ಕರ್ನಾಟಕ

karnataka

ETV Bharat / state

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ ವಹಿಸಲಾಗುವುದು: ಗೃಹ ಸಚಿವ ಜಿ.ಪರಮೇಶ್ವರ - Minister G Parmeshwar visited Hubli - MINISTER G PARMESHWAR VISITED HUBLI

ನೇಹಾ ಕೊಲೆ ಪ್ರಕರಣವನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಸಿಬಿಐಗೆ ಕೊಡುವುದಿಲ್ಲ. ನಮ್ಮ ರಾಜ್ಯದ ಸಿಐಡಿಯಿಂದ ಸಮರ್ಥವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ.

G. Parameshwara spoke at the press conference.
ಗೃಹ ಸಚಿವ ಜಿ.ಪರಮೇಶ್ವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. (ETV Bharat)

By ETV Bharat Karnataka Team

Published : May 20, 2024, 8:01 PM IST

Updated : May 20, 2024, 8:48 PM IST

ಗೃಹ ಸಚಿವ ಜಿ.ಪರಮೇಶ್ವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. (ETV Bharat)

ಹುಬ್ಬಳ್ಳಿ:ನೇಹಾ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಟ್ಟಿರುವ ರೀತಿಯಲ್ಲಿ ಅಂಜಲಿ ಅಂಬಿಗೇರ ಪ್ರಕರಣವನ್ನು ಕೂಡ ಸಿಐಡಿಗೆ ವಹಿಸಲಾಗುವುದು.‌ ತನಿಖೆ ಕುರಿತು ಇಂದು ಅಥವಾ ನಾಳೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿಂದು ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಇಬ್ಬರು ಯುವತಿಯರ ಕೊಲೆ ಪ್ರಕರಣ ಹಿನ್ನೆಲೆ ಇಲ್ಲಿಗೆ ಬಂದಿದ್ದೇನೆ. 18-04-2024 ರಂದು 23 ವರ್ಷದ ಹೆಣ್ಣುಮಗಳನ್ನು ಫಯಾಜ್ ಎಂಬ ವ್ಯಕ್ತಿ ಕೊಲೆ ಮಾಡಿದ್ದಾನೆ. ಈ ಬಗ್ಗೆ ಹೆಚ್ಚಿಗೆ ಹೇಳಲು ಆಗುವುದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಒಂದು ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಿಐಡಿಗೆ ಕೊಟ್ಟಿದ್ದೇವೆ‌. ಈಗಾಗಲೇ ತನಿಖೆ ನಡೆದಿದೆ. ನೇಹಾ ಕೊಲೆ ಪ್ರಕರಣದಲ್ಲಿ ಸಾಕಷ್ಟು ಜನರು ರಾಜಕೀಯ ಬಣ್ಣ ಬಳೆದಿದ್ದರು ಎಂದು ತಿಳಿಸಿದರು.

ಫಯಾಜ್ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ‌ ಎನ್ನುವುದನ್ನು ನಾವು ಪತ್ತೆ ಹಚ್ಚಬೇಕಿದೆ. ಈಗಾಗಲೇ ಸಾಕಷ್ಟು ಜನರು ವ್ಯಾಖ್ಯಾನ ಮಾಡಿದ್ದಾರೆ. ಪೊಲೀಸ್ ಇಲಾಖೆ ಎಲ್ಲವನ್ನೂ ಗಮನಿಸಿ, ತನಿಖೆ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಯಾವುದೇ ಒತ್ತಡದಿಂದಲೂ ತನಿಖೆ ನಿರಾಶಕ್ತಿಯಾಗಲು ಬಿಡುವುದಿಲ್ಲ ಎಂದ ಅವರು, ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂಬುವುದು ನಮ್ಮ ಆಶಯ ಎಂದು ಅವರು ಹೇಳಿದರು.

ಅಂಜಲಿ ಹತ್ಯೆ ಪ್ರಕರಣ:ಇತ್ತೀಚೆಗೆ ಅಂಜಲಿ ಎಂಬ 20 ವರ್ಷದ ಯುವತಿಯ ಕೊಲೆಯಾಗಿದೆ. ಗಿರೀಶ ಸಾವಂತ ಎಂಬ ವ್ಯಕ್ತಿ ಕೊಲೆ ಮಾಡಿದ್ದು, ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಪ್ರಕರಣ ಸಿಐಡಿಗೆ ಒಪ್ಪಿಸುವ ಕಾರ್ಯವನ್ನು ಮಾಡುತ್ತೇವೆ. ಎರಡು ಕೊಲೆ ನಡೆದಿರುವುದು ದುರದೃಷ್ಟಕರ. ಸಮಾಜದಲ್ಲಿ ಇಂತಹ ಘಟನೆಗಳಿಂದ ಕೆಟ್ಟ ಸಂದೇಶ ಹೋಗುತ್ತದೆ. ನಾನು ಚುನಾವಣೆ ಇದ್ದಿದ್ದರಿಂದ ಬಂದಿರಲಿಲ್ಲ. ಈಗಾಗಲೇ ಸಿಎಂ, ಸಚಿವರು ಭೇಟಿ ನೀಡಿದ್ದಾರೆ. ಘಟನೆ ನಡೆದ ತಕ್ಷಣವೇ ಹೋಮ್ ಮಿನಿಸ್ಟರ್ ಭೇಟಿ ನೀಡಲು ಆಗಲ್ಲ ಈ ನಿಟ್ಟಿನಲ್ಲಿ ತಡವಾಗಿದೆ. ಕಾನೂನಿನ ದೃಷ್ಟಿಯಿಂದ ಹಾಗೂ ಮಾನವೀಯ ದೃಷ್ಟಿಯಿಂದ ಭೇಟಿ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.

ನೇಹಾ ಪ್ರಕರಣ ಸಿಬಿಐಗೆ ಕೊಡಲ್ಲ. ಬಿಜೆಪಿ ಸರ್ಕಾರದಲ್ಲಿಯೂ 466 ಕೊಲೆ ಆಗಿವೆ:ನೇಹಾ ಕೊಲೆ ಪ್ರಕರಣವನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಸಿಬಿಐಗೆ ಕೊಡುವುದಿಲ್ಲ. ನಮ್ಮ ರಾಜ್ಯದಲ್ಲಿಯೇ ಸಿಐಡಿಯಿಂದ ಸಮರ್ಥವಾಗಿ ತನಿಖೆ ನಡೆಸಲಾಗುತ್ತಿದೆ . ನೇಹಾ ಕೊಲೆಯ ಬಗ್ಗೆ ನನಗೆ ಬಂದಿದ್ದ ಮಾಹಿತಿ ಪ್ರಕಾರ ಪ್ರೀತಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದೇ. ಆದರೆ ಅದನ್ನೇ ನಾವು ಮುಂದುವರಿಸಿಕೊಂಡು ಹೋಗಿಲ್ಲ ಎಂದರು.

ಪೊಲೀಸರನ್ನು ಅಂಜಲಿ ಕುಟುಂಬ ಕೊಲೆ ಪೂರ್ವದಲ್ಲಿ ಭೇಟಿಯ ಬಗ್ಗೆ ಮಾತನಾಡಿದ್ದೇನೆ. ಪೊಲೀಸರ ನಿರ್ಲಕ್ಷ್ಯ ಎಂಬುವುದು ಗಮನಕ್ಕೆ ಬಂದಿದ್ದು, ಡಿಸಿಪಿ, ಪಿಐ, ಮಹಿಳಾ ಸಿಬ್ಬಂದಿ ಅಮಾನತು ಮಾಡಿದ್ದೇವೆ. ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಇಲಾಖೆವಾರು ತನಿಖೆ ಆಗುತ್ತದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಕಾಲದಲ್ಲಿ ಆಗಲಿ ಬೇರೆ ಯಾರದೇ ಕಾಲದಲ್ಲಿ ಆಗಲಿ ಕೊಲೆ ಆಗಿರುವುದು ನಿಜ. ಅಂಕಿ - ಅಂಶಗಳ ಪ್ರಕಾರ ಬಿಜೆಪಿ ಕಾಲದಲ್ಲೂ ಮರ್ಡರ್ ಆಗಿವೆ. ಅವರ ಕಾಲದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ಬಾರಿ ಗಣಪತಿ ಉತ್ಸವ, ಹೋಳಿ, ರಂಜಾನ ನಡೆದಿವೆ ಆದರೆ ಕ್ರಿಮಿನಲ್ ವೈಲೆನ್ಸ್ ಆಗಿಲ್ಲ. ಚುನಾವಣೆ ಕೂಡ ಯಶಸ್ವಿಯಾಗಿದೆ, ಎರಡು ಹಂತದಲ್ಲಿ ಕೂಡ ಯಶಸ್ವಿ ಚುನಾವಣೆಯಾಗಿದೆ. ಅವರ ಕಾಲದಲ್ಲಿ 466 ಮರ್ಡರ್ ಆಗಿದೆ. ನಮ್ಮ ಕಾಲದಲ್ಲಿ 430 ಆಗಿದೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದ ಅವರು, ಈಗಾಗಲೇ ಪೊಲೀಸ್ ಇಲಾಖೆಯೂ ಕೊಲೆ ಪ್ರಕರಣಗಳಲ್ಲಿ 98% ಆರೋಪಿಗಳನ್ನು ಹಿಡಿದಿದ್ದಾರೆ. ಪೊಲೀಸ ಇಲಾಖೆ ಯಶಸ್ವಿಯಾಗಿ ಹಾಗೂ ಸಾಕಷ್ಟು ಸಿರೀಯಸ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನೇಹಾ ಕೊಲೆ ಕೇಸನ್ನು ಸಿಬಿಐಗೆ ಕೊಡಲ್ಲ. ನಮ್ಮಲ್ಲಿಯೇ ಸಮರ್ಥರಿದ್ದು ಈ ನಿಟ್ಟಿನಲ್ಲಿ ಸಿಬಿಐಗೆ ಕೊಡಲ್ಲ. ಪೊಲೀಸರ ಇಲಾಖೆ ಸಮರ್ಥರಿಲ್ಲ ಎಂದು ಸಿಐಡಿಗೆ ಕೊಟ್ಟಿಲ್ಲ. ಕೆಲವೊಮ್ಮೆ ಸಿಐಡಿಗೆ ಕೊಡುತ್ತೇವೆ ಎಂದು ಹೇಳಿದರು.

ಡ್ರಗ್ಸ್ ಮಾಫಿಯಾ ತಡೆಗೆ ಕ್ರಮ: ಪೊಲೀಸ್ ಇಲಾಖೆಯಲ್ಲಿ ಯಾವುದೇ ಜಾತಿ ಧರ್ಮದ ಪ್ರಶ್ನೆ ಬರುವುದಿಲ್ಲ. ಒಂದು ವೇಳೆ ಹಾಗೇನಾದರೂ ಗಮನಕ್ಕೆ ಬಂದರೆ ಸೂಕ್ತ ಕ್ರಮ ಜರುಗಿಸುತ್ತೇವೆ. ಈ ಕೊಲೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ, ಎಲ್ಲರನ್ನೂ ಅಮಾನತು ಮಾಡುತ್ತೇವೆ ಎಂದ ಗೃಹಸಚಿವರು, ರಾಜ್ಯದಲ್ಲಿ ಡ್ರಗ್ಸ್ ತಡೆಗೆ ವಾರ್ ಮಾಡಲು ಸದನದಲ್ಲಿ ಹೇಳಿದ್ದೇನೆ. 100-200 ಕೋಟಿ‌ ಮೊತ್ತದ ಡ್ರಗ್ಸ್ ನಾನೇ ಸುಟ್ಟು ಹಾಕಿಸಿದ್ದೇನೆ. ಸಂಪೂರ್ಣ ಡ್ರಗ್ಸ್ ಮಾಫಿಯಾ ತಡೆಗೆ ಕಠಿಣ ಕಾನೂನು ಕ್ರಮ ಅನುಸರಿಸಲಾಗುವುದು ಎಂದು ತಿಳಿಸಿದರು.

ಯಾವುದೇ ಫೋನ್ ಟ್ಯಾಪಿಂಗ್ ಮಾಡಿಲ್ಲ:ಪೊಲೀಸ್ ಇಲಾಖೆಯಿಂದ ಯಾವುದೇ ಫೋನ್ ಟ್ಯಾಪ್ ಮಾಡಿಲ್ಲ. ಕುಮಾರಸ್ವಾಮಿಯವರ ಬಳಿ ದಾಖಲೆ ಇದ್ದರೆ ಕೊಡಲಿ ಎಂದು ಹುಬ್ಬಳ್ಳಿಯಲ್ಲಿ ಗೃಹ ಸಚಿವ ಜಿ‌. ಪರಮೇಶ್ವರ್ ತಿಳಿಸಿದ್ದಾರೆ. ಖಾಸಗಿಯವರು ಟ್ಯಾಪ್ ಮಾಡಿದ್ರೆ ದೂರು ಕೊಡಲಿ. ಕುಮಾರಸ್ವಾಮಿ ದೂರು ನೀಡಿದ್ರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರದಿಂದ ಅಧಿಕೃತವಾಗಿ ಯಾವುದೇ ಫೋನ್ ಟ್ಯಾಪಿಂಗ್ ಮಾಡಿಲ್ಲ. ಪ್ರಜ್ವಲ್ ರೇವಣ್ಣ‌ಗೆ ಬ್ಲ್ಯೂ ಕಾರ್ನ್‌ರ್ ನೋಟಿಸ್ ನೀಡಲಾಗಿದೆ. ಅಧಿಕೃತವಾಗಿ ಅವರೆಲ್ಲಿದ್ದಾರೆಂದು ತಿಳಿದು ಬಂದಿಲ್ಲ. ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಿದ್ರೆ ಅವರು ವಾಪಸ್ ಬರಲೇಬೇಕು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಅಂಜಲಿ, ನೇಹಾ ಮನೆಗೆ ಗೃಹ ಸಚಿವರ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ - Home Minister Parameshwar

Last Updated : May 20, 2024, 8:48 PM IST

ABOUT THE AUTHOR

...view details