Indian Flag Controversy In Pakistan: ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯುತ್ತಿರುವ ಈ ಟೂರ್ನಿಗಾಗಿ ಮೈದಾನಗಳು ಸಜ್ಜುಗೊಂಡಿವೆ. ಭಾರತ ಹೊರತುಪಡಿಸಿ ಏಳು ತಂಡಗಳ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿವೆ. ಭಾರತದ ಪಂದ್ಯಗಳನ್ನು ಮಾತ್ರ ದುಬೈನಲ್ಲಿ ಆಯೋಜಿಸಲಾಗುತ್ತಿದೆ.
ಈಗಾಗಲೆ ಏಳು ತಂಡಗಳು ಪಾಕಿಸ್ತಾನಕ್ಕೆ ತೆರಳಿದ್ದು, ಭಾರತದ ಆಟಗಾರರು ಕೂಡ ದುಬೈಗೆ ತೆರಳಿ ಅಭ್ಯಾಸ ಪ್ರಾರಂಭಿಸಿದ್ದಾರೆ. ಫೆ.19ಕ್ಕೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಮೂಲಕ ಮಹಾ ಟೂರ್ನಿ ಪ್ರಾರಂಭಗೊಳ್ಳಲಿದೆ. ಏತನ್ಮಧ್ಯೆ, ಪಂದ್ಯಾವಳಿ ಪ್ರಾರಂಭಕ್ಕೂ ಮೊದಲೇ ಪಾಕಿಸ್ತಾನ ನರಿಬುದ್ಧಿ ತೋರಿಸಿರುವ ಘಟನೆ ನಡೆದಿದ್ದು ಭಾರತೀಯ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವುದು ಗೊತ್ತೇ ಇದೆ. ಅದರಂತೆ ಕರಾಚಿ, ಲಾಹೋರ್, ರಾವಲ್ಪಿಂಡಿ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ನಿಯಮದಂತೆ ಯಾವುದೇ ರಾಷ್ಟ್ರ ಐಸಿಸಿ ಟೂರ್ನಿಗಳನ್ನು ಆಯೋಜಿಸಿದರೆ ಅದರಲ್ಲಿ ಭಾಗಿಯಾಗಲಿರುವ ತಂಡಗಳ ರಾಷ್ಟ್ರೀಯ ಧ್ವಜಗಳನ್ನು ಪಂದ್ಯಗಳು ನಡೆಯುವ ಮೈದಾನಗಳಲ್ಲಿ ಪ್ರದರ್ಶಿಸಲಾಗುತ್ತದೆ. ಆದರೆ ಪಾಕಿಸ್ತಾನ ಏಳು ದೇಶಗಳ ಧ್ವಜವನ್ನು ಮಾತ್ರ ಮೈದಾನಗಳಲ್ಲಿ ಪ್ರದರ್ಶಿಸುತ್ತಿದ್ದು ಭಾರತದ ಧ್ವಜವನ್ನು ತೆಗೆದು ಹಾಕಿದೆ.
No Indian flag in Karachi: As only the Indian team faced security issues in Pakistan and refused to play Champions Trophy matches in Pakistan, the PCB removed the Indian flag from the Karachi stadium while keeping the flags of the other guest playing nations. pic.twitter.com/rjM9LcWQXs
— Arsalan (@Arslan1245) February 16, 2025
ಫ್ಯಾನ್ಸ್ ಗರಂ: ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಷಯವಾಗಿ ಹಲವಾರು ಕ್ರಿಕೆಟ್‌ಪ್ರಿಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮೊದಲೇ ಭಾರತ ತಂಡಕ್ಕೆ ಮಾತ್ರವಲ್ಲ ಧ್ವಜಕ್ಕೂ ಹೆದರಿದ ಪಾಕಿಸ್ತಾನ ಎಂದು ಕೆಲವರು ಟೀಕಿಸಿದ್ದಾರೆ. ಮತ್ತೆ ಕೆಲವರು ಭಾರತ ಧ್ವಜವನ್ನು ಖರೀದಿಸುವಷ್ಟು ದುಡ್ಡು ಪಾಕಿಸ್ತಾನದ ಬಳಿ ಇಲ್ಲ ಎಂದು ಚಾಟಿ ಬೀಸಿದ್ದಾರೆ.
ಪಾಕಿಸ್ತಾನದ ಕ್ರೀಡಾಂಗಣದಲ್ಲಿ ಭಾರತವನ್ನು ಹೊರತುಪಡಿಸಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ದೇಶಗಳ ಧ್ವಜಗಳನ್ನು ಹಾರಿಸಲಾಗಿದೆ. ಇದು ಭಾರತಕ್ಕೆ ಮಾಡಿದ ಅವಮಾನ. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉತ್ತರಿಸಬೇಕು. ಬಿಸಿಸಿಐ ಕೂಡ ಭಾರತದ ಜೆರ್ಸಿಯಲ್ಲಿ ಪಾಕಿಸ್ತಾನದ ಲೋಗೋವನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.
ಭಾರತದ ಪಂದ್ಯಗಳು: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನ ಅಭಿಯಾನವನ್ನು ಫೆ.20ಕ್ಕೆ ಪ್ರಾರಂಭಿಸಲಿದೆ. ತನ್ನ ಮೊದಲ ಪಂದ್ಯ ಬಾಂಗ್ಲಾದೇಶದ ಜೊತೆ ಆಡಲಿದೆ. ಫೆ.23ಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಈ ಸರಣಿಯಲ್ಲಿ ಎಲ್ಲಾ ತಂಡಗಳು ಗುಂಪು ಹಂತದ ಪಂದ್ಯದಲ್ಲಿ ತಲಾ ಮೂರು ಪಂದ್ಯಗಳನ್ನು ಆಡಲಿವೆ. ಎ ಮತ್ತು ಬಿ ಗುಂಪುಗಳಲ್ಲಿ ತಲಾ ನಾಲ್ಕು ತಂಡಗಳು ಇರಲಿವೆ.
ಇದನ್ನೂ ಓದಿ: 2017ರ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು 8 ವರ್ಷ ಏಕೆ ನಿಲ್ಲಿಸಲಾಗಿತ್ತು?
ಇದನ್ನೂ ಓದಿ: Video: ಅಭ್ಯಾಸ ವೇಳೆ ಚೆಂಡು ತಗುಲಿ ಕುಸಿದು ಬಿದ್ದ ಸ್ಟಾರ್ ಪ್ಲೇಯರ್