ಹುಬ್ಬಳ್ಳಿ :ಹುಬ್ಬಳ್ಳಿ ಕಾರ್ಮಿಕ ಭವನದಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಹು - ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 6 ರಂದು ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಲ್ಯಾಪ್ಟಾಪ್ಗಳ ಕಳ್ಳತನದ ಕುರಿತು ಪ್ರಕರಣ ದಾಖಲಾಗಿತ್ತು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು ಹುಬ್ಬಳ್ಳಿಯ ಕಾರ್ಮಿಕ ಭವನದಲ್ಲಿ ತಂದಿಟ್ಟಿದ್ದ 83 ಲ್ಯಾಪ್ಟಾಪ್ಗಳನ್ನು ಆರೋಪಿಗಳು ಕಳ್ಳತನ ಮಾಡಿದ್ದರು ಎಂದಿದ್ದಾರೆ.
ದೀಪಕ ನಾಯಕ್, ಕೃಷ್ಣಾ ಕಬ್ಬೇರ್, ಸುಭಾಷ್ ಕುರಡಿಕೇರಿ, ಶ್ರೀನಿವಾಸ ಕೌಡೆನ್ನಣ್ಣವರ, ಸಾಯಿನಾಥ್ ಕೊರವರ, ನಾಗರಾಜ್ ಅಂಬೀಗೇರ್, ಪ್ರಕಾಶ ನಿಟ್ಟೂರ, ರುತಿಕ ಕ್ಯಾರಕಟ್ಟಿ, ಫೈರೋಜ್ ಕೊಳ್ಳೂರ, ಮಲ್ಲಿಕಾರ್ಜುನ ಹಂಚಿನಾಳ, ಮೇಗನ್ ಕಠಾರೆ, ಅರ್ಜುನ್ ವಾಲೀಕಾರ್, ದಾದಾಪೀರ್ ಮುಜಾಹಿದ್, ವಿನಾಯಕ ಹಿರೇಮಠ, ರಾಹುಲ್ ಕಮಡೊಳ್ಳಿ, ಅಭಿ ಚಲವಾದಿ, ಮಾಂತೇಶ್ ಇಜಾರದ, ಸುನೀ ಹುಬ್ಬಳ್ಳಿ, ಪ್ರಜ್ವಲ್ ಬಾಗಲಕೋಟ, ಹರೀಶದ ಸಗಡಿ, ರಂಜಾನ್ ಹಂಪಿಹೊಳ್ಳಿ, ಮಂಜುನಾಥ ಕ್ಯಾರಕಟ್ಟಿ, ನಾಗರಾಜ್ ಸರವಿ, ದರ್ಶನ ಲಗಟಗೇರಿ, ಚನ್ನಬಸಪ್ಪ ಬಿಸರಳ್ಳಿ, ರೇಣುಕಾ ಬಿಸರಳ್ಳಿ ಇವರು ಬಂಧಿತ ಆರೋಪಿಗಳಾಗಿದ್ದಾರೆ.