ETV Bharat / bharat

ಪ್ರತಿಪಕ್ಷಗಳ ದೂರು, ಅಭಿಪ್ರಾಯ ಪರಿಗಣಿಸಿದ್ದೇವೆ: ವಕ್ಫ್ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಸ್ಪಷ್ಟನೆ - WAQF BILL

ವಕ್ಫ್ ಜೆಪಿಸಿ ಸದಸ್ಯರ ಎಲ್ಲ ದೂರು ಮತ್ತು ಅಭಿಪ್ರಾಯಗಳನ್ನು ವರದಿಯಲ್ಲಿ ಸೇರಿಸಿರುವುದಾಗಿ ಜಗದಂಬಿಕಾ ಪಾಲ್ ಹೇಳಿದ್ದಾರೆ.

ಜಗದಂಬಿಕಾ ಪಾಲ್
ಜಗದಂಬಿಕಾ ಪಾಲ್ (ians)
author img

By ETV Bharat Karnataka Team

Published : Feb 3, 2025, 1:31 PM IST

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ, 2024ರ ಕುರಿತ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ವರದಿಯಲ್ಲಿ ಪ್ರತಿಪಕ್ಷಗಳ ಸಂಸದರು ಸಲ್ಲಿಸಿದ ಎಲ್ಲಾ ದೂರು ಹಾಗೂ ತಿದ್ದುಪಡಿಗಳನ್ನು ಸೇರಿಸಲಾಗಿದೆ ಎಂದು ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಹೇಳಿದ್ದಾರೆ. ತಮ್ಮ ದೂರುಗಳಿಗೆ ಸರ್ಕಾರ ಸ್ಪಂದಿಸಿಲ್ಲ ಎಂಬ ಅಸಾದುದ್ದೀನ್ ಒವೈಸಿ, ಸಂಜಯ್ ಸಿಂಗ್ ಹಾಗೂ ಇನ್ನೂ ಕೆಲ ನಾಯಕರ ಆರೋಪಗಳನ್ನು ಅವರು ತಳ್ಳಿ ಹಾಕಿದರು.

ಪ್ರಸ್ತುತ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾತನಾಡಿದ ಪಾಲ್, "ಜೆಪಿಸಿ ಸಭೆಗಳು ಮತ್ತು ಮಂಡಳಿಯ ಬಗ್ಗೆ ಪ್ರತಿಪಕ್ಷಗಳ ಹೇಳಿಕೆಗಳು ಸಂಪೂರ್ಣವಾಗಿ ನಿರಾಧಾರವಾಗಿವೆ. ಅವರು ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರ್ಕಾರವು ತಮ್ಮ ಮಾತನ್ನು ಕೇಳುತ್ತಿಲ್ಲ ಎಂಬ ಒವೈಸಿ ಮತ್ತು ಸಂಜಯ್ ಸಿಂಗ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ, ಅವರು ಲಿಖಿತವಾಗಿ ಸಲ್ಲಿಸಿದ ಎಲ್ಲಾ ದೂರುಗಳು ಮತ್ತು ತಿದ್ದುಪಡಿಗಳನ್ನು ವರದಿಯಲ್ಲಿ ಸೇರಿಸಲಾಗಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ." ಎಂದರು.

ಜೆಪಿಸಿಯ ಮುಂದಿನ ಸಭೆಯನ್ನು ಲೋಕಸಭಾ ಸ್ಪೀಕರ್ ನಿಗದಿಪಡಿಸಲಿದ್ದಾರೆ ಎಂದು ಪಾಲ್ ತಿಳಿಸಿದ್ದಾರೆ. "ಮುಂದಿನ ಸಭೆ ಯಾವಾಗ ನಡೆಯಲಿದೆ ಎಂಬುದನ್ನು ಸ್ಪೀಕರ್ ನಿರ್ಧರಿಸುತ್ತಾರೆ ಮತ್ತು ಈ ಬಗ್ಗೆ ಈಗಾಗಲೇ ಅಧ್ಯಕ್ಷರಿಗೆ ತಿಳಿಸಲಾಗಿದೆ. ವಕ್ಫ್ (ತಿದ್ದುಪಡಿ) ಮಸೂದೆ, 2024 ರ ವರದಿಯನ್ನು ಸ್ಪೀಕರ್ ಕಾರ್ಯಸೂಚಿಯಲ್ಲಿ ಸೇರಿಸಿದ ನಂತರ ಮಂಡಿಸಲಾಗುವುದು" ಎಂದು ಅವರು ಹೇಳಿದರು.

ತಕ್ಷಣವೇ ವರದಿ ಮಂಡಿಸಲಾಗುವುದಿಲ್ಲ: ಇದಲ್ಲದೆ ವರದಿಯನ್ನು ತಕ್ಷಣವೇ ಮಂಡಿಸಲಾಗುವುದಿಲ್ಲ ಎಂದು ಪಾಲ್ ಸ್ಪಷ್ಟಪಡಿಸಿದರು. "ಇಲ್ಲ, ವರದಿಯನ್ನು ಇಂದು ಮಂಡಿಸಲಾಗುತ್ತಿಲ್ಲ. ಸ್ಪೀಕರ್ ಅದನ್ನು ಕಾರ್ಯಸೂಚಿಯಲ್ಲಿ ಇರಿಸಿದಾಗ, ನಾವು ಜೆಪಿಸಿ ವಕ್ಫ್ ಚೌಕಟ್ಟಿನ ಆಧಾರದ ಮೇಲೆ ನಮ್ಮ ವರದಿಯನ್ನು ಪ್ರಸ್ತುತಪಡಿಸುತ್ತೇವೆ" ಎಂದು ಅವರು ಹೇಳಿದರು.

"ಈ ತಿದ್ದುಪಡಿಯನ್ನು ಸುಧಾರಣೆಗಾಗಿ ಮಾಡಲಾಗುತ್ತಿದೆ. ವರದಿಯನ್ನು ಮಂಡಿಸಿದ ನಂತರ, ಸರ್ಕಾರವು ಉತ್ತಮ ನಿರ್ಧಾರವನ್ನೇ ಮಾಡಿದೆ ಎಂಬುದು ಜನರಿಗೆ ಗೊತ್ತಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸಿದ ನಂತರ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಮೂಡಿದ ಹಾಗೆಯೇ ವಕ್ಫ್ ಕಾನೂನು ಅಲ್ಪಸಂಖ್ಯಾತರಿಗೆ ಪ್ರಯೋಜನವನ್ನು ನೀಡಲಿದೆ" ಎಂದು ಅವರು ಹೇಳಿದರು.

ಸರ್ಕಾರವು ತಮ್ಮ ಅಭಿಪ್ರಾಯಗಳನ್ನು ಪರಿಗಣಿಸುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪಗಳ ಮಧ್ಯೆ ವಕ್ಫ್ (ತಿದ್ದುಪಡಿ) ಮಸೂದೆ, 2024 ವಿವಾದಾತ್ಮಕ ವಿಷಯವಾಗಿಯೇ ಉಳಿದಿದೆ. ವಕ್ಫ್ ಆಸ್ತಿಗಳನ್ನು ನಿಯಂತ್ರಿಸಲು ಜಾರಿಗೆ ತರಲಾದ 1995 ರ ವಕ್ಫ್ ಕಾಯ್ದೆಯಡಿ ವ್ಯಾಪಕ ದುರಾಡಳಿತ, ಭ್ರಷ್ಟಾಚಾರ ಮತ್ತು ಅತಿಕ್ರಮಣಗಳು ನಡೆದಿವೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : 48 ಬೈಕ್​​​​​ ಕಳ್ಳತನ ಮಾಡಿದ್ದ ಖದೀಮನ ಬಂಧಿಸಿದ ಪೊಲೀಸರು: ಚೋರನಿಂದ ಬೈಕ್​​ ವಶಕ್ಕೆ ಪಡೆದ ಖಾಕಿ - BIKE THEFT CASE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.