ಹೈದರಾಬಾದ್:ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇದಕ್ಕಾಗಿ ದಿನನಿತ್ಯ ವ್ಯಾಯಾಮ, ಒಳ್ಳೆಯ ಆಹಾರ ಸೇವನೆ ಮಾಡುತ್ತಾರೆ. ಮತ್ತೆ ಕೆಲವರು ದೇಹವನ್ನು ದಂಡಿಸಲು ಕ್ರೀಡೆಯಂತಹ ಚುಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಆದರೆ ನಿಮಗೆ ಗೊತ್ತಾ ಕ್ರೀಡೆಗಳನ್ನು ಆಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಬಲಿಷ್ಠವಾಗಿರುತ್ತೇವೆ ಎಂದು ಅದೇಷ್ಟೋ ಸಂಶೋಧನಗಳು ಬಹಿರಂಗ ಪಡಿಸಿವೆ.
ಇದೀಗ ಮತ್ತೊಂದು ಸಂಶೋಧನೆಯಲ್ಲಿ ಈ ಐದು ಕ್ರೀಡೆಗಳನ್ನು ಯಾರು ಹೆಚ್ಚಾಗಿ ಆಡುತ್ತಾರೋ ಅವರ ಆಯಸ್ಸು 5 ರಿಂದ 10 ವರ್ಷಗಳ ಕಾಲ ಹೆಚ್ಚುತ್ತದೆ ಎಂದು ಬಹಿರಂಗ ಗೊಂಡಿದೆ. ಹಾಗಾದರೆ ಬನ್ನಿ ಆಯಸ್ಸನ್ನು ಹೆಚ್ಚಿಸುವ ಕ್ರೀಡೆಗಳು ಯಾವವು ಎಂದು ಈ ಸುದ್ಧಿಯಲ್ಲಿ ತಿಳಿದುಕೊಳ್ಳೋಣ.
2016ರಲ್ಲಿ ಬ್ರಿಟಿಷ್ ಜನರಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಒಂದು ಸಂಶೋಧನೆಯನ್ನು ನಡೆಸಿತ್ತು. ಸುಮಾರು 80,000 ಸಾವಿರಕ್ಕೂ ಹೆಚ್ಚಿನ ಕ್ರೀಡಾಪಟುಗಳನ್ನು ಈ ಸಂಶೋಧನೆಯಲ್ಲಿ ಬಳಿಸಿಕೊಂಡು 9 ವರ್ಷಗಳ ಕಾಲ ಅಧ್ಯಯನ ಮಾಡಲಾಗಿತ್ತು. ಇದರಲ್ಲಿ ಈ 5 ಕ್ರೀಡೆಗಳನ್ನು ಆಡುತ್ತಿರುವವರು ಸಾಮಾನ್ಯ ಜನರಿಗಿಂತ ಹೆಚ್ಚು ವರ್ಷ ಬದುಕುತ್ತಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹಾಗಾದ್ರೆ ಆ ಕ್ರೀಡೆಗಳು ಯಾವವು ಎಂದು ಇದೀಗ ತಿಳಿಯೋಣ.
ಸ್ವಿಮ್ಮಿಂಗ್:ಈ ಕ್ರೀಡೆಯೂ ಜೀವತಾವಧಿ ಹೆಚ್ಚಿಸುವ ಕ್ರೀಡೆಗಳಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ಹೆಚ್ಚಾಗಿ ಸ್ವಿಮ್ಮಿಂಗ್ ಮಾಡುವವರು ಜೀವಿತಾವಧಿ 3.4 ವರ್ಷಗಳ ಹೆಚ್ಚುತ್ತದೆ ಎಂದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಸೈಕಲಿಂಗ್:ಈ ಪಟ್ಟಿಯಲ್ಲಿ ಸೈಕಲಿಂಗ್ 4ನೇ ಸ್ಥಾನದಲ್ಲಿದೆ. ಈ ಕ್ರೀಡೆಯೂ ದೇಹವನ್ನು ಸದೃಢಗೊಳಿಸುವುದರ ಜೊತೆಗೆ ನಮ್ಮ ಆಯಸ್ಸನ್ನು ಹೆಚ್ಚುಸುವಲ್ಲಿ ಸಹಾಯ ಮಾಡುತ್ತದೆ. ಸೈಕಲ್ ಕ್ರೀಡೆಯನ್ನು ಆಡುವುದರಿಂದ 3.7 ವರ್ಷಗಳ ಕಾಲ ಹೆಚ್ಚಾಗಿ ಬದುಕುತ್ತೇವೆ