ಹೈದರಾಬಾದ್: ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದೆ. ಈ ಸರಣಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಂದು ಚೆನ್ನೈ ಮೈದಾನದಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಚೆನ್ನೈ ತಲುಪಿ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಜತೆಗೆ ಈ ಸರಣಿ ನಾಯಕ ರೋಹಿತ್ ಶರ್ಮಾ ಅವರ ಪಾಲಿಗೆ ಮಹತ್ವದಾಗಿದೆ. ಏಕೆಂದರೆ ಅಪರೂಪದ ದಾಖಲೆಯೊಂದು ಬರೆಯಲಿದ್ದಾರೆ.
ಸೇಹ್ವಾಗ್ ರೆಕಾರ್ಡ್ ಮೇಲೆ ಹಿಟ್‌ಮ್ಯಾನ್ ಕಣ್ಣು: ಸಾರ್ವಕಾಲಿಕ ದಾಖಲೆ ಬರೆಯಲು ರೋಹಿತ್ ಸಜ್ಜು! - Rohit Sharma - ROHIT SHARMA
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೇಹ್ವಾಗ್ ಅವರ ದಾಖಲೆ ಮುರಿಯಲು ರೋಹಿತ್ ಶರ್ಮಾ ಸಜ್ಜಾಗಿದ್ದಾರೆ. ಆ ದಾಖಲೆ ಯಾವುದು ಎಂಬುದರ ಬಗ್ಗೆ ಈ ಸುದ್ದಿಯಲ್ಲಿ ತಿಳಿಯಿರಿ.
Published : Sep 15, 2024, 11:04 PM IST
ಹೌದು, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಖಲೆ ಮೇಲೆ ಹಿಟ್‌ಮ್ಯಾನ್ ಕಣ್ಣಿಟ್ಟಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ ಟೆಸ್ಟ್‌ನಲ್ಲಿ 84 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಅನುಕ್ರಮದಲ್ಲಿ, ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಟೀಂ ಇಂಡಿಯಾ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಈ ಪಟ್ಟಿಯಲ್ಲಿ ಸೆಹ್ವಾಗ್ (90 ಸಿಕ್ಸರ್) ಅಗ್ರಸ್ಥಾನದಲ್ಲಿದ್ದಾರೆ. ಆದರೆ ರೋಹಿತ್ ಇನ್ನೂ 7 ಸಿಕ್ಸರ್ ಬಾರಿಸಿದರೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆಯಲಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಈ ಸರಣಿಯಲ್ಲಿ ರೋಹಿತ್‌ಗೆ ಸೆಹ್ವಾಗ್ ದಾಖಲೆ ಮುರಿಯುವ ಅವಕಾಶವಿದೆ
ರೋಹಿತ್ ಟೆಸ್ಟ್ ವೃತ್ತಿಜೀವನ: 2013ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಹಿಟ್‌ಮ್ಯಾನ್ ಇದುವರೆಗೆ 59 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ಆಡಿರುವ 101 ಇನ್ನಿಂಗ್ಸ್‌ಗಳಲ್ಲಿ 45.46 ಸರಾಸರಿಯಲ್ಲಿ 4137 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕ ಮತ್ತು 17 ಅರ್ಧ ಶತಕಗಳು ಸೇರಿವೆ. ಟೆಸ್ಟ್ನ ಗರಿಷ್ಠ ಸ್ಕೋರ್ 212 ಆಗಿದೆ.