ಚಂಡೀಗಢ: ಹರಿಯಾಣದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ನಡೆದ ಮತದಾನ ಮುಕ್ತಾಯವಾಗಿದೆ. ಸಾಯಂಕಾಲ 5 ಗಂಟೆಯವೆರೆಗೆ ಶೇ.61 ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಚುನಾವಣಾ ಕಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದು, ಅವರ ಭವಿಷ್ಯ ಮತಪೆಟ್ಟಿಗೆ ಸೇರಿದೆ.
ಚುನಾವಣಾ ಆಯೋಗವು ಮುಕ್ತ, ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಂಡಿತ್ತು. ಒಟ್ಟು 1,031 ಅಭ್ಯರ್ಥಿಗಳು ವಿಧಾನಸಭಾ ಚುನಾವಣಾ ಅಖಾಡದಲ್ಲಿದ್ದಾರೆ. 20 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ರಾಜ್ಯದ 2 ಕೋಟಿಗೂ ಹೆಚ್ಚು ಮತದಾರರು ಮತ ಹಕ್ಕು ಹೊಂದಿದ್ದರು.
#WATCH | Olympic medalist Manu Bhaker casts her vote at a polling station in Jhajjar for the #HaryanaElection2024 pic.twitter.com/jPXiQ2zwJf
— ANI (@ANI) October 5, 2024
ಈ ಬಾರಿಯ ವಿಧಾನಸಭೆ ಚುನಾವಣೆಯು ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದರೆ, ಮತ್ತೊಂದೆಡೆ ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಪುನಃ ತನ್ನ ತೆಕ್ಕೆಗೆ ಪಡೆಯುವ ನಿರೀಕ್ಷೆಯಲ್ಲಿದೆ. ಬಿಜೆಪಿ, ಎಎಪಿ, ಕಾಂಗ್ರೆಸ್, ಜೆಜೆಪಿ, ಐಎನ್‌ಎಲ್‌ಡಿ, ಬಿಎಸ್‌ಪಿ ಹಾಗೂ ಎಎಸ್‌ಪಿ ಸೇರಿದಂತೆ ಸಾವಿರಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯವು ಇಂದು ಇವಿಎಂಗಳಲ್ಲಿ ಭದ್ರವಾಗಿದೆ.
ಮೊದಲ ವೋಟ್ ಮಾಡಿದ ಮನು ಭಾಕರ್: ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರು ತಮ್ಮ ಮೊದಲ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, ''ಈ ದೇಶದ ಯುವ ಜನತೆಯಾಗಿ ಅತ್ಯುತ್ತಮ ಅಭ್ಯರ್ಥಿಗೆ ಮತ ಚಲಾಯಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸಣ್ಣ ಹೆಜ್ಜೆಗಳೂ ಮುಂದೆ ದೊಡ್ಡ ಗುರಿಗಳಿಗೆ ಮುಖ್ಯವಾಗಿವೆ. ಮೊದಲ ಬಾರಿಗೆ ಮತ ಹಾಕಿದ್ದೇನೆ'' ಎಂದು ಮನು ಭಾಕರ್ ಹೇಳಿದರು.
#WATCH | On casting her first vote, Olympic medalist Manu Bhaker says, " being the youth of this country, it is our responsibility to cast our vote for the most favourable candidate. small steps lead to big goals... i voted for the first time..." https://t.co/806sYLcpoe pic.twitter.com/vQ5j4m7fFB
— ANI (@ANI) October 5, 2024
ಸಚಿವರಾಗುವುದು ನನ್ನ ಕೈಯಲ್ಲಿಲ್ಲ ಎಂದ ಫೋಗಟ್: ಜುಲಾನಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಚಾರ್ಖಿ ದಾದ್ರಿಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, ''ಇದು ಹರಿಯಾಣಕ್ಕೆ ದೊಡ್ಡ ಹಬ್ಬ ಮತ್ತು ರಾಜ್ಯದ ಜನರಿಗೆ ಬಹಳ ದೊಡ್ಡ ದಿನವಾಗಿದೆ. ಪ್ರತಿಯೊಬ್ಬರೂ ಮತ ಚಲಾಯಿಸುವಂತೆ ರಾಜ್ಯದ ಜನತೆಗೆ ಮನವಿ ಮಾಡುತ್ತಿದ್ದೇನೆ. 10 ವರ್ಷಗಳ ಹಿಂದೆ ಭೂಪಿಂದರ್ ಹೂಡಾ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಕ್ರೀಡಾ ಕ್ಷೇತ್ರ ಚೆನ್ನಾಗಿತ್ತು. ಸಚಿವರಾಗುವುದು ನನ್ನ ಕೈಯಲ್ಲಿಲ್ಲ, ಹೈಕಮಾಂಡ್ ನಿರ್ಣಯ'' ಎಂದು ಹೇಳಿದ್ದರು.
'ಮತದಾನದಲ್ಲಿ ಹೊಸ ದಾಖಲೆ ನಿರ್ಮಿಸಿ' ಮೋದಿ ಕರೆ- ಹರಿಯಾಣ ವಿಧಾನಸಭೆಯ 90 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 'ಮತದಾನದಲ್ಲಿ ಹೊಸ ದಾಖಲೆ ನಿರ್ಮಿಸಿ' ಎಂದು ಪ್ರಧಾನಿ ನರೇಂದ್ರ ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಹೀಗೆ "ಹರಿಯಾಣ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವದ ಈ ಪವಿತ್ರ ಹಬ್ಬದಲ್ಲಿ ಎಲ್ಲರೂ ಭಾಗಿಗಳಾಗಿ ಮತ್ತು ಮತದಾನದಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಲು ನಾನು ಎಲ್ಲ ಮತದಾರರಲ್ಲಿ ಮನವಿ ಮಾಡುತ್ತೇನೆ. ಮೊದಲ ಬಾರಿಗೆ ಮತ ಚಲಾಯಿಸಲಿರುವ ರಾಜ್ಯದ ಎಲ್ಲಾ ಯುವ ಸ್ನೇಹಿತರಿಗೆ ನನ್ನ ವಿಶೇಷ ಶುಭಾಶಯಗಳು" ಎಂದು ತಿಳಿಸಿದ್ದರು.
आज हरियाणा विधानसभा चुनाव के लिए वोटिंग है। सभी मतदाताओं से मेरी अपील है कि वे लोकतंत्र के इस पावन उत्सव का हिस्सा बनें और मतदान का एक नया रिकॉर्ड कायम करें। इस अवसर पर पहली बार वोट डालने जा रहे राज्य के सभी युवा साथियों को मेरी विशेष शुभकामनाएं।
— Narendra Modi (@narendramodi) October 5, 2024
ಎಲ್ಲರೂ ಮನೆಗಳಿಂದ ಹೊರಬಂದು ಮತಹಾಕಿ ಎಂದ ರಾಹುಲ್: "ರಾಜ್ಯದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮನೆಗಳಿಂದ ಹೊರಗೆ ಬಂದು ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ" ಲೋಕಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ. ಎಕ್ಸ್ನಲ್ಲಿನ ಪೋಸ್ಟ್‌ನಲ್ಲಿ, ''ಹರಿಯಾಣದ ನನ್ನ ಸಹೋದರ ಸಹೋದರಿಯರೇ, ಇಂದು ರಾಜ್ಯದಲ್ಲಿ ಅತ್ಯಂತ ಮಹತ್ವದ ಚುನಾವಣೆಯಿದೆ - ರಾಜ್ಯದ ಎಲ್ಲಾ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮನೆಗಳಿಂದ ಹೊರಬಂದು ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ ಮನವಿ. ರೈತರ ಏಳಿಗೆಗಾಗಿ - ಯುವಕರ ಉದ್ಯೋಗಕ್ಕಾಗಿ - ಮಹಿಳೆಯರ ಸುರಕ್ಷತೆ ಮತ್ತು ಗೌರವಕ್ಕಾಗಿ ಪ್ರತಿ ವರ್ಗದ ಭಾಗವಹಿಸುವಿಕೆಗಾಗಿ - ಸಾಮಾಜಿಕ ಭದ್ರತೆಗಾಗಿ ಪ್ರತಿ ಕುಟುಂಬದ ಯೋಗಕ್ಷೇಮಕ್ಕಾಗಿ ನೀವು ಕಾಂಗ್ರೆಸ್‌ಗೆ ನೀಡುವ ಪ್ರತಿಯೊಂದು ಮತವೂ ಸಂವಿಧಾನವನ್ನು ರಕ್ಷಿಸುತ್ತದೆ ಮತ್ತು ನಿಮ್ಮದಾಗುತ್ತದೆ. ಬಿಜೆಪಿಯ ದೌರ್ಜನ್ಯದ ವಿರುದ್ಧ ಇದುವೇ ಅಸ್ತ್ರ. ಹರಿಯಾಣದಲ್ಲಿ 36 ಸಮುದಾಯಗಳ ಸರ್ಕಾರ ರಚನೆಯಾಗಬೇಕು, ಎಲ್ಲರ ಸಹಭಾಗಿತ್ವದ ಸರ್ಕಾರ, ನ್ಯಾಯದ ಸರ್ಕಾರ - ಕಾಂಗ್ರೆಸ್ ಸರ್ಕಾರ. #HaathBadlegaHalaat" ಎಂದು ಪೋಸ್ಟ್ ಮಾಡಿದ್ದರು.
#WATCH | Congress candidate from Julana Assembly Constituency Vinesh Phogat arrives at a polling station in Charkhi Dadri to cast her vote for #HaryanaElelction
— ANI (@ANI) October 5, 2024
She says, " it is a huge festival for haryana and a very big day for the people of the state. i am making an appeal to… pic.twitter.com/7LoYTR0Xvl
ಕಣದಲ್ಲಿ ಪ್ರಮುಖ ಅಭ್ಯರ್ಥಿಗಳು: ಚುನಾವಣಾ ಕದನದಲ್ಲಿ, ಹಾಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ (ಲದ್ವಾ ಕ್ಷೇತ್ರ), ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ (ಗರ್ಹಿ ಸಂಪ್ಲಾ-ಕಿಲೋಯ್), ಮಾಜಿ ಉಪ ಮುಖ್ಯಮಂತ್ರಿ ದುಶ್ಯಂತ್ ಚೌತಾಲಾ (ಉಚಾನ ಕಲಾನ್), ಕಾಂಗ್ರೆಸ್ನ ವಿನೇಶ್ ಫೋಗಟ್ ಹಾಗೂ ಜೆಜೆಪಿಯ ದುಶ್ಯಂತ್ ಚೌತಾಲಾ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಸ್ವತಂತ್ರ ಅಭ್ಯರ್ಥಿಗಳಲ್ಲಿ, ಹಿಸಾರ್‌ನಿಂದ ಸ್ಪರ್ಧಿಸುತ್ತಿರುವ ಸಾವಿತ್ರಿ ಜಿಂದಾಲ್, ರಾನಿಯಾದಿಂದ ರಂಜಿತ್ ಚೌತಾಲಾ ಮತ್ತು ಅಂಬಾಲಾ ಕ್ಯಾಂಟ್‌ನಿಂದ ಕಣದಲ್ಲಿರುವ ಚಿತ್ರಾ ಸರ್ವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಬಿಗಿ ಪೊಲೀಸ್ ಭದ್ರತೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹರಿಯಾಣ ಪೊಲೀಸರು ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. 21,196 ಗೃಹರಕ್ಷಕ ದಳದ ಸಿಬ್ಬಂದಿ, 29,462 ಪೊಲೀಸರು ಸೇರಿದಂತೆ 10,403 ಎಸ್‌ಪಿಒಗಳನ್ನು ನಿಯೋಜಿಸಲಾಗಿತ್ತು.
ಅಗತ್ಯ ಸಂದರ್ಭಗಳಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಕುರಿತು ಪ್ರತಿ ಹಂತದ ಅಧಿಕಾರಿಗಳು ಮತ್ತು ಪೊಲೀಸರಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ ಎಂದು ಡಿಜಿಪಿ ಶತ್ರುಜಿತ್ ಕಪೂರ್ ಹೇಳಿದ್ದರು.
ಓದಿ: ಸ್ಮೈಲ್ ಪ್ಲೀಸ್! ವಿಶ್ವ ನಗುವಿನ ದಿನ: ನಿಮ್ಮ ನಗು ಅನೇಕ ಸಮಸ್ಯೆಗಳಿಗೆ ರಾಮಬಾಣ - World Smile Day