IPL First Wicket: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2008ರಲ್ಲಿ ಪ್ರಾರಂಭವಾಗಿದ್ದು ಇಲ್ಲಿಗೆ 17 ಋತುಗಳನ್ನು ಪೂರ್ಣಗೊಳಿಸಿದೆ. ಆರಂಭದಲ್ಲಿದ್ದ ಈ ಟೂರ್ನಿಯ ಕ್ರೇಜ್ ಇಂದಿಗೂ ಕಿಂಚಿತ್ತೂ ಕಡಿಮೆಯಾಗಿಲ್ಲ. ಹಾಗಾಗಿ ಮಿಲಿಯನ್ ಡಾಲರ್ ಕ್ರಿಕೆಟ್ ಲೀಗ್ ಎಂದೇ ಪ್ರಖ್ಯಾತವಾಗಿದೆ. ಆದರೆ ಐಪಿಎಲ್ ಮೊದಲ ಋತುವಿನ ಮೊದಲ ಪಂದ್ಯದಲ್ಲಿ ಮೊದಲು ಬೌಲ್ ಹಾಕಿದ್ದು ಮತ್ತು ಬ್ಯಾಟಿಂಗ್ ಮಾಡಿದ್ದು ಯಾರು ಎಂದು ನಿಮಗೆ ಗೊತ್ತಾ?.
ಮೊದಲ ಋತು:ಐಪಿಎಲ್ನ ಮೊದಲ ಋತು 18 ಏಪ್ರಿಲ್ 2008ರಂದು ಪ್ರಾರಂಭವಾಯಿತು. ಈ ಋತುವಿನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಪಂದ್ಯಕ್ಕೆ ಆತಿಥ್ಯವಹಿಸಿತ್ತು. ಟಾಸ್ ಗೆದ್ದ ಕೆಕೆಆರ್ ಮೊದಲು ಬ್ಯಾಟಿಂಗ್ ಮಾಡಿತು. ಆರ್‌ಸಿಬಿ ಪರ ಪ್ರವೀಣ್ ಕುಮಾರ್ ಮೊದಲ ಎಸೆತ ಹಾಕಿದ್ದರು. ಕೆಕೆಆರ್ ಪರ ಸೌರವ್ ಗಂಗೂಲಿ ಮೊದಲು ಬ್ಯಾಟ್ ಮಾಡಿದ್ದರು.
ಪ್ರವೀಣ್ ಕುಮಾರ್ ಅವರ ಲೆಂಗ್ತ್ ಬೌಲ್ ಅನ್ನು ಗಂಗೂಲಿ ಡಾಟ್ ಮಾಡಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ಪ್ರವೀಣ್ ಕುಮಾರ್ ಮೊದಲ ಬೌಲ್ ಮಾಡಿದ ಬೌಲರ್ ಮತ್ತು ಗಂಗೂಲಿ ಬ್ಯಾಟಿಂಗ್ ಮಾಡಿದ ಆಟಗಾರ ಎನಿಸಿಕೊಂಡರು.