ETV Bharat / state

ಬೆಂಗಳೂರಿನಲ್ಲಿ ಭಯೋತ್ಪಾದನಾ ಸಂಚು ಪ್ರಕರಣ: ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಭಾರತಕ್ಕೆ ಹಸ್ತಾಂತರ - ACCUSED EXTRADITED TO INDIA

ಪೂರ್ವ ಆಫ್ರಿಕಾದ ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಲಷ್ಕರ್-ಎ-ತೊಯ್ಬಾದ ಸದಸ್ಯನಾಗಿದ್ದ ಸಲ್ಮಾನ್ ರೆಹಮಾನ್ ಖಾನ್​ನನ್ನು ಬಂಧಿಸಿ, ಭಾರತಕ್ಕೆ ಹಸ್ತಾಂತರಿಸಲಾಗಿದೆ.

NIA
ಸಂಗ್ರಹ ಚಿತ್ರ (ANI)
author img

By ETV Bharat Karnataka Team

Published : Nov 28, 2024, 3:25 PM IST

ಬೆಂಗಳೂರು: ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಿ ಸಲ್ಮಾನ್ ರೆಹಮಾನ್ ಖಾನ್ ಎಂಬಾತನನ್ನು ಪೂರ್ವ ಆಫ್ರಿಕಾದ ರವಾಂಡದಲ್ಲಿ ಬಂಧಿಸಲಾಗಿದ್ದು, ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಸಿಬಿಐ ಮಾಧ್ಯಮ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. ಸಿಬಿಐನ ಜಾಗತಿಕ ಕಾರ್ಯಾಚರಣೆ ಘಟಕ, ಎನ್ಐಎ ಹಾಗೂ ಇಂಟರ್ಪೋಲ್‌ನ ನ್ಯಾಷನಲ್ ಸೆಂಟ್ರಲ್ ಬ್ಯುರೋ, ಕಿಗಾಲಿ ಸಂಘಟಿತ ಕಾರ್ಯಾಚರಣೆಯ ಫಲವಾಗಿ ಸಲ್ಮಾನ್ ರೆಹಮಾನ್ ಖಾನ್‌ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಅಂತಾರಾಷ್ಟ್ರೀಯ ನಿಷೇಧಿತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಸದಸ್ಯನಾಗಿದ್ದ ಸಲ್ಮಾನ್ ರೆಹಮಾನ್ ಖಾನ್, ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿದ್ದ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಟಿ.ನಾಸೀರ್ ಮತ್ತಿತರ ಭಯೋತ್ಪಾದಕ ಸಂಘಟನೆಯ ಸದಸ್ಯರ ಅಣತಿಯಂತೆ ದುಷ್ಕೃತ್ಯಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಕ್ರೋಢೀಕರಿಸುವ ಕೆಲಸದಲ್ಲಿ ಸಲ್ಮಾನ್ ರೆಹಮಾನ್ ಖಾನ್ ಹಾಗೂ ಸಹಚರರು ನಿರತರಾಗಿದ್ದರು.

ಬಂಧಿತನ ವಿರುದ್ಧದ ಆರೋಪಗಳೇನು?:ಪೋಕ್ಸೋ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಸಲ್ಮಾನ್ ರೆಹಮಾನ್ ಖಾನ್ 2018ರಿಂದ 2022ರವರೆಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ. ಜೈಲಿನಲ್ಲಿ ಸಲ್ಮಾನ್ ರೆಹಮಾನ್ ಖಾನ್‌ಗೆ ಭಯೋತ್ಪಾದಕ ಪ್ರಕರಣಗಳ ಆರೋಪಿ ಟಿ.ನಾಸೀರ್ ಪರಿಚಯವಾಗಿತ್ತು. ಜೈಲಿನಲ್ಲಿ ಸಲ್ಮಾನ್ ರೆಹಮಾನ್ ಖಾನ್ ಸೇರಿದಂತೆ ಕೆಲ ಸಹ ಕೈದಿಗಳನ್ನ ಬ್ರೈನ್ ವಾಶ್ ಮಾಡಿದ್ದ ನಾಸೀರ್, ಭಯೋತ್ಪಾದನೆಯೆಡೆಗೆ ಸೆಳೆದಿದ್ದ. ಶಿಕ್ಷೆ ಮುಗಿಸಿ ಹೊರಬಂದ ಬಳಿಕ ರೆಹಮಾನ್ ಖಾನ್, ಟಿ.ನಾಸೀರ್ ಅಣತಿಯಂತೆ ಸಹಚರರ ಸಹಾಯದಿಂದ ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳನ್ನು ಸಂಘಟಿಸಲು ಶಸ್ತ್ರಾಸ್ತ್ರ, ಸ್ಫೋಟಕಗಳ ಸಂಗ್ರಹಣೆಯಲ್ಲಿ ತೊಡಗಿದ್ದ.

ಆರೋಪಿಗಳ ವಿರುದ್ಧ ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಎನ್ಐಎ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ರೆಹಮಾನ್ ಖಾನ್ ಪತ್ತೆಗಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಎನ್ಐಎ ಅಧಿಕಾರಿಗಳು ಸಿಬಿಐಗೆ ಮನವಿ ಸಲ್ಲಿಸಿದ್ದರು. ಅದರನ್ವಯ ಜಾಗತಿಕ ತನಿಖಾ ಸಂಸ್ಥೆಗಳ ಮೂಲಕ ಆರೋಪಿಯ ಪತ್ತೆಗೆ ಅನುಕೂಲವಾಗುವಂತೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಕಳೆದ ಆಗಸ್ಟ್‌ನಲ್ಲಿ ಸಿಬಿಐ ಅಧಿಕಾರಿಗಳು ಇಂಟರ್ಪೋಲ್‌ಗೆ ಶಿಫಾರಸ್ಸು ಮಾಡಿದ್ದರು.

ರವಾಂಡಾದಲ್ಲಿದ್ದ ಆರೋಪಿಯನ್ನು ಕಿಗಾಲಿಯಿಯ ಇಂಟರ್ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋದ ಅಧಿಕಾರಿಗಳ ನೆರವಿನೊಂದಿಗೆ ಬಂಧಿಸಲಾಗಿದೆ. ಹಾಗೂ ಎನ್ಐಎ ಅಧಿಕಾರಿಗಳ ಭದ್ರತೆಯೊಂದಿಗೆ ನವೆಂಬರ್‌ 28ರಂದು ಆರೋಪಿಯನ್ನು ರವಾಂಡದಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಸಿಬಿಐನ ಪ್ರಕಟಣೆ ತಿಳಿಸಿದೆ.

ಇತರ ಇತ್ತೀಚಿನ ಹಸ್ತಾಂತರ: ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಉಗ್ರ ಬರ್ಕತ್ ಅಲಿ ಖಾನ್ ಎಂಬಾತನನ್ನು ನವೆಂಬರ್ 14ರಂದು ಭಾರತಕ್ಕೆ ಕರೆತರಾಗಿದೆ.ಗಲಭೆ ಮತ್ತು ಸ್ಫೋಟಕ ವಸ್ತುಗಳ ಬಳಕೆಯ ಅಪರಾಧಗಳಿಗಾಗಿ ಮುಂಬೈನ ಸಿಬಿಐ ಘಟಕಕ್ಕೆ ಅಗತ್ಯವಿದ್ದ ಆರೋಪಿ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ. 2022ರ ಡಿಸೆಂಬರ್‌ನಲ್ಲಿ ಆರೋಪಿಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು.

ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿ ರೈಹಾನ್ ಅರಬಿಕ್ಕಲಾಲರಿಕ್ಕಾಲ್ ಎಂಬಾತನನ್ನು ಭಾರತಕ್ಕೆ ಕರೆತರುವಲ್ಲಿ ಸಿಬಿಐ ಅಧಿಕಾರಿಗಳ ತಂಡ ನೆರವಾಗಿದೆ. ಆರೋಪಿಯನ್ನು ನವೆಂಬರ್ 10ರಂದು ಕೇರಳ ಪೊಲೀಸರ ತಂಡ ಭದ್ರತೆಯೊಂದಿಗೆ ಭಾರತಕ್ಕೆ ಕರೆತಂದಿದೆ. 2022ರಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ್ದ ರೈಹಾನ್ ಅರಬಿಕ್ಕಲಾಲರಿಕ್ಕಾಲ್ ವಿರುದ್ಧ ಕೇರಳದ ಮನ್ನಾರ್‌ಕಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇರಳ ಪೊಲೀಸರ ಮನವಿಯನ್ವಯ ಆರೋಪಿಯ ಪತ್ತೆಗಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ಪೋಲ್‌ಗೆ ಶಿಫಾರಸು ಮಾಡಿತ್ತು.

ಇದನ್ನೂ ಓದಿ: ಬೆಂಗಳೂರು ಸೇರಿ ದೇಶಾದ್ಯಂತ ಎನ್​ಐಎ ಕಾರ್ಯಾಚರಣೆ; ಅಲ್-ಖೈದಾ ಬೆಂಬಲಿಗರ ನೆಲೆಗಳ ಮೇಲೆ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.