ಕರ್ನಾಟಕ

karnataka

ETV Bharat / state

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಲಿವ್ ಇನ್ ರಿಲೇಶನ್​ಶಿಪ್​ ಗೆಳೆಯನಿಂದ ವಂಚನೆ; ಎಫ್ಐಆರ್ ದಾಖಲು - Cheating Case

ಮದುವೆಯಾಗುವುದಾಗಿ ನಂಬಿಸಿದ ಯುವತಿಯ ಜೊತೆ ದೈಹಿಕ ಸಂಪರ್ಕ ಹೊಂದಿದ ಯುವಕ ನಂತರ ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

cheating case
ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಲಿವ್ ಇನ್ ರಿಲೇಶನ್ಸಿಪ್​ ಗೆಳೆಯನಿಂದ ವಂಚನೆ: ಎಫ್ಐಆರ್ ದಾಖಲು

By ETV Bharat Karnataka Team

Published : Apr 14, 2024, 9:53 PM IST

ಬೆಂಗಳೂರು:ಮದುವೆಯಾಗುವುದಾಗಿ ನಂಬಿಸಿದ ಯುವಕನೊಬ್ಬ, ಯುವತಿಯೊಂದಿಗೆ ದೈಹಿಕ ಸಂಪರ್ಕ ಹೊಂದಿ ಬಳಿಕ ವಂಚಿಸಿರುವ ಘಟನೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಕಂಪನಿಯೊಂದರ ಹೆಚ್.ಆರ್. ಅಸೋಸಿಯೇಟ್ ಆಗಿರುವ 27 ವರ್ಷದ ಯುವತಿಯೊಬ್ಬಳು ನೀಡಿರುವ ದೂರಿನ ಅನ್ವಯ ಆದಿತ್ಯನಾಥ್ ಸಿಂಗ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.

'ತನಗೆ 2022 ರಲ್ಲಿ ಜಿಮ್​ನಲ್ಲಿ ಆರೋಪಿಯ ಪರಿಚಯವಾಗಿತ್ತು. ನಂತರ ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ, ಆದಿತ್ಯನಾಥ್ ಮದುವೆಗೆ ಒಪ್ಪಿದ್ದರಿಂದ ಇಬ್ಬರು ರಿಲೇಶನ್ಶಿಪ್​ನಲ್ಲಿದ್ದೆವು. ಅದೇ ಸಂದರ್ಭದಲ್ಲಿ ಇಬ್ಬರ ನಡುವೆ ಪರಸ್ಪರ ಸಮ್ಮತಿಯೊಂದಿಗೆ ಅನೇಕ ಬಾರಿ ದೈಹಿಕ ಸಂಪರ್ಕ ಏರ್ಪಟ್ಟಿತ್ತು. ಆದರೆ, 2023ರ ನಂತರ ನನ್ನಿಂದ ಆದಿತ್ಯನಾಥ್ ಅಂತರ ಕಾಪಾಡಿಕೊಂಡಿದ್ದಾನೆ. ಮದುವೆ ಆಗುವಂತೆ ಕೇಳಿದ್ದಕ್ಕೆ ನಿರಾಕರಿಸಿ ತನ್ನ ಮೇಲೆ ಹಲ್ಲೆ ಮಾಡಿ, ಚಾಕುವಿನಿಂದ ಇರಿದು ಗೋಡೆಗೆ ತಲೆ ಚಚ್ಚಿ ಹತ್ಯೆಗೆ ಯತ್ನಿಸಿದ್ದಾನೆ' ಎಂದು ಯುವತಿ ದೂರಿದ್ದಾಳೆ.

ಯುವತಿಯ ದೂರಿನನ್ವಯ ಸದ್ಯ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಯುವಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿ ಯುವತಿಯರಿಗೆ ವಂಚನೆ, ಆರೋಪಿ ಸೆರೆ - Matrimonial Fraud

ABOUT THE AUTHOR

...view details