ಹೈದರಾಬಾದ್:ಭಾರತ ಮತ್ತು ಬಾಂಗ್ಲಾದೇಶ ನಡುವೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟವನ್ನು ನಿಗದಿತ ಸಮಯ 45 ನಿಮಿಷಕ್ಕೂ ಮೊದಲೇ ನಿಲ್ಲಿಸಲಾಗಿದೆ.
ಹೌದು, ಪಂದ್ಯ ನಡೆಯುತ್ತಿದ್ದ ವೇಳೆ ಸಂಜೆ 4.15ರ ಸುಮಾರಿಗೆ ಮೈದಾನದ ಸುತ್ತ ಮೋಡ ಆವರಿಸಿತ್ತು. ಇದರಿಂದಾಗಿ ಬೆಳಕಿನ ಕೊರತೆ ಉಂಟಾಗಿದೆ. ಕೂಡಲೇ ಮೈದಾನದಲ್ಲಿನ ಫ್ಲೆಡ್ ಲೈಟ್ಗಳನ್ನು ಬೆಳಗಿಸಲು ಸೂಚಿಸಲಾಗಿತ್ತು. ಆದರೆ ಆ ಲೈಟ್ಗಳಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಆಟ ಮುಂದುವರಿಸಬೇಕೆ ಬೇಡವೇ ಎಂದು ಚರ್ಚೆ ನಡೆಸಿದ ಅಂಪೈರ್ಗಳು ಇಂದಿನ ಆಟವನ್ನು ಇಲ್ಲಿಗೆ ಮುಕ್ತಾಯ ಗೊಳಿಸಲು ಸೂಚಿಸಿದರು. ಈ ವೇಳೆ ನಾಯಕ ರೋಹಿತ್ ಶರ್ಮಾ, ಬೆಳಕು ಉತ್ತಮವಾಗಿದ್ದು ಪಂದ್ಯವನ್ನು ಮುಂದುವರೆಸಬಹುದಾಗಿದೆ. ಜತೆಗೆ ವೇಗದ ಬೌಲರ್ಗಳ ಬದಲಿಗೆ ಸ್ಪೀನ್ನರ್ಗಳಿಂದ ಬೌಲಿಂಗ್ ಮುಂದುವರೆಸುವುದಾಗಿ ಅಂಪೈರ್ಗೆ ತಿಳಿಸಿದರು.
ಅದಾಗಲೇ ಮೊಹ್ಮದ್ ಸಿರಾಜ್ ತಮ್ಮ ಓವರ್ನ 2 ಎಸೆತಗಳನ್ನು ಪೂರ್ಣಗೊಳಿಸಿದ್ದರು. ರೋಹಿತ್ ಅವರ ಮಾತು ಕೇಳಿದ ಬಳಿಕ ಉಳಿದ ನಾಲ್ಕು ಎಸೆತಗಳನ್ನು ಸ್ಪಿನ್ ಬೌಲಿಂಗ್ ಮಾಡುವುದಾಗಿ ಬೇಡಿಕೆ ಇಟ್ಟರು. ಅಲ್ಲದೇ ಸ್ಪಿನ್ ಬೌಲಿಂಗ್ ಅಭ್ಯಾಸವನ್ನು ಮಾಡಲಾರಂಭಿಸಿದ್ದರು. ಆದ್ರೆ ಇದಕ್ಕೊಪ್ಪದ ಅಂಪೈರ್ ಪಂದ್ಯವನ್ನು ನಿಲ್ಲಿಸಲು ಕರೆ ನೀಡಿದರು. ಇದರಿಂದಾಗಿ 45 ನಿಮಷಕ್ಕೂ ಮೊದಲೇ ಪಂದ್ಯ ಮುಕ್ತಾಯಗೊಂಡಿದೆ.
ಉಳಿದಂತೆ ಮೊದಲ ಟೆಸ್ಟ್ನಲ್ಲಿ ಬಾಂಗ್ಲಾಗೆ ಭಾರತ ಬೃಹತ್ ಗುರಿ ನೀಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಆರ್ ಅಶ್ವಿನ್ ಶತಕ ಮತ್ತು ಜಡೇಜಾರ ಅರ್ಧಶತಕದ ನೆರವಿನಿಂದ 376 ರನ್ ಕಲೆಹಾಕಿದ್ದ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಪಂತ್ ಮತ್ತು ಗಿಲ್ ಶತಕದಿಂದಾಗಿ 4 ವಿಕೆಟ್ ನಷ್ಟಕ್ಕೆ 287 ರನ್ ಕಲೆ ಹಾಕಿ ಡಿಕ್ಲೇರ್ ಘೋಷಣೆ ಮಾಡಿಕೊಂಡಿತು. ಇದರೊಂದಿಗೆ ರೋಹಿತ್ ಪಡೆ 515 ರನ್ಗಳ ಮುನ್ನಡೆ ಸಾಧಿಸುವುದರ ಜೊತೆಗೆ ಎದುರಾಳಿ ತಂಡಕ್ಕೆ ಬೃಹತ್ ಗುರಿಯೊಂದನ್ನು ನೀಡಿತು.
ಈ ಗುರಿಯನ್ನು ಬೆನ್ನು ಹತ್ತಿರುವ ಬಾಂಗ್ಲಾ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕ ಬ್ಯಾಟರ್ಗಳಾದ ಜಾಕೀರ್ ಹಸನ್, ಶದಮ್ ಇಸ್ಲಾಮ್ 62 ರನ್ಗಳ ಜೊತೆಯಾಟವಾಡಿ ಉತ್ತಮ ಫಾರ್ಮನಲ್ಲಿ ಕಾಣಿಸಿಕೊಂಡಿದ್ದರು. ಆದರೆ, 33 ರನ್ ಗಳಿಸಿದ್ದ ಜಾಕೀರ್ಗೆ ಬುಮ್ರಾ ಪೆವಿಲಿಯನ್ ದಾರಿ ತೋರಿಸಿದರು, ನಂತರ 35 ರನ್ ಕಲೆಹಾಕಿದ್ದ ಶದಮ್ ಆರ್ ಅಶ್ವಿನ್ ಬಲೆಗೆ ಬಿದ್ದರು. ಬಳಿಕ ಬಂದ ಮೊಮಿನುಲ್ ಹಖ್ (13), ಮುಷಿಫಿಕರ್ ರಹೀಮ್ (13) ಕೂಡ ಬಹುಬೇಗ ವಿಕೆಟ್ ಒಪ್ಪಿಸಿ ಹೊರ ನಡೆದರು. ನಾಯಕ ನಜ್ಮುಲ್ ಹೊಸೈನ್ ಶಾಂಟೋ ಅರ್ಧಶತಕ ಪೂರೈಸಿ, ಶಕೀಬ್ರೊಂದಿಗೆ ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ:ಬಾಂಗ್ಲಾದೇಶದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್: ವಿಡಿಯೋ ವೈರಲ್ - Rishabh Pant sets field