ಕರ್ನಾಟಕ

karnataka

ETV Bharat / state

'ಮುಡಾ ಹಗರಣ ಬಿಜೆಪಿಗೆ ತಿರುಗುಬಾಣವಾದರೂ ಎದುರಿಸಲು ಸಿದ್ಧ, ಸೂಕ್ತ ತನಿಖೆ ನಡೆಸಿ' - B Y Vijayendra

ಮೈಸೂರು ಮುಡಾ ಹಗರಣದ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇದು ಬಿಜಪಿಗೆ ತಿರುಗು ಬಾಣವಾದರೂ ಎದುರಿಸಲು ಸಿದ್ಧ ಎಂದು ತಿಳಿಸಿದ್ದಾರೆ.

By ETV Bharat Karnataka Team

Published : Jul 3, 2024, 11:31 AM IST

ಬಿ.ವೈ ವಿಜಯೇಂದ್ರ
ಬಿ.ವೈ.ವಿಜಯೇಂದ್ರ (ETV Bharat)

ಬೆಂಗಳೂರು: ಮೈಸೂರು ಮುಡಾ ಹಗರಣ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಇದು ಬಿಜೆಪಿಗೆ ತಿರುಗು ಬಾಣವಾದರೂ ಎದುರಿಸಲು ನಾವು ಸಿದ್ಧರಿದ್ದೇವೆ. ಆದರೆ ಸೂಕ್ತ ತನಿಖೆಯಾಗಲೇಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಶಿವಾನಂದ ವೃತ್ತದ ಸಮೀಪದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮುಡಾ ಹಗರಣ ದೊಡ್ಡ ಹಗರಣ. ಸಿಎಂ ಮೈಸೂರಿನವರು. ಅವರ ಗಮನಕ್ಕೆ ಬಾರದೆ ಹಗರಣ ನಡೆದಿರೋದಿಲ್ಲ. ಅವರೇ ಸ್ವತಃ ಹಣಕಾಸು ಸಚಿವರು. ಯಾವೆಲ್ಲಾ ಹಗರಣ ನಡೆದಿದೆಯೋ ಎಲ್ಲವನ್ನೂ ತನಿಖೆ ಮಾಡಬೇಕು. ಬಿಜೆಪಿಗೆ ತಿರುಗುಬಾಣವಾದರೂ ಎದುರಿಸುತ್ತೇವೆ. ಬೈರತಿ ಸುರೇಶ್ ಅವರು ಸಿಎಂಗೆ ಪರಮಾಪ್ತರಿದ್ದಾರೆ. ಹಾಗಾಗಿ, ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ದಿನಕ್ಕೊಂದು ಹಗರಣ ನಡೆಯುತ್ತಿದೆ. ಹಗಲು ದರೋಡೆ ಮಾಡುತ್ತಿದ್ದಾರೆ. ಸಿಎಂ ಮನೆ ಮುತ್ತಿಗೆಗೆ ಹೊರಟರೆ ಬಂಧಿಸುವ ಕೆಲಸ ನಡೆಯುತ್ತಿದೆ. ಭ್ರಷ್ಟಾಚಾರ ವಿರೋಧಿಸಿ ಹೋರಾಟ ಮಾಡುತ್ತಿದ್ದೇವೆ. ಹಲವಾರು ಹಗರಣ ನಡೆದಿದೆ ಎಲ್ಲವೂ ತನಿಖೆಯಾಗಲಿ ಎಂದರು.

ಇದನ್ನೂ ಓದಿ:ಹು-ಧಾ ಪೊಲೀಸ್ ಕಮೀಷನರೇಟ್ ವಿಶೇಷ ಕಾರ್ಯಾಚರಣೆ: 248 ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ - Police Special Operation

ABOUT THE AUTHOR

...view details