ಕರ್ನಾಟಕ

karnataka

ETV Bharat / state

ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದ ಕವಯತ್ರಿ ಮಮ್ತಾ ಸಾಗರ್​ಗೆ ಸಿಎಂ ಅಭಿನಂದನೆ - Mamta Sagar - MAMTA SAGAR

ಜಾಗತಿಕ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಕವಯತ್ರಿ ಡಾ.ಮಮ್ತಾ ಸಾಗರ್ ಅವರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದಿಸಿದರು.

cm-siddaramaiah-felicitates-dr-mamta-sagar-for-global-literary-award
ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದ ಕವಯತ್ರಿ ಮಮ್ತಾ ಸಾಗರ್​ಗೆ ಸಿಎಂ ಅಭಿನಂದನೆ

By ETV Bharat Karnataka Team

Published : Apr 12, 2024, 1:29 PM IST

ಬೆಂಗಳೂರು : ಜಾಗತಿಕ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಕವಯತ್ರಿ ಡಾ.ಮಮ್ತಾ ಸಾಗರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದರು. ಏಪ್ರಿಲ್ 4 ರಿಂದ 6 ರವರೆಗೆ ನೈಜೀರಿಯಾದ ಅಬುಜ ನಗರದಲ್ಲಿ ಜಾಗತಿಕ ಬರಹಗಾರರ ಒಕ್ಕೂಟ ಆಯೋಜಿಸಿದ್ದ ಏಳನೇ ಅಂತಾರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಮಮ್ತಾ ಸಾಗರ್ ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ.

ಕವಯತ್ರಿ ಡಾ.ಮಮ್ತಾ ಸಾಗರ್ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ಸಮೇತ ಸಿಎಂ ನಿವಾಸ ಕಾವೇರಿಯಲ್ಲಿ ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾದರು. ವೈವಿಧ್ಯತೆ ಸಂಭ್ರಮಿಸುವ ಮೂಲಕ ಹೊಸ ಏಕತೆ ಕುರಿತು ಚಿಂತಿಸುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕರೆಕೊಟ್ಟ ಖ್ಯಾತ ಕವಿ ಡಾ. ಮಮ್ತಾ ಸಾಗರ್ ಅವರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದಿಸಿದರು. ಈ ಬಾರಿಯ ಪ್ರತಿಷ್ಠಿತ ಜಾಗತಿಕ ಒಕ್ಕೂಟದ ಗೌರವ ಪ್ರಶಸ್ತಿಯನ್ನು ನೋಬೆಲ್ ಪ್ರಶಸ್ತಿ ವಿಜೇತ ಬರಹಗಾರ ವೋಲೆ ಸೋಯೆಂಕಾ ಅವರಿಗೆ ಘೋಷಿಸಲಾಗಿದೆ.

ಇದನ್ನೂ ಓದಿ:ಚಿನ್ನಸ್ವಾಮಿ ಸ್ಟೇಡಿಯಂ ಸ್ಟಾಂಡ್​ಗಳಿಗೆ ದಿಗ್ಗಜ ಕ್ರಿಕೆಟಿಗರ ಹೆಸರಿಡಲು ಸಿಎಂ ಮನವಿ - Chinnaswamy Stadium

''ಜಾಗತಿಕ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಖ್ಯಾತ ಕವಯತ್ರಿ ಡಾ. ಮಮ್ತಾ ಸಾಗರ್ ಅವರು ಇಂದು ನನ್ನನ್ನು ಭೇಟಿಯಾದ ಸಂದರ್ಭದಲ್ಲಿ ಅವರ ಸಾಧನೆಯನ್ನು ಶ್ಲಾಘಿಸಿ, ಅಭಿನಂದಿಸಿದೆ. ಏಪ್ರಿಲ್ 4 ರಿಂದ 6 ರವರೆಗೆ ನೈಜೀರಿಯಾದ ಅಬುಜ ನಗರದಲ್ಲಿ ಜಾಗತಿಕ ಬರಹಗಾರರ ಒಕ್ಕೂಟ ಆಯೋಜಿಸಿದ್ದ ಏಳನೇ ಅಂತಾರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಮಮ್ತಾ ಸಾಗರ್ ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದಿರುವುದು ನಾಡಿಗೆ ಹೆಮ್ಮೆಯ ವಿಚಾರ. ವೈವಿಧ್ಯತೆಯನ್ನು ಸಂಭ್ರಮಿಸುವ ಮೂಲಕ ಹೊಸ ಏಕತೆಯ ಕುರಿತು ಚಿಂತಿಸುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಮಮ್ತಾ ಸಾಗರ್ ಅವರು ಜಗತ್ತಿಗೆ ಕರೆಕೊಟ್ಟಿದ್ದನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ'' ಎಂದು ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್​ ಮಾಡಿದ್ಧಾರೆ.

ಇದನ್ನೂ ಓದಿ:ಮಂಗಳೂರು: ಮೋದಿ ರೋಡ್ ಶೋ ಹಿನ್ನೆಲೆ ಎಸ್​ಪಿಜಿ ಅಧಿಕಾರಿಗಳಿಂದ ಭದ್ರತಾ ಪರಿಶೀಲನೆ

ABOUT THE AUTHOR

...view details