ಬೆಳಗಾವಿ:"ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾವಿ ವತಿಯಿಂದ ಜೂ.22 ರಂದು ಬೆಳಗ್ಗೆ 9ರಿಂದ 3ರವರೆಗೆ ಬೆಳಗಾವಿ ಕ್ಲಬ್ ರಸ್ತೆಯಲ್ಲಿರುವ ಜ್ಯೋತಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ" ಎಂದು ಕ್ಲಬ್ ಅಧ್ಯಕ್ಷ ಸಂಜೀವ ದೇಶಪಾಂಡೆ ತಿಳಿಸಿದರು.
ಕ್ಲಬ್ ಅಧ್ಯಕ್ಷ ಸಂಜೀವ ದೇಶಪಾಂಡೆ (ETV Bharat) ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, "ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾವಿ ವತಿಯಿಂದ ಸಮಾಜ ಸೇವೆ, ಮ್ಯಾರಾಥಾನ್ ಸೇರಿ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದೇವೆ. ಅಲ್ಲದೇ ಕಳೆದ ವರ್ಷವೂ ಉದ್ಯೋಗ ಮೇಳ ನಡೆಸಿ, ಸುಮಾರು 600ಕ್ಕೂ ಅಧಿಕ ಯುವಕರು ನೌಕರಿ ಮಾಡುತ್ತಿದ್ದಾರೆ. ಅದೇ ರೀತಿ ಈ ವರ್ಷವೂ ಉದ್ಯೋಗ ಮೇಳ ನಡೆಸುತ್ತಿದ್ದೇವೆ" ಎಂದು ತಿಳಿಸಿದರು.
"ಊದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ಬೆಳಗಾವಿಯಲ್ಲಿ ಜೂನ್ 22ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಯುವಕರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಬೆಳಗಾವಿ ಚೇಂಬರ್ ಆಫ್ ಕಾಮರ್ಸ್, ಟಾಟಾ ಮೋಟರ್ಸ್ ಹಾಗೂ ಏಕಸ್ ಕಂಪನಿಯೊಂದಿಗೆ ಮಾತುಕತೆ ನಡೆಸಿದ್ದೇವೆ. ಅಲ್ಲದೆ, ಮುಂಬೈ, ಬೆಂಗಳೂರು, ಪುಣೆ, ಮೈಸೂರು, ಅಹ್ಮದಾಬಾದ್ ಕಂಪನಿಗಳಿಗೂ ಆಹ್ವಾನಿಸಲಾಗಿದೆ. 30ಕ್ಕೂ ಅಧಿಕ ಕಂಪನಿಗಳು ಭಾಗಿಯಾಗಲಿದ್ದು, ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಸೇರಿ ಮತ್ತಿತರ ಶಿಕ್ಷಣ ಕಲಿತ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗಗಳು ಸಿಗಲಿವೆ. ಈಗಾಗಲೇ 600 ಜನ ನೋಂದಣಿ ಮಾಡಿಸಿಕೊಂಡಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಉದ್ಯೋಗ ಮೇಳದ ಸದುಪಯೋಗ ಪಡಿಸಿಕೊಳ್ಳುವಂತೆ" ಕೇಳಿಕೊಂಡರು.
ಇದನ್ನೂ ಓದಿ:ಮೈಸೂರಲ್ಲಿ 2 ದಿನದ ‘ದೇಸಿ ಅಕ್ಕಿ ಮೇಳ' : ವಿವಿಧ ತಳಿಗಳ ಸೊಗಡಿನ ರುಚಿ ಸವಿಯಲು ಜಿಲ್ಲಾಧಿಕಾರಿ ಕರೆ - Desi akki Mela