ಲಿ ಏನಾಗಿದೆ ಅಂತ ಎಲ್ಲರೂ ಗೊತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರ‌ ಪತನ ಎನ್ನುವ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೌಟೇ ಇಲ್ಲ ಈ ಸರ್ಕಾರ ಉಳಿಯಲ್ಲ. ಸರ್ಕಾರ ಉಳಿಯಲ್ಲ ಅಂತ ಕಾಂಗ್ರೆಸ್ ನವರೇ ಹೇಳ್ತಿದ್ದಾರೆ. ಕಾಂಗ್ರೆಸ್ ಶಾಸಕರು ಅಭಿವೃದ್ಧಿ ಆಗಿಲ್ಲ ಅಂತ ಬೇಜಾರಲ್ಲಿದ್ದಾರೆ. ಕಾಂಗ್ರೆಸ್​ನವರಿಗೆ ಮಾನ ಮರ್ಯಾದೆ ಇಲ್ಲ, ಬರದ ಹಣ ಬಿಡುಗಡೆ ಮಾಡಿಲ್ಲ ಸರ್ಕಾರ ಬೀಳೋ ಹಂತಕ್ಕೆ ಬಂದಿದೆ. ಮುಂದೆ ಪಿಕ್ಚರ್ ಬಾಕಿ ಇದೆ. ಮಹಾರಾಷ್ಟ್ರದಲ್ಲಿ ಏನಾಗಿದೆ ಅಂತ ಎಲ್ಲರೂ ನೋಡಿದ್ದೀರಾ,‌ ಬಹಳ ಜನ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಸಂಪರ್ಕದಲ್ಲಿ ಇಲ್ಲ ಅಂತ ಹೇಳಲ್ಲ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ ಇದು ಪಾಪಿ ಸರ್ಕಾರ. ಅಭಿವೃದ್ಧಿ ಮಾಡದ ಸರ್ಕಾರ ಎಂದು ತಿಳಿಸಿದರು.

ಹೆಚ್​ಡಿಕೆ ಡಿಕೆಶಿ ಜಗಳದಲ್ಲಿ ಬಿಜೆಪಿ ಎಂಟ್ರಿ ಆಗಲ್ಲ:ಕುಮಾರಸ್ವಾಮಿ ವರ್ಸಸ್ ಡಿ ಕೆ ಶಿವಕುಮಾರ್ ಜಟಾಪಟಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ನಿತ್ಯ ಟಾಕ್ ವಾರ್ ನಡೆಯುತ್ತಿದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ.

ಡಿ ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವಿನ ಕುಟುಂಬದ ವೈಯಕ್ತಿಕ ಜಗಳ ಇದು. ಇಬ್ಬರ ಕೌಟುಂಬಿಕ ವೈಯಕ್ತಿಕ ಜಗಳದಿಂದ ರಾಜ್ಯದ ಜನರಿಗೆ ಅನ್ಯಾಯ ಆಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಇವರ ಕುಟುಂಬದ ಜಗಳದಲ್ಲಿ ಬಿಜೆಪಿ ಎಂಟ್ರಿ ಆಗಲ್ಲ. ಪ್ರಜ್ವಲ್ ಪ್ರಕರಣದಿಂದ ಮೈತ್ರಿ ಮೇಲೆ ಪರಿಣಾಮ ಆಗಲ್ಲ. ಮೈತ್ರಿ ಮುಂದುವರೆದುಕೊಂಡು ಹೋಗುತ್ತದೆ ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ಯಾವ ರೀತಿ ಆಗಬೇಕು ಅಂತ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ವಿಧಾನಸೌಧದ ಎದುರು ಬಸವಣ್ಣ ಪ್ರತಿಮೆ ಮಾಡಿದ್ದು ನಾವು, ಕಾಂಗ್ರೆಸ್ ನವರ ಗಮನ ಏನಿದ್ದರೂ ಓಲೈಕೆ, ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಳ ಮಾಡೋ ಕಡೆ ಇರುತ್ತದೆ ಎಂದರು.

ಇದನ್ನೂಓದಿ:ಹೆಚ್​ಡಿಕೆಯಿಂದ ಪ್ರಜ್ವಲ್​ ರೇವಣ್ಣ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ಹುನ್ನಾರ: ಲಕ್ಷ್ಮಣ್ ಆರೋಪ - M Laxman

ABOUT THE AUTHOR

...view details