ಕರ್ನಾಟಕ

karnataka

ETV Bharat / state

ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಸುನೀಲ್ ಅಪಹರಣ ಪ್ರಕರಣ ಸುಖಾಂತ್ಯ - BALLARI DOCTOR KIDNAP CASE

ಜಿಲ್ಲಾಸ್ಪತ್ರೆ ವೈದ್ಯ ಡಾ. ಸುನೀಲ್ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಬಳಿಕ ಬಳ್ಳಾರಿ ಹೊರವಲಯದಲ್ಲಿ ಬಿಟ್ಟು ಹೋಗಿದ್ದಾರೆ.

doctor sunil
ವೈದ್ಯ ಸುನೀಲ್ (ETV Bharat)

By ETV Bharat Karnataka Team

Published : Jan 25, 2025, 10:44 PM IST

ಬಳ್ಳಾರಿ:ಇಲ್ಲಿನ ಜಿಲ್ಲಾಸ್ಪತ್ರೆ ವೈದ್ಯ ಡಾ. ಸುನೀಲ್ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಅಪಹರಣಕಾರರು ಸುನೀಲ್ ಅವರನ್ನು ಬಳ್ಳಾರಿ ಹೊರವಲಯದಲ್ಲಿ ಬಿಟ್ಟಿದ್ದಾರೆ.

ಡಾ. ಸುನೀಲ್ ಅವರ ಮೇಲೆ ಹಲ್ಲೆ ಮಾಡಿ ಬಿಟ್ಟು ಹೋಗಲಾಗಿದೆ. ಈ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ಸುನೀಲ್ ಅವರಿಗೆ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ, ಸುನೀಲ್‌ ಬಳಿ ಪೊಲೀಸರು ದುಷ್ಕರ್ಮಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅಪಹರಣ ಮಾಡಿದವರು ಯಾರು ಎಂಬ ಬಗ್ಗೆ ಇದುವರೆಗೂ ಸುಳಿವು ಸಿಕ್ಕಿಲ್ಲ.

ಇಂದು ಬೆಳಗ್ಗೆ ಸುನೀಲ್ ಪಟೇಲ್ ನಗರದ ತಮ್ಮ ಮನೆಯ ಬಳಿ ವಾಕ್ ಮಾಡುವಾಗ ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದರು. ಘಟನೆಯ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಡಾ.ಸುನೀಲ್ ಅಪಹರಣ ಪ್ರಕರಣ ಬಳ್ಳಾರಿ ಜನರನ್ನು ಬೆಚ್ಚಿಬೀಳಿಸಿತ್ತು. ದುಷ್ಕರ್ಮಿಗಳು ವೈದ್ಯರ ಕಡೆಯವರಿಂದ 3 ಕೋಟಿ ರೂ. ಹಣ ಹಾಗೂ 3 ಕೋಟಿ ಮೌಲ್ಯದ ಬಂಗಾರಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಡಾ. ಸುನೀಲ್‌ ಅಪಹರಣ: ಭಾರಿ ಹಣಕ್ಕೆ ಬೇಡಿಕೆ

ABOUT THE AUTHOR

...view details