ಹೈದರಾಬಾದ್: ಸಚಿನ್ ತೆಂಡೂಲ್ಕರ್, ಎಮ್.ಎಸ್ ಧೋನಿ, ವಿರಾಟ್ ಕೊಹ್ಲಿ ವಿಶ್ವದ ಅಗ್ರ ಮೂವರು ಶ್ರೀಮಂತ ಕ್ರಿಕೆಟರ್ ಆಗಿದ್ದಾರೆ. ಕ್ರಿಕೆಟ್ ಮೂಲಕ ಹೆಚ್ಚಿನ ಆದಾಯ ಗಳಿಸಿರುವ ಇವರು ಐಷಾರಾಮಿ ಜೀವನದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಬೆಲೆ ಬಾಳುವ ಬಂಗ್ಲೆ, ಕಾರುಗಳನ್ನು ಹೊಂದಿರುವ ಇವರು ಪ್ರೈವೇಟ್ ಜೆಟ್ಗಳನ್ನು ಸಹ ಹೊಂದಿದ್ದಾರೆ. ಹಾಗಾದ್ರೆ ಭಾರತದ ಯಾವ ಕ್ರಿಕೆಟರ್ ಬಳಿ ಪ್ರೈವೇಟ್ ಜೆಟ್ ಇದೆ ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯೋಣ.
ಪ್ರೈವೇಟ್ ಜೆಟ್ ಹೊಂದಿರುವ ಭಾರತೀಯ ಕ್ರಿಕೆಟರ್ಗಳು: ಯಾರ ಬಳಿ ಎಷ್ಟು ಬೆಲೆಯ ಜೆಟ್ ಇವೆ ಗೊತ್ತಾ? - Indian cricketer owns a private jet - INDIAN CRICKETER OWNS A PRIVATE JET
ಬಿಸಿಸಿಐ ಅಂದ್ರೆನೆ ಶ್ರೀಮಂತ ಕ್ರೀಡಾ ಸಂಸ್ಥೆ. ಇಲ್ಲಿ ಹಹಣದ ಹೊಳೆಯೇ ಹರಿಯುತ್ತದೆ ಅನ್ನೋದು ಅತಿಶಯೋಕ್ತಿ ಅಲ್ಲ. ಹಾಗೆಯೇ ಕ್ರಿಕೆಟಿಗರು ಕೂಡ ಒಂದು ಬಾರಿ ತಂಡಕ್ಕೆ ಆಯ್ಕೆ ಆದ್ರೆ ಅವರ ಲಕ್ ಬದಲಾದಂತೆಯೇ ಎಂಬ ಮಾತುಗಳು ಕೇಳಿಬರೋದು ಸಹಜ. ಭಾರತ ಕ್ರಿಕೆಟ್ ತಂಡದ ಹಾಲಿ, ಮಾಜಿ ಆಟಗಾರರು ಪ್ರೈವೇಟ್ ಜೆಟ್ ಅನ್ನು ಹೊಂದಿದ್ದಾರೆ. ಯಾರು ಅವರು ಎಂಬುದನ್ನು ಇಲ್ಲಿ ತಿಳಿಯೋಣ..
ಜೆಟ್ ವಿಮಾನ (Flickr Images)
Published : Sep 1, 2024, 6:08 PM IST
|Updated : Sep 2, 2024, 1:00 PM IST
ಪ್ರೈವೇಟ್ ಜೆಟ್ ಹೊಂದಿರುವ ಭಾರತೀಯ ಕ್ರಿಕೆಟರ್ಗಳು;
- ಕಪಿಲ್ ದೇವ್:ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಕಪಿಲ್ ದೇವ್ ಅವರನ್ನು ಪರಿಗಣಿಸಲಾಗಿದೆ ಮತ್ತು ಅವರ ನಾಯಕತ್ವದಲ್ಲಿ 1983ರಲ್ಲಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತ್ತು. ಸ್ವಾತಂತ್ರ್ಯ ನಂತರ ಖಾಸಗಿ ಜೆಟ್ ಖರೀದಿಸಿದ ಮೊದಲ ಕ್ರಿಕೆಟರ್ ಕಪಿಲ್ ದೇವ್ ಆಗಿದ್ದಾರೆ. ಕಪಿಲ್ ದೇವ್ ಬಳಿ ಇರುವ ಖಾಸಗಿ ಜೆಟ್ನ ಬೆಲೆ 110 ಕೋಟಿ ರೂ. ಆಗಿದೆ.
- ಸಚಿನ್ ತೆಂಡೂಲ್ಕರ್:ಕ್ರಿಕೆಟ್ ದೇವರು ಎಂದೇ ಖ್ಯಾತಿ ಗಳಿಸಿರುವ ಸಚಿನ್ ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಜತೆಗೆ ವಿಶ್ವದ ಶ್ರೀಮಂತ ಕ್ರಿಕೆಟರ್ ಕೂಡ ಆಗಿದ್ದು, ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ. ಇವರು ಬಳಿ ಇರುವ ಜೆಟ್ ಅತ್ಯಂತ ದುಬಾರಿಯದ್ದಾಗಿದೆ. ಇದರ ಬೆಲೆ 250 ಕೋಟಿ ರೂ. ಆಗಿದೆ.
- ಎಂಎಸ್ ಧೋನಿ:ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಎಸ್ ಧೋನಿ ಆಗಿದ್ದಾರೆ. ಅವರ ಶ್ರೇಷ್ಠ ನಾಯಕನ ಜೊತೆ ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಎಂಎಸ್ ಧೋನಿ ಖಾಸಗಿ ಜೆಟ್ ಮಾಲೀಕ ಸಹ ಆಗಿದ್ದಾರೆ. ಇವರ ಬಳಿಯಿರುವ ಜೆಟ್ನ ಬೆಲೆ 110 ಕೋಟಿ ಮೌಲ್ಯದ್ದಾಗಿದೆ.
- ವಿರಾಟ್ ಕೊಹ್ಲಿ:ರನ್ ಮಶಿನ್ ವಿರಾಟ್ ಕೊಹ್ಲಿ ಐಷಾರಾಮಿ ಜೀವನದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇವರ ಬಳಿ ದುಬಾರಿ ಬೆಲೆಯ ಕಾರು ಸೇರಿದಂತೆ ಪ್ರೈವೇಟ್ ಜೆಟ್ ಕೂಡ ಇದೆ. ಕೊಹ್ಲಿ ಅವರ ಖಾಸಗಿ ಜೆಟ್ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದು, ಆರಾಮದಾಯಕ ಪ್ರಯಾಣದ ಅನುಭವವನ್ನು ಒದಗಿಸುತ್ತದೆ. ಇದರ ಬೆಲೆ 120 ಕೋಟಿ ರೂ. ಆಗಿದೆ.
- ಹಾರ್ದಿಕ್ ಪಾಂಡ್ಯ:ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಕ್ರಿಕೆಟ್ರಗಳಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಪಾಂಡ್ಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾರ್ದಿಕ್ ಭಾರತದ ಶ್ರೀಮಂತ ಕ್ರಿಕೆಟ್ರಗಳಲ್ಲಿ ಒಬ್ಬರಾಗಿದ್ದು, ಖಾಸಗಿ ಜೆಟ್ನ ಮಾಲೀಕರೂ ಆಗಿದ್ದಾರೆ. ಇವರ ಬಳಿ 40 ಕೋಟಿ ಮೌಲ್ಯದ ಜೆಟ್ ಇದೆ.
ಇದನ್ನೂ ಓದಿ:ಸಚಿನ್ ನಿರ್ಮಿಸಿರುವ ಈ 3 ದಾಖಲೆ ಮುರಿಯುವುದು ಕೊಹ್ಲಿಗೆ ಅಸಾಧ್ಯವೇ? - Sachin Tendlukar Records
Last Updated : Sep 2, 2024, 1:00 PM IST