ಪ್ಯಾರಿಸ್ (ಫ್ರಾನ್ಸ್):ಭಾರತದ ಸ್ಟಾರ್ ಶಟ್ಲರ್ ಪಿ.ವಿ ಸಿಂಧು ಮಹಿಳೆಯರ ವೈಯಕ್ತಿಕ ಪೂಲ್ ಎಂ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಎರಡನೇ ಗೆಲುವು ಸಾಧಿಸಿದ್ದಾರೆ. ಬುಧವಾರ ನಡೆದ ಇಸ್ಟೋನಿಯಾ ವಿರುದ್ಧದ ಪಂದ್ಯದಲ್ಲಿ ಕ್ರಿಸ್ಟಿನ್ ಕುಬಾ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಪಿವಿ ಸಿಂಧು 16ನೇ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
ಪಂದ್ಯದ ಆರಂಭದಿಂದಲೂ ಎದುರಾಳಿ ವಿರುದ್ಧ ಪ್ರಾಬಲ್ಯ ಸಾಧಿಸಿದ ಭಾರತದ ಶಟ್ಲರ್ ಮೊದಲ ಸೆಟ್ ಅನ್ನು 21-5 ಅಂತರದಿಂದ ಗೆದ್ದುಕೊಂಡರು. ಈಸ್ಟೋನಿಯಾದ ಕುಬಾ, ಸಿಂಧು ಅವರ ಬ್ಯಾಕ್‌ಹ್ಯಾಂಡ್ ಹೊಡೆತಗಳನ್ನು ಎದುರಿಸಲು ಹೆಣಗಾಡಿದರು.
ಸಿಂಧು ಕ್ಯೂಬಾ ವಿರುದ್ಧದ ತನ್ನ ಪಂದ್ಯದಲ್ಲಿ ಪ್ರಬಲ ಆರಂಭವನ್ನು ಮಾಡಿದರು, ಮೊದಲ ಮೂರು ಅಂಕಗಳನ್ನು ಗೆದ್ದಬೇಗನೆ ಮುನ್ನಡೆ ಸಾಧಿಸಿದರು. ನಂತರ ಎಸ್ಟೋನಿಯನ್ ಆಟಗಾರ್ತಿಗೆ ಕೆಲವು ಅಂಕಗಳನ್ನು ಬಿಟ್ಟುಕೊಟ್ಟರೂ ಸಿಂಧು ಹಿಡಿತ ಕಾಯ್ದುಕೊಂಡರು. ಕ್ಯೂಬಾ ಡ್ರೈವ್ ಶಾಟ್‌ಗೆ ಪ್ರಯತ್ನಿಸಿ ಅಂಕವನ್ನುಗಳಿಸಿದರು. ಆದರೇ ಸಿಂಧು ವಿರುದ್ಧ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಮುಂದಿನ ಸುತ್ತಿನಲ್ಲೂ ಸಿಂಧು ತಮ್ಮ ಪ್ರಾಬಲ್ಯವನ್ನು ಮುಂದುವರೆಸಿ ಸ್ಕೋರ ಅನ್ನು 18-3ಕ್ಕೆ ಕೊಂಡೊಯ್ದರು, ಅಂತಿಮವಾಗಿ, ಸಿಂಧು ಗೇಮ್ 21-5 ಸ್ಕೋರ್‌ನೊಂದಿಗೆ ಮೊದಲ ಸೆಟ್ನಲ್ಲಿ ಗೆದ್ದರು.
ಎರಡನೇ ಸುತ್ತಿನ ಆರಂಭದಲ್ಲಿ 2-2 ಅಂತರದಿಂದ ಸಮಬಲ ಸಾಧಿಸಿದ ಕುಬಾ ಅವರು ಬಳಿಕ ಸಿಂಧು ಅವರ ಪ್ರಬಲ ಸ್ಮ್ಯಾಷ್‌ಗಳು ಎದುರಾಳಿಗೆ ಅಂಕಗಳಿಸಲು ಬಿಡಲಿಲ್ಲ. ಸಿಂಧು ಅವರ ವೇಗವನ್ನು ಸರಿಗಟ್ಟಲು ಕುಬಾ ಪ್ರಯಾಸಪಟ್ಟು ತಪ್ಪು ಹೊಡೆತಗಳನ್ನು ದಾಖಲಿಸಿ ಅಂಕಗಳನ್ನು ಬಿಟ್ಟುಕೊಟ್ಟರು. ತೀಕ್ಷ್ಣವಾದ ಸ್ಮ್ಯಾಷ್‌ಗಳ ಮೂಲಕ ಎದುರಾಳಿಗೆ ಪ್ರಾಬಲ್ಯ ಪೈಪೋಟಿ ನೀಡಿ 15-6 ಅಂತರದಿಂದ ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ ಎರಡನೇ ಸುತ್ತಿನಲ್ಲಿ 21-10 ನೇರ ಸೆಟ್‌ಗಳಿಂದ ಕುಬಾ ವಿರುದ್ಧ ತಮ್ಮ ಗೆಲುವನ್ನು ಖಚಿತಪಡಿಸಿದರು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ್ದಾರೆ.
ಇದಕ್ಕೂ ಮೊದಲು ಭಾನುವಾರದಂದು ನಡೆದಿದ್ದ ಪಂದ್ಯದಲ್ಲಿ ಮಾಲ್ಡೀವ್ಸ್ ಆಟಗಾರ್ತಿ ಫಾತಿಮತ್ ನಬಾಹ್ ಅಬ್ದುಲ್ ರಜಾಕ್ ಅವರನ್ನು 21-9, 21-6 ನೇರ ಸೆಟ್‌ಗಳಿಂದ ಮಣಿಸಿದ್ದರು.
ಸಿಂದು ಈ ಹಿಂದೆ 2018ರ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ, 2019ರಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ, 2022ರಲ್ಲಿ ಏಷ್ಯನ ಚಾಂಪಿಯನ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅಲ್ಲದೇ ಒಲಿಂಪಿಕ್ನಲ್ಲಿ ಭಾರತಕ್ಕೆ ಬೆಳ್ಳಿ ಮತ್ತು ಕಂಚಿನ ಪದಕ ತಂದುಕೊಟ್ಟಿದ್ದು, ಈ ಬಾರಿ ಚಿನ್ನದ ಪದಕ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ಆರ್ಚರಿ, ಬಾಕ್ಸಿಂಗ್ನಲ್ಲಿ ಭಾರತಕ್ಕೆ ಹಿನ್ನಡೆ; ಬೊಮ್ಮದೇವರ, ಪ್ರೀತಿ, ಜಾಸ್ಮಿನ್ ಒಲಿಂಪಿಕ್ಸ್ನಿಂದ ಔಟ್ - Paris Olympics