ಕರ್ನಾಟಕ

karnataka

ETV Bharat / sports

ಕ್ಯಾಪ್ಟನ್‌ ಜೊತೆ ಜಗಳವಾಡಿ ಪಂದ್ಯದ ಮಧ್ಯೆಯೇ ಮೈದಾನದಿಂದ ಹೊರನಡೆದ ಬೌಲರ್ ಅಮಾನತು - ALZARI JOSEPH

ಇಂಗ್ಲೆಂಡ್​ ವಿರುದ್ಧದ ಏಕದಿನ ಪಂದ್ಯದ ವೇಳೆ ನಾಯಕನೊಂದಿಗೆ ಜಗಳವಾಡಿ ಅರ್ಧಕ್ಕೆ ಪಂದ್ಯ ಬಿಟ್ಟು ಹೋಗಿದ್ದ ವೆಸ್ಟ್​ ಇಂಡೀಸ್​ ಬೌಲರ್​ ಅಮಾನತಾಗಿದ್ದಾರೆ.

ಅಲ್ಜಾರಿ ಜೋಸೆಫ್​
ಅಲ್ಜಾರಿ ಜೋಸೆಫ್​ (IANS)

By ETV Bharat Sports Team

Published : Nov 8, 2024, 11:01 AM IST

Updated : Nov 8, 2024, 12:22 PM IST

ಹೈದರಾಬಾದ್​: ವೆಸ್ಟ್ ಇಂಡೀಸ್ ಸ್ಟಾರ್ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು ಮುಂದಿನ ಎರಡು ಪಂದ್ಯಗಳಿಂದ ನಿಷೇಧಿಸಲಾಗಿದೆ. ಇಂಗ್ಲೆಂಡ್​ ವಿರುದ್ಧದ ಪಂದ್ಯದ ವೇಳೆ ನಾಯಕನೊಂದಿಗೆ ಜಗಳವಾಡಿದ್ದ ಅಲ್ಜಾರಿ ಜೋಸೆಫ್​, ಅರ್ಧದಲ್ಲೇ ಪಂದ್ಯ ಬಿಟ್ಟು ಹೋಗಿದ್ದರು. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಲ್ಜಾರಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

ಏನಾಯ್ತು?: ಬುಧವಾರ ನಡೆದ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಜೋಸೆಫ್ ಈ ಘಟನೆ ನಡೆಯಿತು. ಫೀಲ್ಡಿಂಗ್​ ವಿಚಾರವಾಗಿ ನಾಯಕ ಶಾಯ್​ ಹೋಪ್​ರೊಂದಿಗೆ ಜಗಳವಾಡಿದ ಅಲ್ಜಾರಿ ಅರ್ಧದಲ್ಲಿಯೇ ಪಂದ್ಯ ಬಿಟ್ಟು ಹೋಗಿದ್ದರು.

ಅಲ್ಜಾರಿ ಜೋಸೆಫ್​ ಬೌಲಿಂಗ್ ಮಾಡುವಾಗ, ನಾಯಕ ಶಾಯ್ ಹೋಪ್ ಅವರು ಜೋಸೆಫ್​ ಇಚ್ಛೆಯಂತೆ ಫೀಲ್ಡಿಂಗ್​ಗೆ ಅವಕಾಶ ಮಾಡಿಕೊಡಲಿಲ್ಲ. ಇದರಿಂದಾಗಿ ಜೋಸೆಫ್​ ಕೋಪಗೊಂಡರು. ನಾಯಕನಿಗೆ ಮೈದಾನದಲ್ಲೇ ಬೈದ ಅವರು ನಂತರ ತನ್ನ ಓವರ್ ಮುಗಿಸಿ ಮೈದಾನದಿಂದ ಡಗೌಟ್​ಗೆ ಹೋಗಿ ಕುಳಿತುಕೊಂಡರು. ಬಳಿಕ ಒಂದು ಓವರ್​ ನಂತರ ಮತ್ತೆ ಮೈದಾನಕ್ಕೆ ಬಂದರು.

ಈ ಕುರಿತು ಪ್ರತಿಕ್ರಿಯಿಸಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ನಿರ್ದೇಶಕ ಮೈಲ್ಸ್ ಬಾಸ್ಕೊಂಬೆ, "ಅಲ್ಜಾರಿ ಅವರ ವರ್ತನೆ ಕ್ರಿಕೆಟ್​ಗೆ ವಿರುದ್ಧವಾಗಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಮತ್ತು ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ" ಎಂದು ತಿಳಿಸಿದ್ದಾರೆ.

ಇದಾದ ಬಳಿಕ ಅಲ್ಜಾರಿ ಜೋಸೆಫ್ ಕ್ಷಮೆ ಯಾಚಿಸಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯನ್ನು ಉಲ್ಲೇಖಿಸಿ ಅವರು, "ನನ್ನಿಂದ ತಪ್ಪಾಗಿದೆ. ನಾನು ವೈಯಕ್ತಿಕವಾಗಿ ನಾಯಕ ಶಾಯ್ ಹೋಪ್, ಸಹ ಆಟಗಾರರು ಮತ್ತು ತಂಡದ ಮ್ಯಾನೇಜ್‌ಮೆಂಟ್‌ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ. ವೆಸ್ಟ್ ಇಂಡೀಸ್ ಅಭಿಮಾನಿಗಳಲ್ಲೂ ಕ್ಷಮೆ ಕೇಳುತ್ತೇನೆ" ಎಂದಿದ್ದಾರೆ.

WI vs ENG Test Series Highlights: ವೆಸ್ಟ್ ಇಂಡೀಸ್ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ 7 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಗೆದ್ದುಕೊಂಡಿತು. ಇದಕ್ಕೂ ಮುನ್ನ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ವಿಂಡೀಸ್ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. 2ನೇ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಇಂಗ್ಲೆಂಡ್ ಜಯ ಸಾಧಿಸಿತ್ತು. ಮೂರನೇ ಮತ್ತು ಸರಣಿಯ ನಿರ್ಣಾಯಕ ಪಂದ್ಯದಲ್ಲಿ ವಿಂಡೀಸ್ 8 ವಿಕೆಟ್‌ಗಳಿಂದ ಜಯಭೇರಿ ಬಾರಿಸಿ 3 ಪಂದ್ಯಗಳ ಸರಣಿಯನ್ನು 2-1ರಿಂದ ಜಯಿಸಿತು.

ಇದನ್ನೂ ಓದಿ:RCB ಫೈನಲ್​ ಪ್ರವೇಶಿಸಬೇಕಾದ್ರೆ ಈ ನಾಲ್ವರು ತಂಡಕ್ಕೆ ಬೇಕೇ ಬೇಕು: ಎಬಿಡಿ

Last Updated : Nov 8, 2024, 12:22 PM IST

ABOUT THE AUTHOR

...view details