LIVE: ಚಿಕ್ಕಬಳ್ಳಾಪುರದಲ್ಲಿ ಮಾರ್ಗದರ್ಶಿ ಚಿಟ್ ಫಂಡ್ 115ನೇ ಶಾಖೆ ಉದ್ಘಾಟನೆ - Margadarshi Chit Fund - MARGADARSHI CHIT FUND
🎬 Watch Now: Feature Video
Published : Oct 7, 2024, 10:40 AM IST
|Updated : Oct 7, 2024, 10:53 AM IST
ಚಿಕ್ಕಬಳ್ಳಾಪುರ: ರಾಮೋಜಿ ಸಮೂಹ ಸಂಸ್ಥೆಗಳ ಕಂಪನಿಗಳಲ್ಲಿ ಒಂದಾದ ಅತ್ಯಂತ ವಿಶ್ವಾಸಾರ್ಹ ಮಾರ್ಗದರ್ಶಿ ಚಿಟ್ ಫಂಡ್ನ 115ನೇ ಶಾಖೆಯ ಉದ್ಘಾಟನೆ ಕಾರ್ಯಕ್ರಮ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿದೆ. ಮಾರ್ಗದರ್ಶಿ ಸಂಸ್ಥೆಯು ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರು ನೂತನ ಶಾಖೆಯನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಮಾರ್ಗದರ್ಶಿ ಚಿಟ್ ಫಂಡ್ನ ಕರ್ನಾಟಕದ ನಿರ್ದೇಶಕರಾದ ಪಿ.ಎಲ್. ಲಕ್ಷ್ಮಣರಾವ್ ಸೇರಿದಂತೆ ಇತರ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಗ್ರಾಹಕರು ಭಾಗವಹಿಸಿದ್ದಾರೆ. 1962ರ ಅಕ್ಟೋಬರ್ನಲ್ಲಿ ಹುಟ್ಟಿದ ಮಾರ್ಗದರ್ಶಿ ಚಿಟ್ ಫಂಡ್, ಇಂದಿಗೂ ಅತ್ಯಂತ ನಂಬಿಕಾರ್ಹ ಸಂಸ್ಥೆಯಾಗಿದೆ. ಉದ್ಯಮದ ಆರಂಭಿಕ ಹಂತದಿಂದಲೂ ರಾಮೋಜಿ ಗ್ರೂಪ್ ಅಧ್ಯಕ್ಷ ದಿವಂಗತ ರಾಮೋಜಿ ರಾವ್ ಅವರ ನಿಖರತೆ ಬದ್ಧತೆ ಮತ್ತು ನಂಬಿಕೆಯಿಂದಾಗಿ ಸಂಸ್ಥೆಯು ಲಕ್ಷಾಂತರ ಗ್ರಾಹಕರ ನಂಬಿಕೆಯನ್ನು ಸಂಪಾದಿಸಿದೆ. ಕಳೆದ ಆರು ದಶಕಗಳಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಸಾಕಷ್ಟು ಅಭಿವೃದ್ಧಿ ಕಂಡಿದೆ. ಈಗಾಗಲೇ 114 ಬ್ರಾಂಚ್ಗಳಲ್ಲಿ 3ಲಕ್ಷಕ್ಕೂ ಹೆಚ್ಚು ಸಕ್ರಿಯ ಚಂದಾದಾರರಿದ್ದಾರೆ. ಸಂಸ್ಥೆಯಲ್ಲಿ 4,100 ಮಂದಿ ಉದ್ಯೋಗಿಗಳಿದ್ದು, 18 ಸಾವಿರ ಏಜೆಂಟ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಂಸ್ಥೆ ಅನೇಕರಿಗೆ ಜೀವನೋಪಾಯದ ಮೂಲಾಧಾರವಾಗಿದೆ.
Last Updated : Oct 7, 2024, 10:53 AM IST