ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL)ನ ಮೂರನೇ ಆವೃತ್ತಿ ಆರಂಭವಾಗುತ್ತಿದ್ದಂತೆ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತನ್ನ ಯಶಸ್ಸಿನ ಭಾಗವೆನಿಸಿರುವ ಅಭಿಮಾನಿಗಳಿಗೆ ವಿಶೇಷ ಟ್ರಿಬ್ಯೂಟ್ ಸಲ್ಲಿಸಿದೆ.
ಫ್ರಾಂಚೈಸಿಯ ಹೃದಯ ಮತ್ತು ಆತ್ಮವೆಂದು ಗುರುತಿಸಿಕೊಂಡಿರುವ ಅಭಿಮಾನಿಗಳ '12th ಮ್ಯಾನ್ ಆರ್ಮಿ'ಗೆ ಗೌರವ ಸೂಚಕವಾಗಿ ಕೆಲ ಆಯ್ದ ಕ್ಷಣಗಳನ್ನ ಫ್ರಾಂಚೈಸಿಯು ಹಂಚಿಕೊಂಡಿದೆ. ಆ ಪ್ರಮುಖ ಕ್ಷಣಗಳು ಈ ಬಾರಿ ತಂಡದ ಆಟಗಾರರು ಸಂಚರಿಸಲಿರುವ ಬಸ್‌ನ ಮೇಲೆ ಕಾಣಿಸಿಕೊಳ್ಳಲಿವೆ.
ಪ್ಲೇ ಬೋಲ್ಡ್ ಬ್ಯಾನರ್: ಮದುವೆಯಲ್ಲಿ "ಪ್ಲೇ ಬೋಲ್ಡ್" ಬ್ಯಾನರ್ ಅನ್ನು ಪ್ರದರ್ಶಿಸಿದ ದಂಪತಿಗಳು, ತಮ್ಮ ಬೈಕ್ ಅನ್ನು ಆರ್‌ಸಿಬಿಗೆ ಹೃದಯಸ್ಪರ್ಶಿ ಗೌರವವಾಗಿ ಪರಿವರ್ತಿಸಿದ ಡೆಲಿವರಿ ಎಕ್ಸಿಕ್ಯೂಟಿವ್, ಆರ್‌ಸಿಬಿ ಜೆರ್ಸಿಯನ್ನು ಎತ್ತಿ ಹಿಡಿಯುವ ಮೂಲಕ ತನ್ನ ಘಟಿಕೋತ್ಸವವನ್ನು ಗುರುತಿಸಿದ ಹೆಮ್ಮೆಯ ಪದವೀಧರೆ, ಆರ್‌ಸಿಬಿ ಪಂದ್ಯದ ಸಮಯದಲ್ಲಿ ತನ್ನ ಗೆಳತಿಯ ಮುಂದೆ ಪ್ರೇಮ ನಿವೇದನೆ ಮಾಡಿದ ಅಭಿಮಾನಿ, ನೀರಿನೊಳಗೆ ಆರ್‌ಸಿಬಿ ಜರ್ಸಿ ಪ್ರದರ್ಶಿಸಿದ ಸ್ಕೂಬಾ ಡೈವರ್, ಯಾತ್ರಿಕನೊಬ್ಬ ಮಹಾಕುಂಭದಲ್ಲಿ ಪವಿತ್ರ ಸ್ನಾನದ ವೇಳೆ ಆರ್‌ಸಿಬಿ ಜೆರ್ಸಿಯನ್ನ ಪ್ರದರ್ಶಿಸಿರುವ ಕ್ಷಣಗಳು ಈ ಟ್ರಿಬ್ಯೂಟ್‌ನಲ್ಲಿವೆ.
RCB ಜೆರ್ಸಿಗೆ ಪವಿತ್ರ ಸ್ನಾನ: ಮಹಾಕುಂಭದ ಜೆರ್ಸಿಗೆ ಪವಿತ್ರ ಸ್ನಾನ ಮಾಡಿಡಿದ್ದ ಹರೀಶ್ ಮಾತನಾಡಿ "ಆರ್‌ಸಿಬಿ ಕೇವಲ ಒಂದು ತಂಡವಲ್ಲ, ಭಾವನೆ. ನನ್ನ ಚಿತ್ರ ಆರ್‌ಸಿಬಿ ಬಸ್‌ನಲ್ಲಿರಲಿದೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ತಂಡದ ಮೇಲಿನ ನನ್ನ ಬೆಂಬಲವು ಈ ರೀತಿಯಲ್ಲಿ ಜೀವಂತವಾಗುವುದನ್ನು ನೋಡುವುದೇ ಒಂದು ಅದ್ಭುತ ಭಾವನೆ ಎಂದು ತಿಳಿಸಿದು.
ಪ್ರೇಮ ನಿವೇದನೆ: ಆರ್‌ಸಿಬಿ ಪಂದ್ಯ ವೇಳೆ ಪ್ರೇಮ ನಿವೇದನೆ ಮಾಡಿದ ರಾಜ್ ಹಾಗೂ ಹಿತಾ ಜೋಡಿ ಮಾತನಾಡಿ, ''ಆರ್‌ಸಿಬಿ ಬಸ್‌ನಲ್ಲಿ ನಮ್ಮನ್ನು ನೋಡಲು ಉತ್ಸುಕರಾಗಿದ್ದೇವೆ. ನಾವು ತಂಡವನ್ನ ನಮ್ಮ ಹೃದಯದಿಂದ ಹುರಿದುಂಬಿಸಿದೆವು ಮತ್ತು ಈಗ ನಾವು ಅವರ ಪ್ರಯಾಣದ ಭಾಗವಾಗಿದ್ದೇವೆ ಎಂದರು.
ಪದವಿ ಪ್ರದಾನ ವೇಳೆ ಆರ್‌ಸಿಬಿ ಜೆರ್ಸಿ ಪ್ರದರ್ಶಿಸಿದ ಅಭಿಮಾನಿ ಲಿಕಿತಾ ಸುಗ್ಗಲ ಮಾತನಾಡಿ "ನಾನು ನನ್ನ ಪದವಿ ಪ್ರದಾನ ಸಮಾರಂಭದಲ್ಲಿ ಜೆರ್ಸಿಯನ್ನು ಹೊತ್ತೊಯ್ದಾಗ ಸಾಕಷ್ಟು ಟೀಕೆಗಳು ಬಂದವು.
ಜೆರ್ಸಿ ಬದಲಿಗೆ ನನ್ನ ಹೆತ್ತವರ ಫೋಟೋವನ್ನು ಕೊಂಡೊಯ್ಯಬೇಕಿತ್ತು ಎಂದು ಹೇಳಿದರು. ಆದರೆ ನನಗೆ ಈಗ ಪದವಿ ಇದೆ, ಕೆಲಸವಿದೆ ಮತ್ತು ನನ್ನ ಅತ್ಯಂತ ಪ್ರೀತಿಯ ಕ್ರೀಡಾ ಫ್ರಾಂಚೈಸಿ ನನ್ನನ್ನು ಬೆಂಬಲಿಸುತ್ತಿದೆ. ನನ್ನ ತಾಯಿ ಕೂಡ ಸಂತೋಷಪಟ್ಟಿದ್ದಾರೆ ಎಂದರು.
ಈ ವರ್ಷದ ಪ್ರಮುಖ ದೃಶ್ಯಗಳು ನಮ್ಮ ಅಭಿಮಾನಿಗಳ ಸಮುದಾಯಕ್ಕೆ ಹೃತ್ಪೂರ್ವಕ ಗೌರವವಾಗಿದೆ, ಅವರ ಅಚಲ ಬೆಂಬಲವು ನಮ್ಮ ಪ್ರಯಾಣದಲ್ಲಿ ಅವಿಭಾಜ್ಯವಾಗಿದೆ ಎಂದು ಆರ್‌ಸಿಬಿಯ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ರಾಜೇಶ್ ಮೆನನ್ ತಿಳಿಸಿದ್ದಾರೆ. ಕ್ರಿಕೆಟ್ ವಲಯದಲ್ಲಿ ಅತ್ಯಂತ ಉತ್ಸಾಹಭರಿತ ಮತ್ತು ನಿಷ್ಠಾವಂತ ಅಭಿಮಾನಿಗಳನ್ನ ಹೊಂದಿರುವುದರ ಕುರಿತು ಆರ್‌ಸಿಬಿ ಹೆಮ್ಮೆಪಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕನ್ನಡಿಗನಿಗಾಗಿ ಗಂಭೀರ್-ಅಗರ್ಕರ್ ನಡುವೆ ಭಾರೀ ಜಟಾಪಟಿ; ಏನಾಯ್ತು?