ಹೈದರಾಬಾದ್: ಅಂತರ್ಜಾತಿ ಮದುವೆಯಾದ ಕಾರಣ ತಂಗಿಯ ಗಂಡನನ್ನು ಹತ್ಯೆ ಮಾಡಿರುವ ಘಟನೆ ಸೂರ್ಯಪೇಟ್ದಲ್ಲಿ ನಡೆದಿದೆ. ಇದೊಂದು ಮರ್ಯಾದೆ ಹತ್ಯೆ ಎಂದು ಪ್ರಾಥಮಿಕ ತನಿಖೆಯಿಂದ ಪೊಲೀಸರು ಕಂಡುಕೊಂಡಿದ್ದಾರೆ.
ಏನಿದು ಘಟನೆ?: ಸೂರ್ಯಪೇಟ್ ಜಿಲ್ಲೆಯ ಮಾಮಿಲಗಡ್ಡದ ವಡಿಯಕೊಂಡ ಕೃಷ್ಣ (30)ಕೊಲೆಯಾದ ವ್ಯಕ್ತಿ. ಬಿಫಾರ್ಮಸಿ ಓದುತ್ತಿದ್ದ ಈತ ಸೂರ್ಯಾಪೇಟ್ನ ಕಲಮರಿ ಪ್ರದೇಶದ ಕೊಟ್ಲಾ ನವೀನ್ ಜೊತೆ ಸಖ್ಯ ಬೆಳೆಸಿಕೊಂಡಿದ್ದ. ನವೀನ್ ಸ್ಥಳೀಯ ನಾಯಕನಾಗಿ ಬೆಳೆಯಬೇಕು ಎಂಬ ಉತ್ಸಾಹವನ್ನು ಹೊಂದಿದ್ದ. ಇವರಿಬ್ಬರ ಗೆಳೆತನದಿಂದ ನವೀನ್ ಕೃಷ್ಣನನ್ನು ಮನೆಗೆ ಕರೆದೊಯ್ಯುತ್ತಿದ್ದ. ಇಲ್ಲಿ ನವೀನ್ ಚಿಕ್ಕ ಸಹೋದರಿ ಭಾರ್ಗವಿ ಪರಿಚಯವಾಗಿ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು. ಈ ವಿಷಯ ತಿಳಿದ ನವೀನ್, ಈ ಕುರಿತು ಎಚ್ಚರಿಸುವ ಜೊತೆಗೆ ಬೆದರಿಕೆಯನ್ನೂ ಹಾಕಿದ್ದ. ಆದರೂ ಬಗ್ಗದೇ ಕೃಷ್ಣ ಮತ್ತು ಭಾರ್ಗವಿ ಮದುವೆಯಾಗಿದ್ದರು
ಸೆಟಲ್ಮೆಂಟ್ಗೆ ಕರೆದು ಹತ್ಯೆ: ನವೀನ್ ಸ್ನೇಹಿತ ಬೈರು ಮಹೇಶ್ ಕೂಡ ಕೃಷ್ಣನಿಗೆ ಕಳೆದೆರಡು ತಿಂಗಳ ಹಿಂದೆ ಪರಿಚಯವಾಗಿದ್ದ. ಇವರಿಬ್ಬರು ಕೃಷ್ಣನೊಂದಿಗೆ ಸಣ್ಣ ಹಣದ ವ್ಯವಹಾರವನ್ನು ಹೊಂದಿದ್ದರು. ಮಹೇಶ್ ಸಂಜೆ 5ಕ್ಕೆ ಬರುವಂತೆ ಕೃಷ್ಣನಿಗೆ ತಿಳಿಸಿದ್ದ. ಮಹೇಶ್ ಕರೆ ಹಿನ್ನೆಲೆ ಕೃಷ್ಣ ಅಲ್ಲಿಗೆ ತೆರಳಿದ್ದ. ಆದರೆ ರಾತ್ರಿ 7 ಆದರೂ ಮನೆಗೆ ಬಾರದ ಹಿನ್ನಲೆ ಮಹೇಶ್ಗೆ ಭಾರ್ಗವಿ ಕರೆ ಮಾಡಿ ವಿಚಾರಿಸಿದ್ದಳು . ಈ ವೇಳೆ ಕೃಷ್ಣ ತಾನೂ ಬ್ಯುಸಿಯಾಗಿರುವುದಾಗಿಯೂ ಹಾಗೂ 10 ನಿಮಿಷದ ಬಳಿಕ ಕರೆ ಮಾಡುವುದಾಗಿ ತಿಳಿಸಿದ್ದ. ಇದಾದ ತಕ್ಷಣಕ್ಕೆ ಮಹೇಶ್ ಕೃಷ್ಣನ ಹೆಂಡತಿಗೆ ಕರೆ ಮಾಡಿ 10 ನಿಮಿಷದಲ್ಲಿ ಬರುವುದಾಗಿ ತಿಳಿಸಿದ್ದ ಆದರೆ ಕೃಷ್ಣ ಮರಳಿ ಮನೆಗೆ ಹೋಗಲೇ ಇಲ್ಲ.
ಇನ್ನು ಕೃಷ್ಣನ ಮೃತ ದೇಹ ಸೋಮವಾರ ಮುನ್ಸಿಪಲ್ ಏರಿಯಾದ ಮೂಸಿ ಕಾಲುವೆ ಯಲ್ಲಿ ಪತ್ತೆಯಾಗಿತ್ತು. ಆತನ ತಲೆ ಮತ್ತು ಕತ್ತಿಗೆ ಗಾಯವಾಗಿತ್ತು. ಆತನ ನಾಲಿಗೆ ಕೂಡ ಹೊರ ಬಂದಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರು ಕೊಲೆ ಆರೋಪಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಿದ್ದರು. ಭಾರ್ಗವಿ ಅಣ್ಣ ನವೀನ್, ತಮ್ಮ ವಂಶಿ, ತಂದೆ ಸೈದು, ಮಹೇಶ್ ವಿರುದ್ಧ ಕೃಷ್ಣ ತಂದೆ ಡೇವಿಡ್ ಜಾತಿ ನಿಂದನೆ ಅಡಿ ಪ್ರಕರಣ ದಾಖಲಿಸಿದ್ದಾರೆ
ಆರು ತಿಂಗಳ ಹಿಂದೆ ಕೃಷ್ಣ, ಭಾರ್ಗವಿಯನ್ನು ಮದುವೆಯಾಗಿ ಸೂರ್ಯಪೇಟೆಗೆ ಬಂದಿದ್ದ. ಅತ್ತ ತಂಗಿ ಅಂತರ್ಜಾತಿ ಮದುವೆಯಾದ ಹಿನ್ನಲೆ ಎರಡು ಕುಟುಂಬದ ನಡುವೆ ಅನೇಕ ಬಾರಿ ಜಗಳ ಕೂಡ ನಡೆದಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿತು.
ಇದನ್ನೂ ಓದಿ: ಫೆ.12ರಂದು ಮಹಾಪಂಚಾಯತ್ : ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ರೈತ ನಾಯಕ ಜಗಜಿತ್ ದಲ್ಲೆವಾಲ್ ಕರೆ
ಇದನ್ನೂ ಓದಿ: ಗಂಗಾಸ್ನಾನದ ಪಾವಿತ್ರ್ಯತೆ, ಹಿಂದೂಗಳ ಭಾವನೆಗಳಿಗೆ ಖರ್ಗೆ ಅವಮಾನ ಮಾಡಿದ್ದಾರೆಂದು ಬಿಜೆಪಿ ಆರೋಪ