ಬೆಂಗಳೂರು: ನಗರದ ಸಿಗ್ನಲ್ಗಳಲ್ಲಿ ಮಕ್ಕಳನ್ನು ಬಳಸಿ ಭಿಕ್ಷಾಟನೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿ 47 ಮಕ್ಕಳನ್ನು ರಕ್ಷಿಸಿ 37 ಮಂದಿ ಪೋಷಕರನ್ನು ವಶಕ್ಕೆ ಪಡೆದಿದ್ದಾರೆ.
ಮಾನವ ಕಳ್ಳಸಾಗಣೆ ಆರೋಪ: 47 ಮಕ್ಕಳನ್ನು ರಕ್ಷಿಸಿದ ಸಿಸಿಬಿ, ಮಕ್ಕಳ ಕಲ್ಯಾಣ ಸಮಿತಿ - CCB Raid - CCB RAID
ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ 37 ಜನರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published : Apr 11, 2024, 1:50 PM IST
|Updated : Apr 11, 2024, 6:22 PM IST
ನಗರದ ಕೆ.ಜಿ.ಹಳ್ಳಿ ಹಾಗೂ ಫ್ರೇಜರ್ ಟೌನ್ ಸುತ್ತಮುತ್ತಲಿನ ಸಿಗ್ನಲ್ಗಳಲ್ಲಿ ಮಕ್ಕಳನ್ನು ಬಳಸಿಕೊಂಡು ಬಿಕ್ಷಾಟನೆ ನಡೆಸಲಾಗುತಿತ್ತು. ಈ ಬಗ್ಗೆ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಮಕ್ಕಳನ್ನ ಭಿಕ್ಷಾಟನೆಗೆ ಬಳಸುತ್ತಿದ್ದ 37 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ 47 ಮಕ್ಕಳನ್ನು ರಕ್ಷಿಸಲಾಗಿದ್ದು, ಸದ್ಯ ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ಒಪ್ಪಿಸಲಾಗಿದೆ. ಭಿಕ್ಷಾಟನೆಗೆ ತೊಡಗಿಸಿಕೊಂಡಿದ್ದ ಮಕ್ಕಳು ನಿಜವಾಗಲು ಪೋಷಕರ ಮಕ್ಕಳೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಮಾನವ ಕಳ್ಳಸಾಗಾಣಿಕೆ ಮೂಲಕ ಮಕ್ಕಳನ್ನು ನಗರಕ್ಕೆ ಕರೆತರಲಾಗಿದೆಯೇ ಎಂಬುದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.