ಕನ್ನಡದ ಬಿಗ್ ಬಾಸ್ ಮನೆಯೀಗ 'ಬಿಗ್ ಬಾಸ್ ಸಾಮ್ರಾಜ್ಯ'ವಾಗಿ ಬದಲಾಗಿದ್ದು, ಅಂದುಕೊಂಡಂತೆ ಸ್ಪರ್ಧಿಗಳ ನಡುವಿನ ಮನಸ್ತಾಪಗಳು ಹೆಚ್ಚಾಗಿವೆ. ಮನದೊಳಗೆ ಅಡಗಿದ್ದ ಕಿಚ್ಚು ಈಗ ಬಹಿರಂಗವಾಗಿ ವ್ಯಕ್ತವಾಗುತ್ತಿವೆ. ವಾದ ವಿವಾದಗಳು ಜೋರಾಗೇ ನಡೆಯುತ್ತಿವೆ. ಇದೀಗ ಮೋಕ್ಷಿತಾ ಅವರದ್ದು ಗೋಸುಂಬೆ ಆಟ, ಉಗ್ರಂ ಮಂಜು ರೋಗಿಷ್ಟ ರಾಜ ಎಂಬ ಹೇಳಿಕೆಗಳು ತ್ರಿವಿಕ್ರಮ್ ಮತ್ತು ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಅವರಿಂದ ಬಂದಿವೆ.
ಇಂಥದ್ದೊಂದು ಹೇಳಿಕೆ ''ಮೊಳಗಿದೆ ಬಂಡಾಯದ ಕೂಗು; ಯಾರಿಗೆ ಜಯ? ಯಾರಿಗೆ ಸೋಲು?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಅನಾವರಣಗೊಂಡ ಪ್ರೋಮೋದಲ್ಲಿ ಕಾಣಬಹುದು. ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ.
ಮಹಾರಾಜ ಮಂಜಣ್ಣ, ಯುವರಾಣಿ ಮೋಕ್ಷಿತಾ ಒಬ್ಬ ಪ್ರಜೆಯನ್ನು ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಡಿ ಎಂದು ಬಿಗ್ ಬಾಸ್ ಸೂಚಿಸಿದ್ದಾರೆ. ಅದರಂತೆ ಮೋಕ್ಷಿತಾ ಅವರು ತ್ರಿವಿಕ್ರಮ್ ಅವರನ್ನು ಮತ್ತು ಮಂಜು ಅವರು ರಜತ್ ಅವರ ಹೆಸರನ್ನು ಸೂಚಿಸಿ ತಮ್ಮ ಕಾರಣಗಳನ್ನು ಒದಗಿಸಿದ್ದಾರೆ.
ತ್ರಿವಿಕ್ರಮ್ ಅವ್ರು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಹೇಳೋವಂತ ಬುದ್ಧಿ ಇದೆ ಎಂದು ಮೋಕ್ಷಿತಾ ತಮ್ಮ ಕಾರಣಗಳನ್ನು ಒದಗಿಸಿದ್ದಾರೆ. ಈ ತರ ಗೂಸುಂಬೆ ಆಟ ಆಡೋದಾಗಿದ್ರೆ ನಾವು ಇನ್ನೊಂದ್ ಆಟ ಆಡ್ತಿದ್ವಿ ಎಂದು ತ್ರಿವಿಕ್ರಮ್ ಭವ್ಯಾ ಬಳಿ ಮೋಕ್ಷಿತಾರ ಬಗ್ಗೆ ಅಸಮಧಾನ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: 'ಬಚ್ಚನ್' ಸರ್ನೇಮ್ ಕೈಬಿಟ್ಟ ಐಶ್ವರ್ಯಾ ರೈ! ಐಶ್-ಅಭಿ ಡಿವೋರ್ಸ್ ರೂಮರ್ಸ್ ಉಲ್ಭಣ
ಇನ್ನು ರಜತ್ ಹೆಸರು ತೆಗೆದುಕೊಂಡ ಮಂಜು, ಅವರಿಗೆ ಸರಿಸಮಾನ ಯಾರೂ ಇಲ್ಲ. ಎಲ್ಲರೂ ಚಿಕ್ಕವರೇ ಎಂದು ಕಾಣುವಂತಹ ಮನೋಭಾವನೆ ಇದೆ ಎಂದು ತಮ್ಮ ಕಾರಣಗಳನ್ನು ಒದಗಿಸಿದ್ದಾರೆ. ಈ ಬಗ್ಗೆ ಅಸಮಧಾನಗೊಂಡ ರಜತ್, ಇವ್ರು ಆಗ್ಲೆ ಫಿಕ್ಸ್ ಆಗ್ಬಿಟ್ಟಿದ್ದಾರೆ, ವಿನ್ನರ್ ಇವ್ರು. ರನ್ನರ್ ಫಿಕ್ಸ್ ಮಾಡಿಬಿಟ್ಟಿದ್ದಾರೆ. ಆಚೆ ಬರೋಕೆ ಎಲ್ಲಿದೆ ಮುಖ. ಅಲ್ಲೇ ಕೂತಿರುತ್ತಾರೆ ಬೆಡ್ ಶೀಟ್ ಹಾಕಿಕೊಂಡು, ಒಳ್ಳೆ ರೋಗಿಷ್ಟನ ತರ. ರೋಗಿಷ್ಟ ರಾಜ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಧನುಷ್ - ಐಶ್ವರ್ಯಾ ರಜನಿಕಾಂತ್ ಡಿವೋರ್ಸ್: 18 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ಸ್ಟಾಪ್
50 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಒಂಭತ್ತನೇ ವಾರದಲ್ಲಿದ್ದು, ಮನೆಯೀಗ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಮನೆಯ ಕ್ಯಾಪ್ಟನ್ ಉಗ್ರಂ ಮಂಜು ರಾಜನಾದರೆ, ಮೋಕ್ಷಿತಾ ಯುವರಾಣಿ. ವಾರದ ಆರಂಭದಲ್ಲೇ ಬಿಗ್ ಬಾಸ್ ಸಾಮ್ರಾಜ್ಯದ ಕಾನ್ಸೆಪ್ಟ್ನಲ್ಲಿ ಟಾಸ್ಕ್ಗಳು ಶುರುವಾದವು. ಅರಮನೆ, ರಾಜ, ಪ್ರಜೆಗಳನ್ನು ಇಲ್ಲಿ ಕಾಣಬಹುದು. ತಮ್ಮ ಸ್ಥಾನಕ್ಕಾಗಿ ಎರಡು ತಂಡಗಳು ಹೋರಾಟಕ್ಕಿಳಿದಿದ್ದು, ಪರಸ್ಪರರ ನಡುವಿನ ಮನಸ್ತಾಪಗಳು ಹೊರಬರುತ್ತಿವೆ.