ಕರ್ನಾಟಕ

karnataka

ETV Bharat / state

ಉಡುಪಿ: ಪರ್ಕಳ ಪರಿಸರದಲ್ಲಿ ಮತ್ತೆ ಆಫ್ರಿಕನ್ ಮಾದರಿಯ ಬಸವನ ಹುಳು, ಔಷಧ ಸಿಂಪಡಿಸಲು ನಗರಸಭೆಗೆ ಜನರ ಒತ್ತಾಯ - snail worm

ಉಡುಪಿ ಜಿಲ್ಲೆಯ ಪರ್ಕಳ ಪರಿಸರದಲ್ಲಿ ಮತ್ತೆ ಆಫ್ರಿಕನ್ ಮಾದರಿಯ ಬಸವನ ಹುಳು ಕಾಣಿಸಿಕೊಂಡಿವೆ.

By ETV Bharat Karnataka Team

Published : Jul 22, 2024, 5:18 PM IST

african-type-of-snail-worm
ಆಫ್ರಿಕನ್ ಮಾದರಿಯ ಬಸವನ ಹುಳು (ETV Bharat)

ಉಡುಪಿ : ಜಿಲ್ಲೆಯ ಪರ್ಕಳ ಪರಿಸರದಲ್ಲಿ ಮತ್ತೆ ಆಫ್ರಿಕನ್ ಮಾದರಿಯ ಬಸವನ ಹುಳು ಕಾಣಿಸಿಕೊಳ್ಳುತ್ತಿವೆ. ಇಲ್ಲಿನ ದೇವಿ ನಗರದ ಸುತ್ತಮುತ್ತ ಪರಿಸರದಲ್ಲಿ ಆಫ್ರಿಕನ್ ಮಾದರಿಯ ಬಸವನ ಹುಳು ಯಥೇಚ್ಛವಾಗಿ ಮತ್ತೆ ಗೋಡೆಗಳಲ್ಲಿ ಹರಿಯಲಾರಂಭಿಸಿದೆ.

ಮನೆಗಳ ಕಾಂಪೌಂಡ್ ವಾಲ್​ಗೂ ಈ ಬಸವನಹುಳು ಸಂಚಾರ ನಡೆಸುತ್ತಿವೆ. ರಾತ್ರಿ ಹೊತ್ತಿನಲ್ಲಿ ಇದರ ಸಂಚಾರ ಹೆಚ್ಚಾಗಿರುತ್ತದೆ. ಪಪ್ಪಾಯಿಗಿಡ, ಇನ್ನಿತರ ಹೂವಿನ ಗಿಡ, ಕ್ರೋಟನ್ ಗಿಡಗಳ ಎಲೆಗಳನ್ನು ತಿಂದು ತೇಗುತ್ತವೆ. ಇದರಿಂದ ಹೊರ ಸೂಸುವ ದ್ರವ್ಯ ವಾಸನೆಯಿಂದ ಕೂಡಿರುತ್ತದೆ. ಸ್ವಚ್ಛತೆ ಮಾಡಿದರೂ ಈ ಭಾಗದಲ್ಲಿ ಮತ್ತೆ ಮತ್ತೆ ಈ ಬಸವನ ಹುಳು ಬಾಧೆ ಆರಂಭವಾಗಿದೆ.

ಜನವಸತಿ ಪ್ರದೇಶದಲ್ಲಿ ಉಡುಪಿ ನಗರಸಭೆ ಸೂಕ್ತ ಕ್ರಮಕ್ಕೆ ಸ್ಥಳೀಯರಿಂದ ಆಗ್ರಹ : ಈ ಜನವಸತಿ ಪ್ರದೇಶದಲ್ಲಿ ನಗರ ಸಭೆಯವರು ಸೂಕ್ತವಾದ ಮದ್ದನ್ನ ಸಿಂಪಡಿಸಿ ಇದಕ್ಕೆ ಮುಕ್ತಿ ಹಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಈ ಪ್ರದೇಶ ಉಡುಪಿ ನಗರಸಭೆ ಮತ್ತು ಸ್ವಲ್ಪ ಭಾಗ 80 ಬಡಗುಬೆಟ್ಟು ಪಂಚಾಯಿತಿಗೆ ಒಳಪಟ್ಟಿರುವುದರಿಂದ ಔಷಧ ಸಿಂಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹುಳುಬಾದೆಗೆ ಪೂರ್ಣ ವಿರಾಮ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ನೋಡ ನೋಡುತ್ತಲೇ ಬೆಳೆ ಸ್ವಾಹ.. ಬಸವನ ಹುಳು ಕಾಟಕ್ಕೆ ಬೆಚ್ಚಿದ ಕಲಬುರಗಿ ರೈತರು

ABOUT THE AUTHOR

...view details