ಚಾಮರಾಜನಗರ: ಹನೂರು ತಾಲೂಕಿನ ಯೋಧರ ಗ್ರಾಮವೆಂದೇ ಪ್ರಸಿದ್ಧಿಯಾಗಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಯೋಧ ಕರ್ತವ್ಯದಲ್ಲಿರುವಾಗಲೇ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಪಂಜಾಬ್ ಗಡಿಯಲ್ಲಿ ಹೃದಯಾಘಾತದಿಂದ ಚಾಮರಾಜನಗರದ ಯೋಧ ಸಾವು - SOLDIER DIES OF HEART ATTACK - SOLDIER DIES OF HEART ATTACK
ಪಂಜಾಬ್ ಗಡಿಯಲ್ಲಿದ್ದ ಚಾಮರಾಜನಗರ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಗ್ರಾಮದಲ್ಲಿ ಮೌನ ಆವರಿಸಿದೆ.

Published : Aug 24, 2024, 7:20 AM IST
ಸುಳ್ವಾಡಿ ಗ್ರಾಮದ ಅಂತೋನಿ ಸ್ವಾಮಿ ಮತ್ತು ಅಂತೋನಿಆಮ್ಮಾಳ ದ್ವಿತೀಯ ಪುತ್ರ ಜ್ಞಾನ ಪ್ರಕಾಶ್ (34) ಮೃತ ಯೋಧ. ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಪಂಜಾಬ್ ಗಡಿಯಲ್ಲಿ ಕರ್ತವ್ಯದಲ್ಲಿರುವಾಗಲೇ ಗುರುವಾರ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಪಾರ್ಥಿವ ಶರೀರವನ್ನು ಪಂಜಾಬ್ ರಾಜ್ಯದಿಂದ ಸ್ವಗ್ರಾಮಕ್ಕೆ ಶನಿವಾರ ತರಲಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯೋಧರು ಪತ್ನಿ, ಏಳು ವರ್ಷದ ಮಗ ಮತ್ತು ತಂದೆ, ತಾಯಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಓದಿ:ಕಾಡು ಮಧ್ಯೆ ಮಳೆಯಲ್ಲೇ ಟರ್ಪಲ್ ಆಸರೆಯಲ್ಲಿ ತಂದೆಯ ಅಂತ್ಯಕ್ರಿಯೆ ನೆರವೇರಿಸಿದ 5 ವರ್ಷದ ಮಗಳು - Lack Of Crematorium