ಕರ್ನಾಟಕ

karnataka

ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಸಂಸದನಾಗಿ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತೇನೆ: ಯದುವೀರ್ - Yaduveer Wadiyar

By ETV Bharat Karnataka Team

Published : Jun 3, 2024, 3:40 PM IST

Updated : Jun 3, 2024, 6:11 PM IST

ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಲೋಕಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯ ಕುರಿತು 'ಈಟಿವಿ ಭಾರತ್' ಜೊತೆ ಮಾತನಾಡಿದರು.

bjp-candidate-yaduveer-wadiyar
ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ (ETV Bharat)

ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ (ETV Bharat)

ಮೈಸೂರು:ಎಕ್ಸಿಟ್ ಪೋಲ್ ಪ್ರಕಾರ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಮಗೂ ಆ ರೀತಿಯ ವಿಶ್ವಾಸವಿದೆ. ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿಯಾಗುತ್ತಾರೆ. ನಾನೂ ಸಹ ಗೆದ್ದರೆ ಸಂಸದನಾಗಿ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತೇನೆ ಎಂದು ಮೈಸೂರು-ಕೊಡಗು ಲೋಕಸಭೆಯ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದರು.

ಇಂದು ನಡೆಯುತ್ತಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾನ ಮಾಡಲು ಆಗಮಿಸಿದ ಶಿಕ್ಷಕರೊಂದಿಗೆ ಮಾತುಕತೆ ನಡೆಸಿ, ಅವರೊಂದಿಗೆ ಪೋಟೋ ತೆಗೆಸಿಕೊಂಡ ಯದುವೀರ್ ಒಡೆಯರ್ ಬಳಿಕ ಈಟಿವಿ ಭಾರತ್ ಜೊತೆ ಮಾತಿಗೆ ಸಿಕ್ಕರು.

ಇಷ್ಟು ದಿನ ಕಾತರದಿಂದ ಕಾಯುತ್ತಿದ್ದ ದಿನ ಬಂದಿದೆ. ನಾಳೆ ಎಲ್ಲಾ ಕಾತರಗಳಿಗೂ ತೆರೆ ಬೀಳಲಿದೆ. ಸಮೀಕ್ಷೆಗಳು ಎನ್​ಡಿಎ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂಬ ವರದಿ ನೀಡಿರುವುದು ಖುಷಿಯಾಗಿದೆ. ಸಮೀಕ್ಷೆಗಳ ಪ್ರಕಾರ, ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ. ಅದೇ ರೀತಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೈಸೂರು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಯ ಮತಕೇಂದ್ರಗಳಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಗಳವರೆಗೆ ಮತದಾನ ನಡೆಯುತ್ತಿದೆ. ಈ ನಾಲ್ಕು ಜಿಲ್ಲೆಗಳಿಂದ 11,988 ಪುರುಷ, 9,550 ಮಹಿಳಾ ಹಾಗೂ ಓರ್ವ ತೃತೀಯ ಲಿಂಗಿ ಶಿಕ್ಷಕ ಮತದಾರರು ಸೇರಿದಂತೆ 21,549 ಶಿಕ್ಷಕ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ.

ದಕ್ಷಿಣ ಶಿಕ್ಷಕ ಕ್ಷೇತ್ರದ ಚುನಾವಣಾ ಕಣದಲ್ಲಿ 11 ಅಭ್ಯರ್ಥಿಗಳಿದ್ದು, ಕಾಂಗ್ರೆಸ್​ನಿಂದ ಮರಿತಿಬ್ಬೇಗೌಡ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿವೇಕಾನಂದ ನಡುವೆ ನೇರ ಪೈಪೋಟಿ ಇದ್ದು, ಮತ ಎಣಿಕೆ ಜೂನ್ 6ರಂದು ನಡೆಯಲಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮೈಸೂರು ಜಿಲ್ಲೆಯ 20, ಚಾಮರಾಜನಗರದ 5, ಮಂಡ್ಯದ 9 ಹಾಗೂ ಹಾಸನ ಜಿಲ್ಲೆಯ 10 ಮತ ಕೇಂದ್ರಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ.

ಇದನ್ನೂ ಓದಿ:ರಾಜ Vs ಸಾಮಾನ್ಯ; ಸಿಎಂ ತವರಲ್ಲಿ ಹೇಗಿದೆ ಸೋಲು-ಗೆಲುವಿನ ಲೆಕ್ಕಾಚಾರ? - MYSURU KODAGU CONSTITUENCY

Last Updated : Jun 3, 2024, 6:11 PM IST

ABOUT THE AUTHOR

...view details