ನವದೆಹಲಿ:ಪುರುಷರ ಡಬಲ್ಸ್ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ಸಹ ಆಟಗಾರ್ತಿಯನ್ನು ಹೊಂದಿಲ್ಲ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಈಗಾಗಲೇ ಹೇಳಿದ್ದಾರೆ. ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ಭಾಗವಹಿಸದಿರಲು ಕಾರಣ ಎಂದರೆ ಪ್ರಸ್ತುತ ಯಾವುದೇ ಭಾರತೀಯ ಮಹಿಳಾ ಟೆನಿಸ್ ಆಟಗಾರ್ತಿ ಅವರ ಪಾಲುದಾರರಾಗಲು ಉನ್ನತ ಶ್ರೇಣಿಯಲ್ಲಿಲ್ಲ.
ಸಾನಿಯಾ ಮಿರ್ಜಾ ನಂತರ ಗ್ರಾಂಡ್ಸ್ಲಾಂಗಳಲ್ಲಿ ಆಡುವ ಆಟಗಾರ್ತಿಯರ ಕೊರತೆ ಎದುರಿಸುತ್ತಿದೆ. ಸಾನಿಯಾ ಜನವರಿ 2023ರಲ್ಲಿ ಕ್ರೀಡೆಯಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಹೈದರಾಬಾದ್‌ನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ರೋಹನ್ ಬೋಪಣ್ಣ ಅವರೊಂದಿಗೆ ಕೊನೆಯ ಪಂದ್ಯವನ್ನು ಆಡುವ ಮೂಲಕ ಅವರು ಟೆನಿಸ್‌ಗೆ ವಿದಾಯ ಹೇಳಿದ್ದಾರೆ.
ಸಾನಿಯಾ ಮಿರ್ಜಾ ತಮ್ಮ ಟೆನಿಸ್ ವೃತ್ತಿಜೀವನದಲ್ಲಿ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ. ಅವರು 6 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಹಂತವನ್ನೂ ತಲುಪಿದ್ದರು. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಅತ್ಯಂತ ಅದ್ಭುತವಾಗಿ ನಡೆಯಲಿದೆ ಎಂದು ಬೋಪಣ್ಣ ಹೇಳಿದರು. ಅದಕ್ಕಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ. ಪುರುಷರ ಡಬಲ್ಸ್‌ನಲ್ಲಿ ನನ್ನ ಜೊತೆಗಾರ ಯಾರು ಎಂಬುದನ್ನು ಕಾದು ನೋಡಬೇಕಿದೆ. ನಾನು ಯಾರೊಂದಿಗೆ ಆಡುತ್ತೇನೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಜೂನ್ ಅಂತ್ಯದೊಳಗೆ ಈ ತೀರ್ಮಾನ ಮಾಡಬೇಕು. ಅಷ್ಟರೊಳಗೆ ಘೋಷಣೆ ಮಾಡಲಾಗುವುದು ಎಂದು ಹೇಳಿದರು.