ಕರ್ನಾಟಕ

karnataka

ETV Bharat / state

ಆದಷ್ಟು ಬೇಗ ದರ್ಶನ್ ಬಿಡುಗಡೆಯಾಗಲಿ ; ಹಾಸನಾಂಬೆ ದೇವಿ ಬಳಿ ತರುಣ್ ಸುಧೀರ್ ಪ್ರಾರ್ಥನೆ - THARUN SUDHIR

ನಟ, ನಿರ್ದೇಶಕ ತರುಣ್ ಸುಧೀರ್​ ಪತ್ನಿಯೊಂದಿಗೆ ಹಾಸನಾಂಬೆ ದೇವಸ್ಥಾನಕ್ಕೆ ಆಗಮಿಸಿ, ಆದಷ್ಟು ಬೇಗ ದರ್ಶನ್ ಬಿಡುಗಡೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

actor-and-director-tharun-sudhir
ನಟ, ನಿರ್ದೇಶಕ ತರುಣ್ ಸುಧೀರ್ (ETV Bharat)

By ETV Bharat Karnataka Team

Published : Oct 27, 2024, 9:37 PM IST

ಹಾಸನ :ಸ್ಯಾಂಡಲ್​ವುಡ್​ ನಟ, ನಿರ್ದೇಶಕ ತರುಣ್ ಸುಧೀರ್ ಪತ್ನಿ ಜೊತೆ ಹಾಸನಾಂಬೆ ದೇವಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವಿ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆದಷ್ಟು ಬೇಗ ದರ್ಶನ್ ಬಿಡುಗಡೆಯಾಗಲಿ ಎಂದು ದೇವಿ ಬಳಿ ಕೇಳಿಕೊಂಡಿದ್ದೇವೆ ಎಂದರು.

ಮದುವೆ ಬಳಿಕ ಮೊದಲ ಬಾರಿಗೆ ಪತ್ನಿ ಸೋನಾಲ್ ಜೊತೆ ತರುಣ್ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಸಂತಸಪಟ್ಟರು. ನಾವು ಮದುವೆಯಾದ ನಂತರ ದೇವಿ ದರ್ಶನಕ್ಕೆ ಬಂದಿದ್ದೇವೆ. ಅದು ನನಗೆ ವಿಶೇಷ. ಈ ತಾಯಿ ಹತ್ತಿರ ದರ್ಶನಕ್ಕೆ ಬಂದಾಗ ಮನಸ್ಸಿನಲ್ಲಿ ಇರೋದನ್ನೆಲ್ಲಾ ಒಮ್ಮೆಲೆ ಹೇಳಿಕೊಳ್ಳಬೇಕು ಅನ್ನಿಸುತ್ತದೆ. ಇಲ್ಲಿ ಒಂದು ವೈಬ್ರೇಷನ್ ಇದೆ. ಪ್ರತಿ ವರ್ಷ ನಾನು ಹಾಸನಾಂಬೆ ದೇವಿ ದರ್ಶನಕ್ಕೆ ಬರುತ್ತೇನೆ. ಕಳೆದ ವರ್ಷ ಶೂಟಿಂಗ್ ಇದ್ದಿದ್ದರಿಂದ ಬರಲು ಆಗಿರಲಿಲ್ಲ ಎಂದು ಹೇಳಿದರು.

ನಟ, ನಿರ್ದೇಶಕ ತರುಣ್ ಸುಧೀರ್ ಮಾತನಾಡಿದರು (ETV Bharat)

ಅವರು ಸಹ ಹಾಸನಾಂಬೆ ದೇವಿ ದರ್ಶನಕ್ಕೆ ಬರುತ್ತಿದ್ದರು: ಆದಷ್ಟು ಬೇಗ ದರ್ಶನ್ ಅವರು ಬಿಡುಗಡೆ ಆಗಲಿ ಎಂದು ಹಾಸನಾಂಬೆ ದೇವಿ ಬಳಿ ಕೇಳಿಕೊಂಡಿದ್ದೇನೆ. ಅವರು ಇದ್ದಿದ್ದರೆ ಈ ಬಾರಿ ಹಾಸನಾಂಬೆ ದೇವಿ ದರ್ಶನಕ್ಕೆ ಬರುತ್ತಿದ್ದರು. ಆದಷ್ಟು ಬೇಗ ಎಲ್ಲಾ ಒಳ್ಳೆಯದಾಗಲಿ ಎಂದು ದೇವಿಯಲ್ಲಿ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ :ಬಳ್ಳಾರಿ ಜೈಲಿನಲ್ಲಿ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್​

ABOUT THE AUTHOR

...view details