ಶಿವಮೊಗ್ಗ:ಬಸವ ಜಯಂತಿ ನಿಮಿತ್ತ ಎಲ್ಲ ಕಡೆ ಬಸವೇಶ್ವರ ಪುತ್ಥಳಿ, ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಆಚರಿಸುವುದು ಸಾಮಾನ್ಯ. ಆದರೆ ಶಿವಮೊಗ್ಗ ಬೆಕ್ಕಿನ ಕಲ್ಮಠದ ಆವರಣದಲ್ಲಿ ಇಂದು ಬೆಳಗ್ಗೆ ಬೆಕ್ಕಿನ ಕಲ್ಮಠದ ಪೀಠಾಧಿಪತಿಗಳಾದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಅಂಬಲಿ ಹಂಚುವ ಮೂಲಕ ಚಾಲನೆ ನೀಡಿದರು.
ಅಂಬಲಿಯ ಜೊತೆ ಕಡಲೇ ಕಾಳು ಉಸಳಿಯನ್ನು ಸಹ ನೀಡಲಾಯಿತು. ಬೇಸಿಗೆಯ ರಸ ಬಿಸಿಲಿಗೆ ರಾಗಿ ಅಂಬಲಿ ತುಂಬಾ ತಂಪಾಗಿರುತ್ತದೆ. ಇದರಿಂದ ರಾಗಿ ಅಂಬಲಿಯನ್ನು ಹಂಚಲಾಯಿತು. ಈ ಮೂಲಕ ಬಸವ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.