ETV Bharat / state

ಹೊಸಕೋಟೆ: ಪಿಯುಸಿ ವಿದ್ಯಾರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ - ATTACK ON PUC STUDENT

ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯ ಕೊಡಿಸುವತೆ ಹಲ್ಲೆಗೊಳಾದ ವಿದ್ಯಾರ್ಥಿ ತಂದೆ ಆರಿಫ್​ ಅವರು ಕೇಳಿಕೊಂಡಿದ್ದಾರೆ.

Hosakote Police Station
ಹೊಸಕೋಟೆ ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : Nov 28, 2024, 3:15 PM IST

Updated : Nov 28, 2024, 4:39 PM IST

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಪಿಯುಸಿ ವಿದ್ಯಾರ್ಥಿ ಮೇಲೆ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವಾರ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸೈಯದ್​ ಇಶಾನ್​ ಹಲ್ಲೆಗೊಳಗಾದ ವಿದ್ಯಾರ್ಥಿ. ನವೆಂಬರ್ 21ರ ಸಂಜೆ 6.30 ರ ಸಮಯದಲ್ಲಿ ಹೊಸಕೋಟೆ ನಗರದ ಕಣ್ಣೂರಹಳ್ಳಿ ರಸ್ತೆಯಲ್ಲಿ ಘಟನೆ ನಡೆದಿತ್ತು. ಹಾಕಿ ಸ್ಟಿಕ್ ಸೇರಿದಂತೆ ಮಾರಕಾಸ್ತ್ರಗಳಿಂದ ದುಷ್ಕಿರ್ಮಿಗಳ ಗ್ಯಾಂಗ್ ಹಲ್ಲೆ ನಡೆಸಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಸೈಯದ್ ಇಶಾನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ವಿದ್ಯಾರ್ಥಿ ತಂದೆ ಆರಿಫ್​ (ETV Bharat)

ವಿದ್ಯಾರ್ಥಿಯ ತಂದೆ ಆರಿಫ್​ ಮಾತನಾಡಿ, "ಮಗ ಟ್ಯೂಷನ್ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಕತ್ತು, ಕೈಗೆಲ್ಲಾ ಗಾಯ ಆಗಿದೆ. ಕತ್ತಿಗೆ ಲಾಂಗ್​ನಿಂದ ಹೊಡೆಯಲು ಬಂದಿದ್ದು, ಕೈ ಅಡ್ಡ ಹಿಡಿದ ಕಾರಣ, ಇಶಾನ್ ಕೈ ಬೆರಳು ಕಟ್ ಆಗಿದ್ದು ಮತ್ತೊಂದು ಕೈಗೆ ತೀವ್ರ ಗಾಯವಾಗಿದೆ. ಹತ್ತಕ್ಕೂ ಹೆಚ್ಚು ಯುವಕರು ಲಾಂಗು, ಮಚ್ಚು ವಿಕೆಟ್​ಗಳಿಂದ ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ" ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿಗಳನ್ನು ಬಂಧಿಸುವಂತೆ ವಿದ್ಯಾರ್ಥಿಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಲ್ಯಾಣ ಮಂಟಪದಿಂದಲೇ ಫೋಟೋಗ್ರಾಫರ್ ಕಿಡ್ನ್ಯಾಪ್, ಹಲ್ಲೆ ಆರೋಪ : 8 ಜನರ ಬಂಧನ

Last Updated : Nov 28, 2024, 4:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.