RCB Trolls CSK Skipper: ಕಳೆದ ತಿಂಗಳು ಸಾರ್ವಜನಿಕವಾಗಿಯೇ ರಾಯಲ್ RCBಗರ ವಿರುದ್ಧ ಟ್ರೋಲ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಋತುರಾಜ್ ಗಾಯಕ್ವಾಡ್ಗೆ ಆರ್ಸಿಬಿ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದೆ.
ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮವೊಂದಕ್ಕೆ ಋತುರಾಜ್ ಗಾಯಕ್ವಾಡ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವೇದಿಕೆಗೆ ತೆರಳಿದ್ದ ಗಾಯಕ್ವಾಡ್ ಮಾತನಾಡಲು ಮುಂದಾಗಿದ್ದಾರೆ. ಆದರೇ ಅವರ ಕೈಯಲ್ಲಿದ್ದ ಮೈಕ್ ಆಫ್ ಆಗಿತ್ತು. ಇದರಿಂದ ಋತುರಾಜ್ ಮುಜುಗರಕ್ಕೊಳಗಾಗಿದ್ದರು. ಬಳಿಕ ಅಲ್ಲಿದ್ದ ನಿರೂಪಕ, ಸಿಎಸ್ಕೆ ಕ್ಯಾಪ್ಟನ್ ಅವರ ಮೈಕ್ ಅನ್ನು ನೀವು ಹೇಗೆ ಆಫ್ಮಾಡಬಹುದು ಎಂದು ತಮಾಷೆಯಾಗಿ ಮೈಕ್ ಆಪ್ರೇಟರ್ಗಳಿಗೆ ಪ್ರಶ್ನಿಸಿದ್ದರು. ಇದಕ್ಕೆ ಕೂಡಲೇ ಉತ್ತರಿಸಿದ್ದ ಋತುರಾಜ್ ಬಹುಶಃ ಯಾರೋ RCBಗರೇ ಮೈಕ್ ಆಫ್ ಮಾಡಿರಬಹುದು ಎಂದು ಟ್ರೋಲ್ ಮಾಡಿದ್ದರು.
ಇದಕ್ಕೆ RCB ಕೂಡ ಸರಿಯಾಗಿ ತಿರುಗೇಟು ನೀಡಿದೆ. ನಿನ್ನೆ ವಿಜಯ್ ಹಜಾರೆ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯ ನಡೆದಿತ್ತು. ಇದರಲ್ಲಿ ವಿದರ್ಭ ಮತ್ತು ಮಹಾರಾಷ್ಟ್ರ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ವಿದರ್ಭ ನೀಡಿದ್ದ 380 ರನ್ಗಳ ಗುರಿಯನ್ನು ಬೆನ್ನತ್ತಿದ ಮಹಾರಾಷ್ಟ್ರ 311 ರನ್ಗಳಿಸಲಷ್ಟೇ ಶಕ್ತವಾಗಿ 69 ರನ್ಗಳಿಂದ ಸೋಲನುಭವಿಸಿತು. ಆದ್ರೆ ಈ ಪಂದ್ಯದಲ್ಲಿ RCB ಆಟಗಾರ ಡೈವ್ ಕ್ಯಾಚ್ ಹಿಡಿಯುವ ಮೂಲಕ ಮಹಾರಾಷ್ಟ್ರ ತಂಡದ ನಾಯಕ ಋತುರಾಜ್ ಗಾಯಕ್ವಾಡ್ಗೆ ಪೆವಿಲಿಯನ್ ದಾರಿ ತೋರಿಸಿದರು.