ಸೇಂಟ್ ಲೂಸಿಯಾ:ಕ್ವಿಂಟನ್ ಡಿ ಕಾಕ್ ಅರ್ಧಶತಕ (65) ಹಾಗೂ ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್ ಅಂತರದ ಗೆಲುವಿನ ನಗೆ ಬೀರಿತು. ಇಲ್ಲಿನ ಡರೆನ್ ಸಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಆಂಗ್ಲರು ಗೆಲುವಿನ ಸಮೀಪ ಬಂದು ಎಡವಿದರು.
ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಹರಿಣಗಳನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಕ್ರೀಸ್ಗಿಳಿದ ದಕ್ಷಿಣ ಆಫ್ರಿಕಾ ತಂಡವು ಅದ್ಭುತ ಆರಂಭ ಪಡೆಯಿತು. ಕ್ವಿಂಟನ್ ಡಿ ಕಾಕ್ ಹಾಗೂ ರೀಝಾ ಹೆನ್ರಿಕ್ಸ್ ಮೊದಲ ವಿಕೆಟ್ಗೆ 9.5 ಓವರ್ಗಳಲ್ಲಿ 86 ರನ್ ಬಾರಿಸಿದರು. 19 ರನ್ ಗಳಿಸಿದ್ದ ಹೆನ್ರಿಕ್ಸ್ ಮೊದಲಿಗರಾಗಿ ಔಟಾದರು. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ದಿಢೀರ್ ಕುಸಿತದ ಹಾದಿ ಹಿಡಿಯಿತು. 113 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು, ರನ್ಗತಿ ಇಳಿಮುಖವಾಯಿತು.
ಕ್ವಿಂಟನ್ ಡಿ ಕಾಕ್ 65, ಹೆನ್ರಿಚ್ ಕ್ಲಾಸೆನ್ 8, ನಾಯಕ ಐಡೆನ್ ಮಾರ್ಕ್ರಮ್ 1 ರನ್ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಆಕ್ರಮಣಕಾರಿ ಆಟವಾಡಿದ ಡೇವಿಡ್ ಮಿಲ್ಲರ್ ಅಮೂಲ್ಯ 43 ರನ್ ಕಾಣಿಕೆ ನೀಡಿದರು. ಟ್ರಿಸ್ಟನ್ ಸ್ಟಬ್ಸ್ 12* ಹಾಗೂ ಕೇಶವ್ ಮಹಾರಾಜ್ 5 ರನ್ ಗಳಿಸುವುದರೊಂದಿಗೆ, ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 6 ವಿಕೆಟ್ಗೆ 163 ರನ್ ಪೇರಿಸಿತು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 40 ರನ್ಗೆ 3 ವಿಕೆಟ್ ಪಡೆದರು.
ಇಂಗ್ಲೆಂಡ್ ಚೇಸಿಂಗ್:164 ರನ್ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಿಂದಲೂ ನಿಧಾನಗತಿಯ ಬ್ಯಾಟಿಂಗ್ ನಡೆಸಿತು. ಫಿಲಿಪ್ ಸಾಲ್ಟ್ 11 ರನ್ಗೆ ಔಟಾಗುವ ಮೂಲಕ 15 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್ ಪತನಗೊಂಡಿತು. ಬಳಿಕ ನಾಯಕ ಬಟ್ಲರ್ (17) ಹಾಗೂ ಜಾನಿ ಬೈರ್ಸ್ಟೋ (16) 28 ರನ್ ಜೊತೆಯಾಟವಾಡಿದರೂ ಕೂಡ ವೇಗವಾಗಿ ಆಡುವಲ್ಲಿ ವಿಫಲರಾದರು. ಬಳಿಕ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದರು. ಈ ನಡುವೆ 9 ರನ್ ಗಳಿಸಿದ್ದ ಮೋಯಿನ್ ಅಲಿ ಬಾರ್ಟ್ಮನ್ ಬೌಲಿಂಗ್ನಲ್ಲಿ ಔಟಾದರು. ಹೀಗಾಗಿ, 64 ರನ್ಗೆ 4 ವಿಕೆಟ್ ಕಳೆದುಕೊಂಡ ಆಂಗ್ಲರು ಸಂಕಷ್ಟಕ್ಕೆ ಸಿಲುಕಿದ್ದರು.