ಕರ್ನಾಟಕ

karnataka

ETV Bharat / state

ಈಶ್ವರಪ್ಪ ಸುಳ್ಳು ಹೇಳಿ ನಾಮಪತ್ರ ಸಲ್ಲಿಕೆಗೆ ಕಾರ್ಯಕರ್ತರನ್ನು ಕರೆದೊಯ್ದಿದ್ದರು: ಬಿ. ವೈ ರಾಘವೇಂದ್ರ - B Y Raghavendra - B Y RAGHAVENDRA

ಮೋದಿ ಪರವಾಗಿ ಮತ ಚಲಾಯಿಸುವಂತೆ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.

ಈಶ್ವರಪ್ಪ ಸುಳ್ಳು ಹೇಳಿ ನಾಮಪತ್ರ ಸಲ್ಲಿಕೆಗೆ ಕಾರ್ಯಕರ್ತರನ್ನು ಕರೆದೊಯ್ದಿದ್ದಾರೆ
ಈಶ್ವರಪ್ಪ ಸುಳ್ಳು ಹೇಳಿ ನಾಮಪತ್ರ ಸಲ್ಲಿಕೆಗೆ ಕಾರ್ಯಕರ್ತರನ್ನು ಕರೆದೊಯ್ದಿದ್ದಾರೆ

By ETV Bharat Karnataka Team

Published : Apr 13, 2024, 6:09 PM IST

ಶಿವಮೊಗ್ಗ:ಬಿಜೆಪಿಯಹಿಂದುತ್ವದ ನಾಮಪತ್ರ ಸಲ್ಲಿಕೆ ಅಂತ ಸುಳ್ಳು ಹೇಳಿ ಕಾರ್ಯಕರ್ತರನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ. ಎಸ್​ .ಈಶ್ವರಪ್ಪ ಕರೆದೊಯ್ದಿದ್ದಾರೆ. ಮುಂದೆ ಈ ತಪ್ಪು ಮಾಡಬೇಡಿ ಎಂದು ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ತಿಳಿಸಿದರು.

ನಗರದ ಬಂಟರ ಭವನದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಎಲ್ಲರೂ ಮೋದಿ ಪರವಾಗಿ ಮತ ಹಾಕಿ ಎಂದು ವಿನಂತಿಸಿಕೊಂಡರು. ಪ್ರಪಂಚದ ಅತಿ ಪ್ರಭುದ್ಧ ಮತದಾರರು ಇರುವುದು‌ ಭಾರತದಲ್ಲಿಯೇ. ಮತದಾರರಲ್ಲಿ ಅತ್ಯಂತ ಪ್ರಜ್ಞಾವಂತರಾಗಿರುವವರು ಅಂದ್ರೆ ಅದು ಮಹಿಳೆಯರು.‌ ಇಂದಿಗೂ ಐದು ಕೆಜಿ ಅಕ್ಕಿ‌ ನೀಡುತ್ತಿರುವುದು ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಆ ಅಕ್ಕಿಗೆ ಸಿದ್ದರಾಮಯ್ಯ‌ ತಮ್ಮ ಫೋಟೋವನ್ನು ಹಾಕಿಕೊಂಡು ನೀಡುತ್ತಿದ್ದಾರೆ ಎಂದರು.

10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ರು, ಈಗ ಕೇಂದ್ರದ ಐದು ಕೆ.ಜಿ ಅಕ್ಕಿ ನೀಡಿ ಉಳಿದ ಐದು ಕೆಜಿಗೆ ಹಣ ನೀಡುತ್ತಿದ್ದಾರೆ. ಮೊದಲು ಎಲ್ಲಾ ನಿರುದ್ಯೋಗಿ ಯುವಕರಿಗೆ ಭತ್ಯ‌ ನೀಡುವುದಾಗಿ ಹೇಳಿದರು, ಈಗ ಕಂಡೀಷನ್ ಹಾಕುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಶಕ್ತಿ ಯೋಜನೆಗೆ ಬಸ್ ವ್ಯವಸ್ಥೆ ಮಾಡುತ್ತಿಲ್ಲ. ರೈತರ ಮಕ್ಕಳಿಗೆ ನೀಡುತ್ತಿದ್ದ ಸ್ಕಾಲರ್​ ಶಿಪ್​ ನಿಲ್ಲಿಸಲಾಗಿದೆ. ಕಾಂಗ್ರೆಸ್ ಬಡವರನ್ನು ಮೇಲಕ್ಕೆ ತರುವ ಪ್ರಯತ್ನ ನಡೆಯಲಿಲ್ಲ ಎಂದು ರಾಘವೇಂದ್ರ ಆರೋಪಿಸಿದರು.

ಸ್ವಾವಲಂಬಿ ಬದುಕಿಗೆ ಮೋದಿ ಸರ್ಕಾರ ಸಹಕಾರ ನೀಡುತ್ತಿದೆ. ಕೋವಿಡ್​ನಲ್ಲಿ ಮೋದಿ ಅವರು ನಮ್ಮೆಲ್ಲರ ಪ್ರಾಣ ಉಳಿಸಿದ್ದಾರೆ. ಇದರಿಂದ ನೀವು ಕಮಲದ ಗುರುತಿಗೆ ಮತ ನೀಡಿ, ಹಿಂದುತ್ವಕ್ಕೆ ಮತ ನೀಡಬೇಕೆಂದರು. ಏಪ್ರಿಲ್ 18 ರಂದು ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ಎಲ್ಲರೂ ಬಂದು ಹರಸಬೇಕು. ಅಂದು ಮಾಜಿ ಸಿಎಂಗಳಾದ ಯಡಿಯೂರಪ್ಪ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರೂ ಬರುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ನಾಳೆ ಮಂಗಳೂರಲ್ಲಿ ಮೋದಿ ರೋಡ್ ಶೋ: ವಾಹನ ಸಂಚಾರ ನಿಷೇಧಿತ ಮಾರ್ಗಗಳ ಮಾಹಿತಿ ಹೀಗಿದೆ - Modi roadshow in mangaluru

ABOUT THE AUTHOR

...view details