ನವದೆಹಲಿ: ಈ ವರ್ಷ ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅತ್ಯುತ್ತಮ ಪ್ರದರ್ಶನ ತೋರಿ ದೇಶದ ಗಮನ ಸೆಳೆದಿದ್ದಾರೆ. ಶೂಟಿಂಗ್ ಈವೆಂಟ್ ಒಂದರಲ್ಲೇ ಎರಡು ಪದಕಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದರು. ಈ ಟೂರ್ನಿ ಬಳಿಕ ಶೂಟರ್ ಮನು ಒಂದಿಲ್ಲೊಂದು ವಿಷಯದಿಂದ ಸದಾ ಸುದ್ದಿಯಲ್ಲಿದ್ದಾರೆ. ಅದರಲ್ಲಿ ಒಲಿಂಪಿಕ್ಸ್ನಲ್ಲಿ ಬಳಸಿದ್ದ ಪಿಸ್ತೂಲ್ ಬೆಲೆ ಕೂಡ ಒಂದಾಗಿದೆ. ಒಲಿಂಪಿಕ್ಸ್ನಲ್ಲಿ ಮನು ಬಳಸಿದ ಪಿಸ್ತೂಲ್ ಬೆಲೆ ಕೋಟಿಗೂ ಅಧಿಕ ಬೆಲೆಯದ್ದಾಗಿದೆ ಎಂದು ಸುದ್ದಿಗಳು ಹರಿದಾಡಿದ್ದವು. ಇದೀಗ ಈ ಬಗ್ಗೆ ಸ್ವತಃ ಮನು ಅವರೇ ಪ್ರತಿಕ್ರಿಯೆ ನೀಡಿದ್ದು, ಒಲಿಂಪಿಕ್ಸ್ನಲ್ಲಿ ತಾವು ಬಳಸಿದ ಪಿಸ್ತೂಲ್ನ ಬೆಲೆ ಎಷ್ಟು ಎಂದು ತಿಳಿಸಿದ್ದಾರೆ. ಹಾಗಾದರೆ ಬನ್ನಿ ಮನು ಬಳಸಿರುವ ಪಿಸ್ತೂಲ್ನ ಅಸಲಿ ಬೆಲೆ ಎಷ್ಟು ಎಂದು ಈ ಸುದ್ಧಿಯಲ್ಲಿ ತಿಳಿದುಕೊಳ್ಳೋಣ.
ಒಲಿಂಪಿಕ್ಸ್ನಲ್ಲಿ ಮನು ಭಾಕರ್ ಬಳಸಿದ ಪಿಸ್ತೂಲ್ನ ಬೆಲೆ ಎಷ್ಟು ಗೊತ್ತಾ: ಕೇಳಿದ್ರೆ ಶಾಕ್ ಆಗ್ತೀರಿ! - MANU BHAKAR PISTOL PRICE
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆದ್ದಿರುವ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಈ ಟೂರ್ನಿಯಲ್ಲಿ ಬಳಸಿದ ಪಿಸ್ತೂಲ್ನ ಬೆಲೆ ಎಷ್ಟು ಎಂಬುದನ್ನು ತಿಳಿಯಬೇಕಾ ಹಾಗಾದರೆ ಈ ಸುದ್ದಿಯನ್ನು ಓದಿ.
Published : Sep 28, 2024, 3:48 PM IST
ಸ್ಪೋರ್ಟ್ಸ್ ನೆಕ್ಸ್ಟ್ನ ಸಂದರ್ಶನದ ವೇಳೆ ಮನು ಭಾಕರ್ಗೆ ಒಲಿಂಪಿಕ್ಸ್ ಬಳಸಿದ ಪಿಸ್ತೂಲ್ನ ಬೆಲೆ ಎಷ್ಟು ಎಂದು ಪ್ರಶ್ನಿಸಲಾಗಿತ್ತು. ಅದರ ಕುರಿತು ಮಾತನಾಡಿದ ಮನು, ಒಲಿಂಪಿಕ್ಸ್ನಲ್ಲಿ ಬಳಸಿದ ಪಿಸ್ತೂಲ್ನ ಬೆಲೆ 1.5 ಲಕ್ಷದಿಂದ 1.85 ಲಕ್ಷ ರೂ ಆಗಿದೆ ಎಂದು ತಿಳಿಸಿದ್ದಾರೆ. ಯಾವ ಮಾದರಿಯ ಪಿಸ್ತೂಲ್ ಖರೀದಿಸುತ್ತೇವೆ ಅದಕ್ಕನುಗುಣವಾಗಿ ಬೆಲೆ ಇರಲಿದೆ ಎಂದು ತಿಳಿಸಿದ್ದಾರೆ.
ಎರಡು ಪದಕ:ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಕಂಚಿನ ಪದಕವನ್ನು ಗೆದ್ದಿದ್ದರು. ನಂತರ ಸರಬ್ಜೋತ್ ಸಿಂಗ್ ಅವರೊಂದಿಗೆ ಮಿಶ್ರ ತಂಡ ಸ್ಪರ್ಧೆಯಲ್ಲಿ ಎರಡನೇ ಪದಕವನ್ನು ಗೆದ್ದುಕೊಂಡಿದ್ದರು. ಇದರೊಂದಿಗೆ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ.