ETV Bharat / state

ರಾಯಚೂರು: ಲಕ್ಷಾಂತರ ರೂಪಾಯಿ ದುರ್ಬಳಕೆ ಆರೋಪ, ಇಬ್ಬರ ಗ್ರಾ.ಪಂ ಸದಸ್ಯತ್ವ ರದ್ದು - MEMBERSHIP CANCELLED

ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಹಿನ್ನೆಲೆ ಮಾನ್ವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರ ಸದಸ್ಯತ್ವ ಸ್ಥಾನ ರದ್ದು ಮಾಡಲಾಗಿದೆ.

Utakanur Grama Panchayat
ಉಟಕನೂರು ಗ್ರಾಮ ಪಂಚಾಯಿತಿ (ETV Bharat)
author img

By ETV Bharat Karnataka Team

Published : Jan 27, 2025, 4:51 PM IST

ರಾಯಚೂರು: ಕಾಮಗಾರಿಗಳ ಹೆಸರಲ್ಲಿ ಲಕ್ಷಾಂತರ ರೂ. ದುರ್ಬಳಕೆ ಮಾಡಿಕೊಂಡಿರುವ ಆರೋಪ ಹಿನ್ನೆಲೆ ಮಾನ್ವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರ ಸದಸ್ಯತ್ವ ಸ್ಥಾನ ರದ್ದುಗೊಳಿಸಲಾಗಿದೆ.

ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಕಾವೇರಿ ಹಾಗೂ ಹಾಲಿ ಅಧ್ಯಕ್ಷೆ ಈರಮ್ಮ ಸದಸ್ಯತ್ವ ರದ್ದುಗೊಳಿಸಿ, ಜೊತೆಗೆ ಮುಂದಿನ 6 ವರ್ಷಗಳವರೆಗೆ ಇಬ್ಬರೂ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಆದೇಶ ಹೊರಡಿಸಿದ್ದಾರೆ.

15ನೇ ಹಣಕಾಸಿನ ಯೋಜನೆ ಮಾರ್ಗಸೂಚಿ ಅನ್ವಯ ಹಣವನ್ನು ಬಳಸಿಕೊಳ್ಳಬೇಕು. ಆದರೆ ನಿಯಮ ಬಾಹಿರವಾಗಿ ಒಟ್ಟು 16 ಲಕ್ಷದ 96 ಸಾವಿರ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಈ ಸಂಬಂಧ ಇಬ್ಬರ ಸದಸ್ಯತ್ವ ರದ್ದುಪಡಿಸಲಾಗಿದೆ. ಉಟಕನೂರು ಗ್ರಾಮ ಪಂಚಾಯತ್​ ಪಿಡಿಒ ರಾಮಪ್ಪ ನಡಗೇರಿ ವಿರುದ್ಧ ಇಲಾಖೆ ವಿಚಾರಣೆ ನಡೆಸುತ್ತಿದ್ದು, ವಿಚಾರಣಾ ವರದಿ ಅನ್ವಯ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಆದೇಶಿಸಲಾಗಿದೆ.

ಇದನ್ನೂ ಓದಿ: ಟಿ.ಬೇಗೂರು ಪಿಡಿಒ ಲೋಕಾಯುಕ್ತ ಬಲೆಗೆ, ಕಚೇರಿಯಲ್ಲಿಯೇ 20 ಸಾವಿರ ಲಂಚ ಪಡೆದ ಪಿಡಿಒ

ಇದನ್ನೂ ಓದಿ: ಮೈಸೂರು: ಗಣರಾಜ್ಯೋತ್ಸವ ಆಚರಿಸದ ಗ್ರಾಪಂ, ಸ್ಥಳೀಯರಿಂದ ಆಕ್ರೋಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.