ಕರ್ನಾಟಕ

karnataka

ETV Bharat / sports

ರೋಹಿತ್​, ಧೋನಿ ಇಬ್ಬರಲ್ಲಿ ಯಾರು ಬೆಸ್ಟ್ ಕ್ಯಾಪ್ಟನ್?​: ಶಿವಂ ದುಬೆ ಕೊಟ್ಟ ಸ್ಮಾರ್ಟ್​ ಉತ್ತರ ಇದು! - Shivam Dube - SHIVAM DUBE

ರೋಹಿತ್​ ಶರ್ಮಾ ಮತ್ತು ಧೋನಿ ಇಬ್ಬರಲ್ಲಿ ಉತ್ತಮ ನಾಯಕ ಯಾರೆಂದು ಶಿವಂ ದುಬೆಗೆ ಕೇಳಿದ ಪ್ರಶ್ನೆಗೆ ಅವರು ಸ್ಮಾರ್ಟ್​ ಆಗಿ ಉತ್ತರಿಸಿದ್ದಾರೆ.

ಧೋನಿ, ಶಿವಂ ದುಬೆ, ರೋಹಿತ್​ ಶರ್ಮಾ
ಧೋನಿ, ಶಿವಂ ದುಬೆ, ರೋಹಿತ್​ ಶರ್ಮಾ (IANS)

By ETV Bharat Sports Team

Published : Oct 6, 2024, 2:12 PM IST

ಹೈದರಾಬಾದ್​: 3 ಐಸಿಸಿ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಎಂ​.ಎಸ್.ಧೋನಿ. ಇವರು ಟೀಮ್​ ಇಂಡಿಯಾದ ಬೆಸ್ಟ್​ ವಿಕೆಟ್​ ಕೀಪರ್​ ಮಾತ್ರವಲ್ಲದೇ ಯಶಸ್ವಿ ನಾಯಕರಾಗಿಯೂ ಖ್ಯಾತಿ ಪಡೆದವರು. ಜೊತೆಗೆ, ದೇಶಿ ಲೀಗ್​ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮುನ್ನಡೆಸಿ 5 ಬಾರಿ ಚಾಂಪಿಯನ್​ ಪಟ್ಟಕ್ಕೇರಿಸಿದ್ದಾರೆ. ಇದೀಗ ರೋಹಿತ್​ ಶರ್ಮಾ ಕೂಡ ಧೋನಿಯಂತೆ ಭಾರತ ತಂಡದ ಯಶಸ್ವಿ ನಾಯಕರಾಗಿದ್ದಾರೆ.

ಈ ವರ್ಷ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತವನ್ನು ಚಾಂಪಿಯನ್​ ಮಾಡಿಸಿ 13 ವರ್ಷಗಳ ಐಸಿಸಿ ಕಪ್​ ಬರ ನೀಗಿಸಿದರು. ಅಲ್ಲದೇ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್​ ತಂಡವನ್ನು ಮುನ್ನಡೆಸಿದ್ದ ಹಿಟ್​ಮ್ಯಾನ್​, 5 ಬಾರಿ ತಂಡ ಕಪ್​ ಗೆಲ್ಲುವಂತೆ ಮಾಡಿದ್ದರು. ರೋಹಿತ್​ ಅವರ ಯಶಸ್ವಿ ನಾಯಕತ್ವವನ್ನು ಕಂಡ ಅಭಿಮಾನಿಗಳು ಧೋನಿ ಅವರೊಂದಿಗೆ ಹೋಲಿಸಲು ಆರಂಭಿಸಿದ್ದರು. ಇದೀಗ ಇದೇ ವಿಚಾರವಾಗಿ ಶಿವಂ ದುಬೆಗೂ ಪ್ರಶ್ನಿಸಲಾಗಿದ್ದು, ಅದಕ್ಕವರು ಬುದ್ದಿವಂತಿಕೆಯ ಉತ್ತರ ನೀಡಿದ್ದಾರೆ.

ಸ್ಟಾರ್​ ಆಲ್‌ರೌಂಡರ್ ಶಿವಂ ದುಬೆ ಇತ್ತೀಚೆಗೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ಅವರೊಂದಿಗೆ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಪಿಲ್ ಅವರು ದುಬೆಗೆ, ಐಪಿಎಲ್‌ನಲ್ಲಿ ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ಪರ ಆಡಿದ್ದೀರಿ, ಅದೇ ರೀತಿ ಈ ವರ್ಷ ಜೂನ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿಯೂ ಆಡಿದ್ದೀರಿ. ನಿಮ್ಮ ಪ್ರಕಾರ, ಧೋನಿ ಮತ್ತು ರೋಹಿತ್​ ಇಬ್ಬರಲ್ಲಿ ಯಾರು ಉತ್ತಮ ನಾಯಕರು ಎಂದು ಪ್ರಶ್ನಿಸಿದ್ದರು. ಇದಕ್ಕೆ ದುಬೆ, "ಐಪಿಎಲ್​ನಲ್ಲಿ ಚೆನ್ನೈ ಪರ ಆಡುವಾಗ ಧೋನಿ ಬೆಸ್ಟ್, ಟೀಂ​ ಇಂಡಿಯಾ ಪರ ಆಡುವಾಗ ರೋಹಿತ್ ಬೆಸ್ಟ್‌" ಎಂದು ಹೇಳಿದರು. ಇದಕ್ಕೆ ರೋಹಿತ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.

ಏತನ್ಮಧ್ಯೆ, ಬಾಂಗ್ಲಾ ಜೊತೆಗಿನ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ದುಬೆ ಬೆನ್ನು ನೋವಿನಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ತಿಲಕ್ ವರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಇಂದಿನಿಂದ ಬಾಂಗ್ಲಾ ಮತ್ತು ಭಾರತ ನಡುವಿನ ಟಿ20 ಸರಣಿ ಆರಂಭವಾಗಲಿದೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಟಿ20: ಭಾರತ ತಂಡದಿಂದ ಸ್ಟಾರ್​ ಆಲ್​ರೌಂಡರ್​ ಔಟ್​! - India Bangladesh T20 Series

ABOUT THE AUTHOR

...view details