ETV Bharat / state

ಶ್ರೀರಂಗಪಟ್ಟಣ ದಸರಾದಲ್ಲಿ ಕುಸ್ತಿ: ಅಖಾಡಕ್ಕಿಳಿದು ಮಹಿಳಾ ಪೈಲ್ವಾನರ ಸೆಣಸಾಟ - Srirangapatna dasara - SRIRANGAPATNA DASARA

ಶ್ರೀರಂಗಪಟ್ಟಣದಲ್ಲಿ ನಾಲ್ಕನೇ ದಿನದ ದಸರಾ ನಡೆಯುತ್ತಿದ್ದು ಇಂದು ಸಂಜೆ ತೆರೆ ಬೀಳಲಿದೆ. ದಸರಾ ಅಂಗವಾಗಿ ನಿನ್ನೆ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿತ್ತು. ಕುಸ್ತಿಯಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಅಖಾಡಕ್ಕೆ ಇಳಿದು ಎಲ್ಲರ ಗಮನ ಸೆಳೆದರು.

ಶ್ರೀರಂಗಪಟ್ಟಣ ದಸರಾದಲ್ಲಿ ಕುಸ್ತಿ
ಶ್ರೀರಂಗಪಟ್ಟಣ ದಸರಾದಲ್ಲಿ ಕುಸ್ತಿ (ETV Bharat)
author img

By ETV Bharat Karnataka Team

Published : Oct 7, 2024, 9:27 AM IST

ಮಂಡ್ಯ: ದೇಶದೆಲ್ಲೆಡೆ ನಾಡಹಬ್ಬ ದಸರಾದ ಸಂಭ್ರಮ ಕಳೆಗಟ್ಟಿದೆ. ಐಸಿಹಾಸಿಕ ಶ್ರೀರಂಗಪಟ್ಟಣ 4 ದಿನದ ದಸರಾ ಅ.4ಕ್ಕೆ ಆರಂಭಗೊಂಡಿದ್ದು ಇಲ್ಲಿ ಕುಸ್ತಿ ಪ್ರಮುಖ ಆಕರ್ಷಣೆ. ದಸರಾದ ಅಂಗವಾಗಿ ಆಯೋಜನೆ ಮಾಡಿದ್ದ ಈ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ಅನೇಕ ಪೈಲ್ವಾನರು ಪಾಲ್ಗೊಂಡಿದ್ದರು. ಅದರಲ್ಲೂ ಮಹಿಳಾ ಪೈಲ್ವಾನರ ಕುಸ್ತಿ ಪಂದ್ಯಾವಳಿ ಎಲ್ಲರನ್ನು ಆಕರ್ಷಿಸುತ್ತಿತ್ತು.

ಶ್ರೀರಂಗಪಟ್ಟಣ ದಸರಾದಲ್ಲಿ ಕುಸ್ತಿ (ETV Bharat)

ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಐಸಿಹಾಸಿಕ ಶ್ರೀರಂಗಪಟ್ಟಣ ದಸರಾ ಅಂಗವಾಗಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಕುಸ್ತಿ ಪಂದ್ಯಾವಳಿಯನ್ನ ಆಯೋಜನೆ ಮಾಡಲಾಗಿತ್ತು. ಸುಮಾರು 60 ಪುರುಷ ಹಾಗೂ ಮಹಿಳಾ ಜೋಡಿ ಸ್ವರ್ಧಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲೂ ಮಹಿಳಾ ಪೈಲ್ವಾನರು ಅಖಾಡದಲ್ಲಿ ಇಳಿದು ಸೆಣಸಾಡಿದ್ದು, ಎಲ್ಲರನ್ನು ಆಕರ್ಷಿಸಿತು. ಈ ಪಂದ್ಯಾವಳಿಗೆ ಮಂಡ್ಯ, ಮೈಸೂರು, ರಾಮನಗರ, ದಾವಣಗೆರೆ, ಬೆಳಗಾವಿ ಸೇರಿ ರಾಜ್ಯದ ವಿವಿಧ ಕಡೆಗಳಿಂದ ಪುರುಷ ಹಾಗೂ ಮಹಿಳಾ ಪೈಲ್ವಾನರು ಆಗಮಿಸಿದ್ದರು.

ಇಂದು ಕೊನೆಯ ದಿನ: ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಶುಕ್ರವಾರ ಆರಂಭಗೊಂಡಿದ್ದು, ಅದ್ಧೂರಿಯಾಗಿ ಜಂಬೂಸವಾರಿ ನಡೆದಿದೆ. ನಾಲ್ಕು ದಿನಗಳ ಕಾಲ ನಡೆಯುವ ದಸರಾ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಕುಸ್ತಿ ಪಂದ್ಯಾವಳಿಗೆ ಶ್ರೀರಂಗಪಟ್ಟಣ ಸಾಕಷ್ಟು ಹೆಸರು ಮಾಡಿದೆ. ಹೀಗಾಗಿ ಪೈಲ್ವಾನರಿಗೆ ಸಾಕಷ್ಟು ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ದಸರಾ ಹಬ್ಬದಲ್ಲಿ ಕುಸ್ತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇನ್ನು ಇಂದು ಸಂಜೆ ಶ್ರೀರಂಗಪಟ್ಟಣ ದಸರಾಗೆ ತೆರೆ ಬೀಳಲಿದೆ.

ಇದನ್ನೂ ಓದಿ: ಮೈಸೂರು ದಸರಾ: ಶ್ರೇಯಾ ಘೋಷಾಲ್​ ಹಾಡಿಗೆ ಯುವಪಡೆ ಫಿದಾ, ಬಾನಂಗಳದಲ್ಲಿ ಡ್ರೋನ್ ಚಿತ್ತಾರ - Yuva Dasara Drone Show

ETV Bharat Logo

Copyright © 2024 Ushodaya Enterprises Pvt. Ltd., All Rights Reserved.