ಕರ್ನಾಟಕ

karnataka

ETV Bharat / sports

ಟೇಬಲ್​ ಟೆನ್ನಿಸ್​ ಪ್ರೀ-ಕ್ವಾರ್ಟರ್​ನಲ್ಲಿ ಶ್ರೀಜಾ ಅಕುಲಾ, ಮನಿಕಾ ಬಾತ್ರಾಗೆ ಸೋಲು; ಒಲಿಂಪಿಕ್​​ನಿಂದ ಔಟ್​ - Paris olympics 2024 - PARIS OLYMPICS 2024

ಭಾರತದ ಸ್ಟಾರ್ ಪ್ಯಾಡ್ಲರ್ ಶ್ರೀಜಾ ಅಕುಲಾ ಅವರ ಪ್ಯಾರಿಸ್ ಒಲಿಂಪಿಕ್​ ಅಭಿಯಾನ ಕೊನೆಗೊಂಡಿದೆ. ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶ್ರೀಜಾ ಅವರು ವಿಶ್ವದ ನಂಬರ್-1 ಚೀನಾ ಆಟಗಾರ್ತಿ ವಿರುದ್ಧ ಸೋಲನುಭವಿಸಿದ್ದಾರೆ.

ಶ್ರೀಜಾ ಅಕುಲಾ
ಶ್ರೀಜಾ ಅಕುಲಾ (AP)

By ETV Bharat Sports Team

Published : Aug 1, 2024, 1:16 PM IST

ಪ್ಯಾರಿಸ್​ (ಫ್ರಾನ್ಸ್​):ಪ್ಯಾರಿಸ್​ ಒಲಿಂಪಿಕ್​​ನ ಟೇಬಲ್​ ಟೆನ್ನಿಸ್​ ಪ್ರೀ-ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭಾರತದ ಅಗ್ರ ಪ್ಯಾಡ್ಲರ್‌ಗಳಾದ ಮನಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಸೋಲನುಭವಿಸಿದ್ದಾರೆ.

ಬುಧವಾರ ನಡೆದ ಮಹಿಳೆಯ ಟೇಬಲ್​ ಟೆನ್ನಿಸ್​ ಸಿಂಗಲ್ಸ್ ಈವೆಂಟ್‌ನ ಪ್ರೀ-ಕ್ವಾರ್ಟರ್​ ಪಂದ್ಯದಲ್ಲಿ ಶ್ರೀಜಾ ಅಕುಲಾ ಅವರು ವಿಶ್ವ ನಂಬರ್​ 1 ಪ್ಯಾಡ್ಲರ್​ ಚೀನಾದ ಸನ್ ಯಿಂಗ್ಶಾ ವಿರುದ್ಧ 4-0 ಅಂತರದಿಂದ ಸೋಲನ್ನು ಕಂಡರು. ಈ ಪಂದ್ಯದಲ್ಲಿ ಸನ್ ಯಿಂಗ್ಶಾ 12-10, 12-10, 11-8, 11-3 ಅಂತರದಿಂದ ಗೆಲುವು ಸಾಧಿಸಿದರು. ಚೀನಾದ ಆಟಗಾರ್ತಿ ವಿರುದ್ಧ ಶ್ರೀಜಾ ಕಠಿಣ ಪೈಪೋಟಿ ನೀಡಿ ಅಂತಿಮವಾಗಿ ಸೋಲನುಭವಿಸಿದರು. ಇದರೊಂದಿಗೆ ಅವರ ಒಲಿಂಪಿಕ್​​ ಪದಕ ಅಭಿಯಾನವು ಕೊನೆಗೊಂಡಿದೆ.

16ನೇ ಶ್ರೇಯಾಂಕದ ಅಕುಲಾ ಚೀನಾದ ಪ್ಯಾಡ್ಲರ್‌ಗೆ ಕಠಿಣ ಸವಾಲೊಡ್ಡಿದರು ಎರಡನೇ ಸುತ್ತಿನಲ್ಲಿ ಶ್ರೀಜಾ 5 ಪಾಯಿಂಟ್‌ಗಳ ಮುನ್ನಡೆ ಸಾಧಿಸಿ ಕಠಿಣ ಪೈಪೋಟಿ ನೀಡಿದರು. ಆದರೆ ಸ್ವಲ್ಪ ಸಮಯದ ಬಳಿಕ ಸನ್ ಯಿಂಗ್ಶಾ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡು ಗೆದ್ದರು. ಈ ಪಂದ್ಯ ಗೆಲ್ಲಲು ಸನ್​ ಯಿಂಗ್ಶಾ 38 ನಿಮಿಷಗಳನ್ನು ತೆಗೆದುಕೊಂಡರು.

ಇದಕ್ಕೂ ಮುನ್ನ 26ರ ಹರೆಯದ ಅಕುಲಾ ಸಿಂಗಾಪುರದ ಝೆಂಗ್ ಜಿಯಾನ್ ಅವರನ್ನು 32ನೇ ಸುತ್ತಿನಲ್ಲಿ 4-2 ಅಂತರದಿಂದ ಸೋಲಿಸಿದ್ದರು. ಈ ಗೆಲುವಿನೊಂದಿಗೆ, ಮಣಿಕಾ ಬಾತ್ರಾ ನಂತರ ಒಲಿಂಪಿಕ್​ನಲ್ಲಿ ಪ್ರೀ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಎರಡನೇ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎನಿಸಿಕೊಂಡಿದ್ದರು.

ಮಣಿಕಾ ಬಾತ್ರಾಗೂ ನಿರಾಸೆ:ಇದಕ್ಕೂ ಮುನ್ನ ವಿಶ್ವದ 28ನೇ ಶ್ರೇಯಾಂಕಿತ ಭಾರತ ಪ್ಯಾಡ್ಲರ್​ ಮಣಿಕಾ ಬಾತ್ರಾ ಜಪಾನ್ ಆಟಗಾರ್ತಿ ವಿರುದ್ಧ 1-4 (6-11 9-11 14-12 8-11 6-11) ಅಂತರದಲ್ಲಿ ಸೋಲನುಭವಿಸಿದರು. ಸೋಲಿನ ನಡುವೆಯೂ ಮಣಿಕಾ ಅತ್ಯುತ್ತಮ ಆಟ ಪ್ರದರ್ಶಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಟೇಬಲ್​ ಟೆನ್ನಿಸ್​ ಸಿಂಗಲ್ಸ್ ಅರ್ಹತಾ ಸ್ಪರ್ಧೆಯಲ್ಲಿ ಫ್ರಾನ್ಸ್​ನ ಆಟಗಾರ್ತಿ ಪ್ರೀತಿಕಾ ಪಾವೇಡೆ ವಿರುದ್ಧ 4-0 ಅಂತರದಿಂದ ಗೆದ್ದು ಪ್ರೀ-ಕ್ವಾರ್ಟರ್‌ ಫೈನಲ್​ ಪ್ರವೇಶಿಸಿದ್ದರು.

ಇದೀಗ ಭಾರತೀಯ ಪ್ಯಾಡ್ಲರ್​ಗಳು ಒಲಿಂಪಿಕ್ ಕ್ರೀಡಾಕೂಟದಲ್ಲಿ ತಂಡದ ಈವೆಂಟ್‌ಗಳಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಆಗಸ್ಟ್ 5 ರಿಂದ ಮಿಶ್ರ ಸ್ಪರ್ಧೆಗಳು ಪ್ರಾರಂಭವಾಗಲಿವೆ.

ಇದನ್ನೂ ಓದಿ:ಪ್ಯಾರಿಸ್ ಒಲಿಂಪಿಕ್ಸ್: ಕಮಾಲ್​ ಮಾಡದ ನಡಾಲ್ - ಅಲ್ಕರಾಜ್ ಜೋಡಿ, ಚಿನ್ನದ ಭರವಸೆ ಹುಸಿ - Paris Olympics

ABOUT THE AUTHOR

...view details