ಕರ್ನಾಟಕ

karnataka

ETV Bharat / state

ಹಾವೇರಿ ಲೋಕಸಭಾ ಕ್ಷೇತ್ರದಿಂದ 47 ನಾಮಪತ್ರ ಸಲ್ಲಿಕೆ: ಚುನಾವಣಾಧಿಕಾರಿ - Haveri Constituency Nomination - HAVERI CONSTITUENCY NOMINATION

ಹಾವೇರಿಯ ಲೋಕಸಭಾ ಕ್ಷೇತ್ರದಿಂದ ಈ ವರೆಗೂ 47 ಉಮೇದುವಾರಿಕೆ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದಿಂದ ಕೊನೆಯ ದಿನ 47 ನಾಮಪತ್ರ ಸಲ್ಲಿಕೆ
ಹಾವೇರಿ ಲೋಕಸಭಾ ಕ್ಷೇತ್ರದಿಂದ ಕೊನೆಯ ದಿನ 47 ನಾಮಪತ್ರ ಸಲ್ಲಿಕೆ

By ETV Bharat Karnataka Team

Published : Apr 20, 2024, 10:54 AM IST

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದಿಂದ ಕೊನೆಯ ದಿನವಾದ ಶುಕ್ರವಾರ ಒಂಬತ್ತು ಅಭ್ಯರ್ಥಿಗಳಿಂದ 20 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇದುವರೆಗೆ 26 ಅಭ್ಯರ್ಥಿಗಳಿಂದ 47 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್​ಹಾಲ್‍ನಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಬಸವರಾಜ ಸೋಮಪ್ಪ ಬೊಮ್ಮಾಯಿ(ಎರಡು), ಇಂಡಿಯನ್ ಮೂಮೆಂಟ್ ಪಾರ್ಟಿ ಅಭ್ಯರ್ಥಿಯಾಗಿ ಶ್ರೀಮತಿ ರಶಿದಾಬೇಗಂ, ಬಿಎಸ್‍ಪಿ ಅಭ್ಯರ್ಥಿಯಾಗಿ ಅಶೋಕ ಮರಿಯಣ್ಣನವರ್, ಏಕಂ ಸನಾತನ ಭಾರತ ದಳದಿಂದ ವಿಶ್ವನಾಥ್ ಶೀರಿ, ಶುಭ ಕರ್ನಾಟಕ ಅಭ್ಯರ್ಥಿಯಾಗಿ ವಾಸು ಮಜಲಿ, ಪಕ್ಷೇತರ ಅಭ್ಯರ್ಥಿಗಳಾಗಿ ಶ್ರೀಮತಿ ಸುನಂದಾ ಶಿರಹಟ್ಟಿ, ಜಗದೀಶ ಬಂಕಾಪುರ, ಸಣ್ಣ ಮೌಲಾಸಾಬ್ ಗಣಜೂರ್, ವೀರಭದ್ರಪ್ಪ ಕಬ್ಬಿಣದ, ಮಂಜುನಾಥ್ ಪಂಚಾನನ, ರುದ್ರಪ್ಪ ಕುಂಬಾರ, ಸಿದ್ದಪ್ಪ ಕಲ್ಲಪ್ಪ ಪೂಜಾರ್ , ಬಸವರಾಜ ಹಾದಿ, ಮಹ್ಮದ ಹನೀಪಸಾಬ ಸಣ್ಣಪೀರಸಾಬ ಕಲ್ಲಂಗಡಿ, ಜಗದೀಶ ಬಂಕಾಪುರ, ಅನಿಲ್ ಶಂಕ್ರಪ್ಪ ಗುಂಜಳ ಹಾಗೂ ಶಿದ್ದಪ್ಪ ಹೊಸಳ್ಳಿ , ಮಹಮ್ಮದ್ ಶಫಿ ಪಾಟೀಲ, ಸಲೀಂ ಅಕ್ಬರ್ ನಾಯಕ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮಧ್ಯಾಹ್ನ 3 ರಿಂದ ಸಂಜೆ 5-30ರ ವರೆಗೆ ನಾಮಪತ್ರ ಹಿಂಪಡೆಯಬಹುದು ಏಪ್ರಿಲ್ 22ರ ಬೆಳಿಗ್ಗೆ 11 ರಿಂದ 3 ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ನಾಮಪತ್ರ ಸಲ್ಲಿಸಿದ್ದರೆ ಕಾಂಗ್ರೆಸ್‌ ನಿಂದ ಆನಂದಸ್ವಾಮಿ ಗಡ್ಡದೇವರಮಠ ನಾಮಪತ್ರ ಸಲ್ಲಿಸಿದ್ದಾರೆ.

ಬೊಮ್ಮಾಯಿ ಶಕ್ತಿ ಪ್ರದರ್ಶನ: ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಶುಕ್ರವಾರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ನಗರದಲ್ಲಿ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ನಡೆಸುವ ಮೂಲಕ ಶಕ್ತಿಪ್ರದರ್ಶನ ಮಾಡಿದರು. ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ರೋಡ್ ಶೋದಲ್ಲಿ ನಟಿ ತಾರಾ ಅನುರಾಧಾ ಮಾಜಿ ಸಚಿವ ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ್, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ವಿವಿಧ ಮುಖಂಡರು ಸಾಥ್ ನೀಡಿದರು.

ರೋಡ್ ಶೋನಲ್ಲಿ ಹಾವೇರಿ ಲೋಕಸಭಾ ಹಾಲಿ ಸಂಸದ ಶಿವಕುಮಾರ್ ಉದಾಸಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. ಚುನಾವಣಿ ಘೋಷಣೆಯಾದ ಮೇಲೆ ಇದೇ ಪ್ರಥಮ ಬಾರೆಗೆ ಬಹಿರಂಗವಾಗಿ ಕಾಣಿಸಿಕೊಂಡು ಉದಾಸಿ ಕಾರ್ಯಕರ್ತರಿಗೆ ಅಚ್ಚರಿ ಮೂಡಿಸಿದರು. ರೋಡ್​​​ ಶೋ ಮುಗಿಯುವವರೆಗೆ ಉದಾಸಿ ಬೊಮ್ಮಾಯಿಗೆ ಸಾಥ್ ನೀಡಿದರು.

ಇದನ್ನೂ ಓದಿ:ರಾಜ್ಯದಲ್ಲಿ ಐದೂವರೆ ಮುಖ್ಯಮಂತ್ರಿಗಳು: ಗೌರವ್ ಭಾಟಿಯಾ ವ್ಯಂಗ್ಯ - Gaurav Bhatia Joke

ABOUT THE AUTHOR

...view details