ಪ್ಯಾರಿಸ್ (ಫ್ರಾನ್ಸ್): ಭಾರತದ ಯುವ ಕುಸ್ತಿಪಟು ರಿತಿಕಾ ಹೂಡಾ ಮಹಿಳೆಯರ ಫ್ರೀಸ್ಟೈಲ್ 76 ಕೆಜಿ ಕುಸ್ತಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ.
ಈ ಪಂದ್ಯದಲ್ಲಿ ಭಾರತದ ಯುವ ಕುಸ್ತಿಪಟು 21 ವರ್ಷದ ರಿತಿಕಾ ಹೂಡಾ ಅವರು ಅಗ್ರ ಶ್ರೇಯಾಂಕದ ಕಿರ್ಗಿಸ್ತಾನ್‌ದ ಅಪೆರ್ ಮೆಡೆಟ್ ಕೈಜಿ ವಿರುದ್ಧ ಪರಾಭವಗೊಂಡರು. ಇದಕ್ಕೂ ಮುನ್ನ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ 2024ರ ಯುರೋಪಿಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಹಂಗೇರಿಯಾದ ಬೆರ್ನಾಡೆಟ್ ನಾಗಿ ಅವರನ್ನು ಎದುರಿಸಿದ್ದರು. ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ರಿತಿಕಾ 8ನೇ ಶ್ರೇಯಾಂಕದ ಹಂಗೇರಿಯ ಬರ್ನಾಡೆಟ್ ನಾಗಿ ಅವರನ್ನು 12-2 ಅಂಕಗಳೊಂದಿಗೆ ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದರು.
ಕಳೆದ ವರ್ಷ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಯುವ ಆಟಗಾರ್ತಿ ರಿತಿಕಾ ಚಿನ್ನದ ಪದಕ ಗೆದ್ದಿದ್ದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೇ ಅದು ಸಾಧ್ಯವಾಗಲಿಲ್ಲ.