ಕರ್ನಾಟಕ

karnataka

ETV Bharat / sports

ಕೋರ್ಟ್​ ಮುಂದೆ ತನ್ನ ದೇಹ ತೂಕ ಹೆಚ್ಚಿದ್ದರ ಕಾರಣ ವಿವರಿಸಿದ ಕುಸ್ತಿಪಟು ವಿನೇಶ್​ ಫೋಗಟ್​ - Vinesh Phogat - VINESH PHOGAT

ಮಂಗಳವಾರ (ಆಗಸ್ಟ್​ 13) ಕುಸ್ತಿಪಟು ವಿನೇಶ್​ ಫೋಗಟ್​ ಅವರ ಅನರ್ಹತೆ ತೀರ್ಪನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಪ್ರಕಟಿಸುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಭಾರತದ ಜಟ್ಟಿ ಕೋರ್ಟ್​ಗೆ ತನ್ನ ಅಭಿಪ್ರಾಯಗಳನ್ನು ಸಲ್ಲಿಸಿದ್ದಾರೆ.

ಕುಸ್ತಿಪಟು ವಿನೇಶ್​ ಪೋಗಟ್​
ಕುಸ್ತಿಪಟು ವಿನೇಶ್​ ಫೋಗಟ್​ (AP)

By ETV Bharat Karnataka Team

Published : Aug 12, 2024, 10:57 PM IST

ಹೈದರಾಬಾದ್:ಪ್ಯಾರಿಸ್​ ಒಲಿಂಪಿಕ್ಸ್‌​​ನಲ್ಲಿ ಭಾರತದ ಕುಸ್ತಿಪಟು ವಿನೇಶ್​ ಫೋಗಟ್​ ಅವರು ತೂಕ ಹೆಚ್ಚಳದಿಂದಾಗಿ ಅನರ್ಹತೆಗೆ ಒಳಗಾಗಿದ್ದರು. ಇದೀಗ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ (ಸಿಎಸ್​​ಎ) ಮೊರೆ ಹೋಗಿದ್ದು, ವಿಚಾರಣೆ ಆಗಸ್ಟ್​ 13 ರಂದು ಹೊರಬೀಳುವ ಸಾಧ್ಯತೆ ಇದೆ.

ಚಿನ್ನದ ಪದಕದ ಹಣಾಹಣಿಗೂ ಮುನ್ನ ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕ ತೂಕ ಹೆಚ್ಚಳವಾದ್ದರಿಂದ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ನಿಂದ ಅನರ್ಹಗೊಂಡಿದ್ದ ಕುಸ್ತಿಪಟು ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ನೀಡುವಂತೆ ಪ್ರತಿಪಾದಿಸಲಾಗುತ್ತಿದೆ. ಇದಕ್ಕೂ ಮೊದಲು ಆಡಿದ ಮೂರು ಪಂದ್ಯಗಳಲ್ಲಿ ನಿಗದಿತ ತೂಕದಲ್ಲಿದ್ದ ಫೋಗಟ್​ ಫೈನಲ್‌ಗೂ ಮುನ್ನ ತೂಕ ಹೆಚ್ಚಾಗಿದ್ದರು.

ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ​​(IOA) ಶುಕ್ರವಾರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಕುಸ್ತಿಪಟುವಿನ ಪರ ವಾದಿಸಿತು. ವಕೀಲ ಹರೀಶ್ ಸಾಳ್ವೆ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮುಂದೆ ವಿನೇಶ್​ ಪರವಾಗಿ ವಾದ ಮಂಡನೆ ಮಾಡಿದ್ದರು. ಭಾರತೀಯ ಕುಸ್ತಿಪಟು ತನ್ನೆಲ್ಲಾ ಅಭಿಪ್ರಾಯಗಳನ್ನು ಕೋರ್ಟ್​ ಮುಂದೆ ಮಂಡಿಸಿದ್ದಾರೆ.

ವಿನೇಶ್​ ಹೇಳಿದ್ದೇನು?:ಮಾಧ್ಯಮ ವರದಿಯ ಪ್ರಕಾರ, "ಕುಸ್ತಿ ಪಂದ್ಯಾವಳಿ ನಡೆದ ಸ್ಥಳವಾದ ಚಾಂಪ್ ಡಿ ಮಾರ್ಸ್ ಅರೆನಾ ಮತ್ತು ಕ್ರೀಡಾ ಗ್ರಾಮದ ನಡುವಿನ ಅಂತರವು ಹೆಚ್ಚಿಲ್ಲದ ಕಾರಣ, ಅಗತ್ಯ ತೂಕವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಜೊತೆಗೆ, ಪಂದ್ಯದ ವೇಳಾಪಟ್ಟಿಯೂ ತನ್ನ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಸಮಯಾವಾಶ ಸಿಗಲಿಲ್ಲ. ಸೆಮಿಫೈನಲ್​ ಸ್ಪರ್ಧೆಯ ನಂತರ ಹೆಚ್ಚಿದ್ದ 52.7 ಕೆಜಿಯನ್ನು ಇಳಿಸಿಕೊಳ್ಳಲು ಸಮಯವೂ ಸಾಕಾಗಲಿಲ್ಲ" ಎಂದು ಅವರು ವಕೀಲರು ಕೋರ್ಟ್​ ಮುಂದೆ ಹೇಳಿದ್ದಾರೆ.

"ವಿನೇಶ್ ಅವರು ಫೈನಲ್​ ದಿನದಂದು ತೂಕ ಪರೀಕ್ಷೆ ನಡೆಸಿದಾಗ ಹೆಚ್ಚುವರಿ 100 ಗ್ರಾಂ ಮಾತ್ರ ಹೊಂದಿದ್ದರು. ಇದು ಯಾವುದೇ ಸ್ಪರ್ಧಾತ್ಮಕ ಕ್ರೀಡೆಗೆ ದೊಡ್ಡ ಸವಾಲಾಗಿರಲಿಲ್ಲ. ಇದರಿಂದ ಯಾವುದೇ ಕ್ರೀಡಾಪಟುವಿಗೂ ದೊಡ್ಡ ಲಾಭ ತಂದು ಕೊಡುವುದಿಲ್ಲ. 100 ಗ್ರಾಂಗಳ ಅಧಿಕವು ಅತ್ಯಲ್ಪವಾಗಿದೆ. ಬಿಸಿ ವಾತಾವರಣದಲ್ಲಿ ಮಾನವನ ದೇಹ ತುಸು ಉಬ್ಬುವುದು ಸುಲಭ. ಶಾಖದಿಂದ ಮಾನವ ದೇಹಕ್ಕೆ ಹೆಚ್ಚು ನೀರು ಬೇಡುತ್ತದೆ. ವೈಜ್ಞಾನಿಕವಾಗಿ ಅಥ್ಲೀಟ್ ಒಂದೇ ದಿನದಲ್ಲಿ ಮೂರು ಬಾರಿ ಸ್ಪರ್ಧಿಸುವುದರಿಂದ ಸ್ನಾಯುವಿನ ದ್ರವ್ಯರಾಶಿಯು ಹೆಚ್ಚಾಗಿರಬಹುದು" ಎಂದು ವಾದ ಸರಣಿ ಮಂಡಿಸಿದ್ದಾರೆ.

"ಸ್ಪರ್ಧೆಗಳ ನಂತರ ತನ್ನ ಆರೋಗ್ಯ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಕ್ರೀಡಾಪಟುವು ಸೇವಿಸುವ ಆಹಾರದಿಂದಲೂ ತೂಕ ಸಹಜವಾಗಿ ಹೆಚ್ಚಾಗಿರಬಹುದು. ಕ್ರೀಡೆಯಲ್ಲಿ ವಂಚಿಸಲು ಅಥವಾ ಅದರಿಂದ ಲಾಭವನ್ನು ಪಡೆದುಕೊಳ್ಳಲು ನಡೆಸಿದ ಯತ್ನವಲ್ಲ. ಇದಕ್ಕಾಗಿಯೇ ಹೆಚ್ಚುವರಿ ಆಹಾರ ಸೇವನೆ ಮಾಡಿದ ಆರೋಪವೂ ಸುಳ್ಳು" ಎಂದು ಫೋಗಟ್​ ಅವರ ವಕೀಲರು ಹೇಳಿದ್ದಾರೆ.

ಇದನ್ನೂ ಓದಿ:ವಿನೇಶ್ ಫೋಗಟ್‌ ಮೇಲ್ಮನವಿ ತೀರ್ಪಿನ ಗಡುವು ವಿಸ್ತರಣೆ: CAS ನಿರ್ಧಾರ ಪ್ರಕಟ ಯಾವಾಗ? - PARIS OLYMPICS 2024

ABOUT THE AUTHOR

...view details