RCB Team: ಈ ಬಾರಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಕೆಲ ಆಟಗಾರರ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮ್ಯಾನೆಜ್ಮೆಂಟ್ ವಿರುದ್ದ ಟ್ರೋಲ್ ಕೂಡ ಮಾಡಲಾಗುತ್ತಿದೆ. ಕನ್ನಡಿಗ ಕೆಎಲ್ ರಾಹುಲ್ ಅವರನ್ನೂ ಖರೀದಿಸಲಿಲ್ಲ. ಕನಿಷ್ಠ ಪಕ್ಷ ವಿಲ್ ಜಾಕ್ಸ್ ಅವರನ್ನಾದರೂ ಹಿಂದಕ್ಕೆ ಕರೆದುಕೊಳ್ಳಬಹುದಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೇ ವಿಲ್ ಜಾಕ್ಸ್ ಬದಲಿಗೆ ಜಾಕೋಬ್ ಬೆತೆಲ್ ಅವರನ್ನು ಏಕೆ ಖರೀದಿಸಿದೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಎರಡನೇ ದಿನ ನಡೆದ ಹರಾಜಿನಲ್ಲಿ ಆರ್‌ಸಿಬಿ ತಂಡ ವಿಲ್ ಜಾಕ್ಸ್ ಬದಲಿಗೆ ₹2.60 ಕೋಟಿ ನೀಡಿ ಇಂಗ್ಲೆಂಡ್ನ ಜಾಕೋಬ್ ಬೆತೆಲ್ ಅವರನ್ನು ಖರೀದಿ ಮಾಡಿತು. ಜಾಕ್ಸ್ ಅವರನ್ನು ಮುಂಬೈ ಇಂಡಿಯನ್ಸ್ 5.20 ಕೋಟಿಗೆ ಖರೀದಿ ಮಾಡಿತು. ಇದರ ಬೆನ್ನಲ್ಲೇ RCB ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾದವು. RTM ಕಾರ್ಡ್ ಬಳಕೆ ಮಾಡಿ ಜಾಕ್ಸ್ ಅವರನ್ನು ತಂಡಕ್ಕೆ ತಂದಿದ್ದೇ ಆರ್‌ಸಿಬಿ ಮತ್ತಷ್ಟು ಬಲಿಷ್ಟವಾಗುತಿತ್ತು ಎಂಬ ಮಾತಗುಳು ಹರಿದಾಡಿದ್ದವು. ಆದರೆ, ಆರ್‌ಸಿಬಿ ಮಾತ್ರ ತಮ್ಮ ತಂಡಕ್ಕೆ ಅಗತ್ಯ ಇರುವ ಬ್ಯಾಟ್ಸ್‌ಮನ್ ಅನ್ನೇ ಖರೀದಿ ಮಾಡಬೇಕೆಂದು ಬೆತೆಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಜೇಕಬ್ ಬೆತೆಲ್ ಅವರನ್ನು ಆಯ್ಕೆ ಮಾಡಲು ಆರ್‌ಸಿಬಿ ಮೂರು ಪ್ರಮುಖ ಕಾರಣಗಳನ್ನೂ ಹೊಂದಿದೆ. ಅದೇನು ಎಂದು ಇದೀಗ ತಿಳಿಯೋಣ.
ಮೊದಲ ಕಾರಣ ಎಂದರೆ RCBಗೆ ಎಡಗೈ ಬ್ಯಾಟರ್ಗಳ ಅಗತ್ಯವಿತ್ತು. ಪ್ರಸ್ತುತ 4 ಅಗ್ರ ಕ್ರಮಾಂಕದಲ್ಲಿ ಬಲಗೈ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ ಅವರನ್ನು ತಂಡದಲ್ಲಿರಿಸಿದೆ. ಬಲಗೈ ಜೊತೆಗೆ ಎಡಗೈ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು ಸಮತೋಲನ ವಾಗಿರಿಸಲು ಯೋಚಿಸಿದ ಆರ್‌ಸಿಬಿ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಜೊತೆಗೆ ಬೆತೆಲ್ ಅವರನ್ನು ಆಯ್ಕೆ ಮಾಡಿ ತಂಡದಲ್ಲಿ ಎಡಗೈ ಮತ್ತು ಬಲಗೈ ಬ್ಯಾಟರ್ಗಳ ಕಾಂಬಿನೇಶನ್ ನೊಂದಿಗೆ ಕಣಕ್ಕಿಳಿಸಲು ಯೋಜನೆ ರೂಪಿಸಿದೆ.