ಕರ್ನಾಟಕ

karnataka

ETV Bharat / sports

2022ರಲ್ಲಿ Unsold ಆಗಿದ್ದ ಆರ್​ಸಿಬಿ ಮಾಜಿ ಆಟಗಾರ ಅತೀ ಹೆಚ್ಚು ಮೊತ್ತಕ್ಕೆ ರಿಟೇನ್! - HEINRICH KLAASEN

ಆರ್​ಸಿಬಿಯ ಮಾಜಿ ಆಟಗಾರ 2025ರ ಐಪಿಎಲ್​ಗೆ ಅತೀ ಹೆಚ್ಚಿನ ಮೊತ್ತಕ್ಕೆ ರಿಟೇನ್​ ಆಗಿ ಗಮನ ಸೆಳೆದಿದ್ದಾರೆ.

ಹೆನ್ರಿಚ್​ ಕ್ಲಾಸೆನ್
ಹೆನ್ರಿಚ್​ ಕ್ಲಾಸೆನ್​ (IANS)

By ETV Bharat Sports Team

Published : Nov 5, 2024, 8:25 AM IST

IPL Retain: 'ಮಿಲಿಯನ್​ ಡಾಲರ್​ ಟೂರ್ನಿ' ಎಂದೇ ಖ್ಯಾತಿ ಪಡೆದಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ (IPL)ನಲ್ಲಿ ಆಡಬೇಕೆಂಬುದು ಬಹುತೇಕ ಎಲ್ಲಾ ದೇಶಿ, ವಿದೇಶಿ ಕ್ರಿಕೆಟಿಗರ ಬಯಕೆ. ಆದರೆ ಈ ಅವಕಾಶ ಎಲ್ಲರಿಗೂ ಸಿಗಲ್ಲ. ಒಮ್ಮೆ ಚಾನ್ಸ್​ ಸಿಕ್ಕರೆ ಆ ಆಟಗಾರನ ಬದುಕೇ ಬದಲಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ 2022ರಲ್ಲಿ ಅನ್​ಸೋಲ್ಡ್​ ಆಗಿದ್ದ ಆಟಗಾರ ಇದೀಗ 23 ಕೋಟಿ ರೂ.ಗೆ ರಿಟೇನ್​ ಆಗಿರುವುದು.

ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್​ ಮತ್ತು ವಿಕೆಟ್​ ಕೀಪರ್​ ಹೆನ್ರಿಚ್​ ಕ್ಲಾಸೆನ್​ ಅವರನ್ನು​ 2022ರಲ್ಲಿ ನಡೆದ ಐಪಿಎಲ್​ ಹರಾಜಿನಲ್ಲಿ ಯಾವ ತಂಡಗಳೂ ಖರೀದಿಸಿರಲಿಲ್ಲ. ಆದರೆ, 2023ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ₹5.25 ಕೋಟಿ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿತ್ತು. ಹಣಕ್ಕೆ ತಕ್ಕಂತೆ ಕ್ಲಾಸೆನ್​ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇದರಿಂದಾಗಿ 2025ರ ರಿಟೇನ್​ ಆಟಗಾರನಾಗಿ ಸನ್​ರೈಸರ್ಸ್​ ತಂಡ 23 ಕೋಟಿ ರೂ ನೀಡಿ ತಂಡದಲ್ಲೇ ಉಳಿಸಿಕೊಂಡಿದೆ.

ನಾಯಕ ಪ್ಯಾಟ್ ಕಮಿನ್ಸ್ ಹೊರತುಪಡಿಸಿದರೆ ಸನ್‌ರೈಸರ್ಸ್ ಅತೀ ಹೆಚ್ಚು ಮೊತ್ತವನ್ನು ಹೆನ್ರಿಚ್ ಕ್ಲಾಸೆನ್‌ಗೆ ನೀಡುತ್ತಿದೆ. ಇದಕ್ಕೂ ಮೊದಲು ಕೂಡ ಕ್ಲಾಸೆನ್​ 2018ರಲ್ಲಿ ರಾಜಸ್ತಾನ ರಾಯಲ್ಸ್​ ಪರ ಆಡಿದ್ದರು. ಅದಾದ ಬಳಿಕ 2019ರ ಹರಾಜಿನಲ್ಲಿ ಆರ್​ಸಿಬಿ ಖರೀದಿಸಿತ್ತು. ಆರ್​ಸಿಬಿ ಪರ ಕೇವಲ 3 ಪಂದ್ಯಗಳನ್ನು ಆಡಿದ ಕ್ಲಾಸೆನ್​ 4.50ರ ಸರಾಸರಿಯಲ್ಲಿ 9 ರನ್​ ಗಳಿಸಿದ್ದರು.

ಕ್ಲಾಸೆನ್​ ಐಪಿಎಲ್​ ದಾಖಲೆ:ಇದುವರೆಗೆ 35 ಐಪಿಎಲ್ ಪಂದ್ಯಗಳನ್ನಾಡಿರುವ ಕ್ಲಾಸೆನ್ 38.19 ಸರಾಸರಿಯಲ್ಲಿ 993 ರನ್​ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 6 ಅರ್ಧ ಶತಕಗಳು ಸೇರಿವೆ. 104 ಇವರ ಹೈಸ್ಕೋರ್​ ಆಗಿದೆ.

ಸನ್​ರೈಸರ್ಸ್​ ರಿಟೇನ್​ ಆಟಗಾರರ ವಿವರ:ಹೆನ್ರಿಚ್​ ಕ್ಲಾಸೆನ್​ (₹23 ಕೋಟಿ), ಕಳೆದ ಹರಾಜಿನಲ್ಲಿ ಹೆಚ್ಚಿನ ಮೊತ್ತಕ್ಕೆ ಪ್ಯಾಟ್​ ಕಮಿನ್ಸ್​ (₹18 ಕೋಟಿ), ಅಭಿಷೇಕ್​ ಶರ್ಮಾ (₹14 ಕೋಟಿ), ಟ್ರಾವಿಸ್​ ಹೆಡ್​ (₹14 ಕೋಟಿ), ನಿತೇಶ್​ ರೆಡ್ಡಿ (₹6 ಕೋಟಿ)

ಪ್ಯಾಟ್​ ಕಮಿನ್ಸ್​:ಕಳೆದ ಹರಾಜಿನಲ್ಲಿ ಆಸ್ಟ್ರೇಲಿಯದ ಪ್ಯಾಟ್ ಕಮ್ಮಿನ್ಸ್ ಅವರನ್ನು ಹೆಚ್ಚಿನ ಮೊತ್ತಕ್ಕೆ ಖರೀದಿಸಿದ್ದ ತಂಡ ಈ ಬಾರಿ 18 ಕೋಟಿ ರೂ.ಗೆ ಉಳಿಸಿಕೊಂಡಿದೆ.

ಅಭಿಷೇಕ್​ ಶರ್ಮಾ: ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಕೂಡ 14 ಕೋಟಿ ರೂ.ಗೆ ಉಳಿಸಿಕೊಂಡಿದ್ದಾರೆ.

ನಿತೀಶ್​ ರೆಡ್ಡಿ: ಐಪಿಎಲ್​ 2024ರ ಋತುವಿನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ನಿತೀಶ್ ರೆಡ್ಡಿ ಅವರನ್ನು ಸನ್‌ರೈಸರ್ಸ್ 6 ಕೋಟಿ ರೂ.ಗೆ ಉಳಿಸಿಕೊಂಡಿದೆ.

ಇದನ್ನೂ ಓದಿ:IPL​ಗೂ​ ಮುನ್ನವೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ವಿಕೆಟ್ ಕೀಪರ್

ABOUT THE AUTHOR

...view details