ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಆಟವಾಡುತ್ತಿದ್ದ ಮಕ್ಕಳು ಬಾವಿಗೆ ಬಿದ್ದು ಶವವಾಗಿ ಪತ್ತೆ! - CHILDREN FOUND DEAD IN A WELL

ಇಬ್ಬರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ತಾಯಿ ಕೆಲಸಕ್ಕೆ ಹೋಗಿ ಮರಳುವಷ್ಟರಲ್ಲಿ ಮಕ್ಕಳಿಬ್ಬರು ಬಾವಿಯಲ್ಲಿ ಹೆಣವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರಿನ ಕೊಪ್ಪದಲ್ಲಿ ನಡೆದಿದೆ.

Chikkamagaluru Children found dead death  ಮಕ್ಕಳು ಶವವಾಗಿ ಪತ್ತೆ
ಚಿಕ್ಕಮಗಳೂರು: ಆಟವಾಡುತ್ತಿದ್ದ ಮಕ್ಕಳು, ಬಾವಿಯಲ್ಲಿ ಶವವಾಗಿ ಪತ್ತೆ! (ETV Bharat)

By ETV Bharat Karnataka Team

Published : Dec 12, 2024, 7:23 AM IST

ಚಿಕ್ಕಮಗಳೂರು:ಆಟ ಆಡುತ್ತಿದ್ದಾಗ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಮ್ಮಡಿ ಎಸ್ಟೇಟ್​ನಲ್ಲಿ ನಡೆದಿದೆ.

ಸೀಮಾ(6), ರಾಧಿಕಾ (2) ಮೃತ ಮಕ್ಕಳು. ಮಧ್ಯ ಪ್ರದೇಶ ಮೂಲದ ಸುನೀತಾ ಎಂಬುವರು ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಲು ಬಂದಿದ್ದರು. ನಿನ್ನೆ ಕೂಲಿ ಕೆಲಸಕ್ಕಾಗಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕಾಫಿ ತೋಟಕ್ಕೆ ಹೋಗಿದ್ದ ತಾಯಿ ಕೂಲಿ ಮುಗಿಸಿ ಮತ್ತೆ ಮನೆಗೆ ಬಂದಾಗ ಮಕ್ಕಳು ನಾಪತ್ತೆಯಾಗಿದ್ದರು.

ಗಾಬರಿಗೊಂಡ ತಾಯಿ ಸುನಿತಾ ಸುತ್ತಮುತ್ತಲಿನ ಕಾರ್ಮಿಕರಿಗೆ ಮಕ್ಕಳು ಇಲ್ಲದಿರುವ ವಿಷಯವನ್ನು ತಿಳಿಸಿದಾಗ ಕಾರ್ಮಿಕರು ಸುತ್ತಲೂ ಪರಿಶೀಲನೆ ನಡೆಸಿದಾಗ ಸಮೀಪದ ಬಾವಿಯಲ್ಲಿ ಮಕ್ಕಳ ಮೃತ ದೇಹ ಪತ್ತೆಯಾಗಿದೆ. ತಾಯಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋದಾಗ ಆಟವಾಡುತ್ತಾ ಬಾವಿಯ ಬಳಿ ಬಂದು ಆಯಾ ತಪ್ಪಿ ಬಿದ್ದು ಪ್ರಾಣ ಕಳೆದು ಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬಾವಿಯಲ್ಲಿ ಕೇವಲ ಮೂರರಿಂದ ನಾಲ್ಕು ಅಡಿಯಷ್ಟು ನೀರಿನ ಮಟ್ಟ ಇದ್ದು ಕೈಗೆ ತಾಕುತ್ತದೆ. ಸದ್ಯ ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಮಚ್ಚಿನಿಂದ ಹೊಡೆದು ಪತ್ನಿಯ ಕೊಲೆ: ಪತಿ ಪೊಲೀಸ್​ ವಶಕ್ಕೆ

ABOUT THE AUTHOR

...view details