Maiden super over in T20:ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಗಳನ್ನು ನಿರ್ಮಿಸುವುದು ಮತ್ತು ಆ ದಾಖಲೆಗಳನ್ನು ಬೇರೊಂದು ತಂಡ ಅಥವಾ ಆಟಗಾರರು ಮುರಿಯುವುದು ಸಹಜವಾಗಿದೆ. ಆದರೆ ಇದೇ ಕ್ರಿಕೆಟ್ನಲ್ಲಿ ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗದಂತಹ ಹಲವಾರು ಅಪರೂಪದ ದಾಖಲೆಗಳು ಕೂಡ ನಿರ್ಮಾಣವಾಗಿವೆ. ಅವುಗಳಲ್ಲಿ 'ಮೇಡನ್ ಸೂಪರ್ ಓವರ್' ಕೂಡ ಒಂದಾಗಿದೆ.
ಹೌದು, ಈ ದಾಖಲೆ ನಿರ್ಮಾಣವಾಗಿ ಇಂದಿಗೆ 10 ವರ್ಷಗಳು ಕಳೆದಿವೆ. ಆದರೆ ಇದನ್ನು ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ. ಅಲ್ಲದೇ ಇದನ್ನು ಮುರಿಯುವುದು ಕೂಡ ಸುಲಭದ ಮಾತಾಗಿಲ್ಲ. ಹಾಗಾದ್ರೆ ಬನ್ನಿ ಯಾವ ಆಟಗಾರ ಮೇಡನ್ ಸೂಪರ್ ಓವರ್ ದಾಖಲೆ ಬರೆದಿದ್ದು ಮತ್ತು ಯಾವ ಲೀಗ್ನಲ್ಲಿ ಇದು ಸಂಭವಿಸಿತು ಎಂದು ತಿಳಿದುಕೊಳ್ಳೋಣ.
2014ರಲ್ಲಿ ನಡೆದ ಕೆರೆಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೆಡ್ ಸ್ಟೀಲ್ ಮತ್ತು ಗಯಾನ ಅಮೇಜಾನ್ ವಾರಿಯರ್ಸ್ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ರೆಡ್ ಸ್ಟೀಲ್ ತಂಡ ಎವಿನ್ ಲೇವಿಸ್ (39), ನಿಕೋಲಸ್ ಪೂರನ್ (37) ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 118 ಕಲೆಹಾಕಿತ್ತು. ಇದಕ್ಕುತ್ತರವಾಗಿ ಗಯಾನ ವಾರಿಯರ್ಸ್ ಕೂಡ 20 ಓವರ್ಗಳಲ್ಲಿ 118 ರನ್ಗಳಿಸಿದ ಕಾರಣ ಪಂದ್ಯ ಟೈನಲ್ಲಿ ಅಂತ್ಯ ಕಂಡಿತ್ತು. ನಂತರ ಪಂದ್ಯದ ಫಲಿತಾಂಶಕ್ಕಾಗಿ ಉಭಯ ತಂಡಗಳ ನಡುವೆ ಸೂಪರ್ ಓವರ್ ಆಡಿಸಲಾಯಿತು.