ಮೈಸೂರು: ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಇರುವಿಕೆ ಬಗ್ಗೆ ಯಾವುದೇ ರೀತಿಯ ಪ್ರತ್ಯಕ್ಷ ಅಥವಾ ಪರೋಕ್ಷ ಕುರುಹುಗಳು ಕಂಡು ಬಾರದೇ ಇರುವುದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಬಿ ಬಸವರಾಜ್ ಹೇಳಿದ್ದಾರೆ. ರಾತ್ರಿ ವೇಳೆ ಥರ್ಮಲ್ ಡ್ರೋನ್ ಬಳಸಿ ಕ್ಯಾಂಪಸ್ ನಲ್ಲಿ ನಿರಂತರ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ 10 ದಿನಗಳಿಂದ ಇಲ್ಲಿಯವರೆಗೂ ಕ್ಯಾಮೆರಾ ಟ್ರ್ಯಾಪ್ಗಳಲ್ಲಿ ಆಗಲಿ, ಡ್ರೋನ್ ಕ್ಯಾಮೆರಾ, ಕ್ಯಾಂಪಸ್ ನಲ್ಲಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಆಗಲಿ ,ಕೊಂಬಿಂಗ್ ಕಮ್ ಸರ್ಚ್ ನಲ್ಲಿಯಾಗಲಿ, ಯಾವುದೇ ಚಲನವಲನಗಲಾಗಲೀ, ಹೆಜ್ಜೆ ಗುರುತು ಅಥವಾ ಯಾವುದೇ ರೀತಿಯ ಚಿರತೆ ಇರುವಿಕೆಯ ಕುರುಹುಗಳಾಗಲಿ ಕಂಡು ಬಂದಿರುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ನಡೆಯುತ್ತಿದ ಆಪರೇಷನ್ ಚಿರತೆ ಸ್ಟಾಪ್: ಉಪ ಅರಣ್ಯ ಸಂರಕ್ಷಣಾಧಿಕಾರಿ (ETV Bharat) ಇನ್ಪೋಸಿಸ್ ಕ್ಯಾಂಪಸ್ಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿಯೂ ಸಹ ಯಾವುದೇ ಚಿರತೆಯ ಚಲನವಲನಗಳು ಕಂಡು ಬಂದಿರುವುದಿಲ್ಲ. ಕಾರ್ಯಾಚರಣೆಯಲ್ಲಿ ವೈಮಾನಿಕ ಹುಡುಕಾಟಕ್ಕಾಗಿ ಎರಡು ಡ್ರೋನ್ಗಳನ್ನು ಹಾಗೂ ಪಶು ವೈದ್ಯಕೀಯ ತಂಡವನ್ನು ಬಳಸಿಕೊಳ್ಳಲಾಗುವುದು. ಕಳೆದ 10 ದಿನಗಳಿಂದ ಇಲ್ಲಿಯವರೆಗೂ ಚಿರತೆ ಇರುವಿಕೆ ಬಗ್ಗೆ ಯಾವುದೇ ರೀತಿಯ ಪ್ರತ್ಯಕ್ಷ ಅಥವಾ ಪರೋಕ್ಷ ಕುರುಹುಗಳು ಕಂಡು ಬಾರದೇ ಇರುವುದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಮೈಸೂರು ಪ್ರಾದೇಶಿಕ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ನಡೆಯುತ್ತಿದ ಆಪರೇಷನ್ ಚಿರತೆ ಸ್ಟಾಪ್: ಉಪ ಅರಣ್ಯ ಸಂರಕ್ಷಣಾಧಿಕಾರಿ (ETV Bharat) ಇಂತಹ ಪ್ರಕರಣಗಳು ಮರುಕಳಿಸದಂತೆ ಇನ್ಫೋಸಿಸ್ ಕ್ಯಾಂಪಸ್ ಬಲವರ್ಧನೆಗೊಳಿಸುವ ಬಗ್ಗೆ ಹಾಗೂ ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿರುತ್ತದೆ. ರಾತ್ರಿ ವೇಳೆ ಥರ್ಮಲ್ ಡ್ರೋನ್ ಬಳಸಿ ಕ್ಯಾಂಪಸ್ ನಲ್ಲಿ ನಿರಂತರ ನಿಗಾ ವಹಿಸಲು ಸೂಚಿಸಲಾಗಿರುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಬಿ ಬಸವರಾಜ್ ಹೇಳಿದ್ದಾರೆ
ಇದನ್ನು ಓದಿ: ಮೈಸೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಊರು ತೊರೆಯುತ್ತಿರುವ ಗ್ರಾಮಸ್ಥರು