ಬೆಂಗಳೂರು: ಕೆಪಿಟಿಸಿಎಲ್ನಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಇಂದು ಜನವರಿ 16ರಂದು ಪಾಟರಿ ರೋಡ್ ಸ್ಟೇಷನ್, ಮಹಾಲಕ್ಷ್ಮಿ ಲೇಔಟ್, ಹೆಚ್.ಎಸ್.ಆರ್ ಲೇಔಟ್ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ. ಈ ಸಂಬಂಧ ಜನರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿದ್ದು, ಈ ಕೆಳಗಿನ ಸ್ಥಳಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕಿದೆ ಎಂದು ತಿಳಿಸಲಾಗಿದೆ.
ಪಾಟರಿ ರೋಡ್ ಸ್ಟೇಷನ್ ವ್ಯಾಪ್ತಿಯ ಹಳೆ ಬೈಯಪ್ಪನಹಳ್ಳಿ, ನಾಗೇನಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್.ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರಸ್ತೆ, ಕುಕ್ಸನ್ ರಸ್ತೆ, ಡೇವಿಸ್ ರಸ್ತೆ, ರಿಚರ್ಡ್ಸ್ ಪಾರ್ಕ್ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವ ದೇವಸ್ಥಾನ ರಸ್ತೆ, ಕಾಮನಹಳ್ಳಿ ಮುಖ್ಯರಸ್ತೆ, ಕೆ.ಹಚ್.ಬಿ ಕಾಲೋನಿ, ಜೈಭಾರತ್ ನಗರ, ಸಿ.ಕೆ. ಗಾರ್ಡನ್, ಡಿಕೋಸ್ಟಾ ಲೇಔಟ್, ಹಚಿನ್ಸ್ ರಸ್ತೆ, ಉತ್ತರ ರಸ್ತೆ, ವೀಲರ್ ರಸ್ತೆ, ಅಶೋಕ ರಸ್ತೆ, ಬಾಣಸವಾಡಿ ರೈಲು ನಿಲ್ದಾಣ ರಸ್ತೆ, ಮರಿಯಮ್ಮ ಟೆಂಪಲ್ ಸ್ಟ್ರೀಟ್, ಲಾಜರ್ ಲೇಔಟ್, ವಿವೇಕಾನಂದ ನಗರ, ಕ್ಲೈನ್ ರಸ್ತೆ, ಟೆಲಿಫೋನ್ ಎಕ್ಸ್‌ಚೇಂಜ್ ರಸ್ತೆ, ಗ್ಯಾಂಗ್‌ಮೆನ್ ಕ್ವಾರ್ಟಸ್, ಹಚಿನ್ಸ್ ರಸ್ತೆ ಪಾರ್ಕ್ ರಸ್ತೆ, ದೇಶೀಯನಗರ ಸ್ಲಂ, 5ನೇ ಮತ್ತು 6ನೇ ಅಡ್ಡ ಹಚಿನ್ಸ್ ರಸ್ತೆ, ದೈಹಿಕ ಅಂಗವಿಕಲ ಸಂಸ್ಥೆ, ಲಿಂಗರಾಜಪುರ, ಕರಿಯನಪಾಳ್ಯ, ರಾಮಚಂದ್ರಪ್ಪ ಲೇಔಟ್, ಕರಮಚಂದ್ ಲೇಔಟ್, ಸಿಇಓ ಲೇಔಟ್, ಶ್ರೀನಿವಾಸ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಮಹಾಲಕ್ಷ್ಮಿ ಲೇಔಟ್ ನಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ವ್ಯತ್ಯಯ: ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 5 ಗಂಟೆವರೆಗೆ ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಭೂವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್ ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶನಗೆ, ಆದರ್ಶ ಲೇಔಟ್, ಯುನಿಕ್ಸ್ ಕಾಲೋನಿ, ಇಂದಿರಾನಗರ, ಮಂಜುನಾಥ ನಗರ, 3ನೇ ಹಂತ 1ನೇ ಬ್ಲಾಕ್, ಬಿ-ನಗರ, ಲಕ್ಷ್ಮಿ ನಗರ, ಹೆಚ್.ವಿ.ಕೆ. ಲೇಔಟ್, ಕಿರಿಲೋಷ್ಕರ್ ಕಾಲೋನಿ, ಕರ್ನಾಟಕ ಲೇಔಟ್, ಕಮಲಾ ನಗರ, ವಿ.ಜೆ.ಎಸ್.ಎಸ್. ಲೇಔಟ್, ವಾರ್ಡ್ ಕಛೇರಿ, ನಾಗಾಪುರ, ಮಹಾಲಕ್ಷ್ಮಿ ಪುರಂ, ಮೋದಿ ಆಸ್ಪತ್ರೆ ರಸ್ತೆ, ಪಂಜಾಬ್ ನ್ಯಾಷ್ ನಲ್ ಬ್ಯಾಂಕ್, ಜೆ.ಸಿ.ನಗರ, ಕುರಬರಳ್ಳಿ, ರಾಜಾಜಿನಗರ 2ನೇ ಬ್ಲಾಕ್, ಇ.ಎಸ್.ಐ. ಆಸ್ಪತ್ರೆ, ಕಮಲಾನಗರ ಮುಖ್ಯ ರಸ್ತೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸಹ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಕೋರಮಂಗಲ, ಎಚ್ಎಸ್ಆರ್ ಲೇಔಟ್ನಲ್ಲೂ ವಿದ್ಯುತ್ ಕಡಿತ: ಇಲ್ಲಿನ ಬೊಮ್ಮನಹಳ್ಳಿ. ಹೆಚ್.ಎಸ್.ಆರ್. ಲೇಔಟ್, ಕೂಡ್ಲೂ. ಜಕ್ಕಸಂದ್ರ, ಕೈಕೊಂಡನಹಳ್ಳಿ, ಸೋಮಸುಂದರಪಾಳ್ಯ, ಹೊಸಪಾಳ್ಯ, ಕೋರಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ಇದನ್ನೂ ಓದಿ: ಮೈಸೂರು: ಆಸ್ಪತ್ರೆಗೆ ಬಂದ ದರ್ಶನ್; ವೈದ್ಯರು ಕೊಟ್ಟ ಮಾಹಿತಿಯಿದು - ನಟನ ವಿಡಿಯೋ ಇಲ್ಲಿದೆ